whatsapp facebooktwitter

ಮಾಸ್ಕ ಧರಿಸಿ, ಕರೋನಾ ತಡೆಗಟ್ಟಿ : ನ್ಯಾ. ಎಸ್.ಜಿ. ಸಲಗರೆ

ಮಾಸ್ಕ ಧರಿಸಿ, ಕರೋನಾ ತಡೆಗಟ್ಟಿ : ನ್ಯಾ. ಎಸ್.ಜಿ. ಸಲಗರೆ

21-11-2020 07:51 PM

ಗದಗ ೨೧: ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ವಚ್ಛತೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು, ಅಂಗಡಿಯ ಮಾಲಿಕರು, ಪೆಟ್ರೋಲ್ ಬಂಕ್ ಕೆಲಸಗಾರರು, ಆಟೋ ಚಾಲಕರು ಹಾಗೂ ಇತರೆ ವಾಹನಗಳ ಚಾಲಕರು ಕಡ್ಡಾಯವಾಗಿ ಮಾಸ್ಕ ಬಳಸಿ ಇತರರಿಗೂ ಮಾಸ್ಕ ಬಳಸಲು ತಿಳಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಜಿ. ಸಲಗೆರೆ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು

Advertise

ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಗದಗ ಇವರ ಆಶ್ರಯದಲ್ಲಿ ಮುಳಗುಂದ ನಾಕಾದಲ್ಲಿ (ದಿ.೨೦ ರಂದು) ಜರುಗಿದ ಮಾಸ್ಕ ವಿತರಣೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಸ್ಕ ವಿತರಣೆ ಸಂದರ್ಭದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶರರಾದ ಎ.ಎಮ್.ಬಡಿಗೇರ, ೧ನೇ ಜೆ.ಎಮ್.ಎಫ್.ಸಿ ದಿವಾಣಿ ನ್ಯಾಯಾಧೀಶರಾದ ಮಹಾದೇವಪ್ಪ .ಎಚ್. ಹಾಗೂ ೨ನೇ ಜೆ.ಎಮ್.ಎಫ್.ಸಿ ದಿವಾಣಿ ನ್ಯಾಯಾಧೀಶರಾದ ರವೀಂದ್ರ ಶ್ರೀಕಾಂತ ಹಾಗೂ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ. ಜಕ್ಕಲಿ, ಆರೋಗ್ಯ ಇಲಾಖೆಯ ಉಮೇಶ ಕರಮುಡಿ, ಗೀತಾ ಕಾಂಬಳೆ, ಪುಷ್ಪಾ ಇವರು ಸಾರ್ವಜನಿಕರಿಗೆ ಮಾಸ್ಕ ವಿತರಸಿ ಕೋವಿಡ್-೧೯ ರ ಸಾಂಕ್ರಾಮಿಕ ರೋಗದ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಿದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos