whatsapp facebooktwitter

ಕೋವಿಡ್-೧೯ ಸೋಂಕಿಗೆ ಲಸಿಕೆ ಬರುವವರೆಗೂ ಜಾಗೃತರಾಗಿರಿ : ಸಚಿವ ಸಿ.ಸಿ.ಪಾಟೀಲ

ಕೋವಿಡ್-೧೯ ಸೋಂಕಿಗೆ ಲಸಿಕೆ ಬರುವವರೆಗೂ ಜಾಗೃತರಾಗಿರಿ : ಸಚಿವ ಸಿ.ಸಿ.ಪಾಟೀಲ

21-11-2020 07:52 PM

ನರಗುಂದ.೨೧ : ಮಹಾಮಾರಿ ಕೋವಿಡ್-೧೯ ಸೋಂಕಿಗೆ ಲಸಿಕೆ ಬರುವವರೆಗೆ ಸಾರ್ವಜನಿಕರು ಜಾಗೃತರಾಗಿ ಇರಬೇಕು. ನಿರಂತರ ಮಾಸ್ಕ ಧರಿಸುವಕೆ ಮರೆಯಬಾರದು. ನಮ್ಮ ಮಾಸ್ಕ ನನ್ನ ಲಸಿಕೆ ಎಂದು ಅರಿತು ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಹೇಳಿದರು.
ಗದಗ ಜಿಲ್ಲೆಯ ನರಗುಂದ ಪುರಸಭೆ ಆವರಣದಲ್ಲಿ ಕೋವಿಡ್-೧೯ ಸೋಂಕು ಹರಡುವಿಕೆ ತಡೆಗಟ್ಟುವ ಕುರಿತು ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಶನಿವಾರ ಏರ್ಪಡಿಸಲಾದ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ರಮದ ಬೃಹತ್ ಎಲ್.ಇ.ಡಿ. ವಾಹನಕ್ಕೆ ಸಚಿವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಕೋರೊನಾ ಸೋಂಕು ನಿಯಂತ್ರಿಸುವಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಜಿಲ್ಲಾಡಳಿತ ತಾಲ್ಲೂಕಾಡಳಿತ ಸಫಲವಾಗಿವೆ. ಸೋಂಕಿಗೆ ಸೂಕ್ತ ಲಸಿಕೆ ಬರುವವರೆಗೂ ಸಹ ಕೊರೋನಾದಿಂದ ಮುಕ್ತಿ ಸಿಕ್ಕಿದೆ ಎಂದು ಬಾವಿಸದೇ, ಎಲ್ಲರೂ ನಿರಂತರ ಮಾಸ್ಕ ಧರಿಸಿ, ಸಾರ್ವಜನಿಕವಾಗಿ ಹೊರಗಡೆ ಬಂದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗಾಗ್ಗೆ ಸೋಪಿನಿಂದ ಸ್ವಚ್ಚವಾಗಿ ಕೈಕಾಲುಗಳನ್ನು ತೋಳೆದುಕೊಳ್ಳಬೇಕು, ಹಾಗೂ ವಯಕ್ತಿಕ, ಸಾಮಾಜಿಕ

Advertise

ಸುಚ್ಚಿತ್ವದೇಡೆಗೆ ಎಲ್ಲರು ಗಮನ ಹರಿಸಬೇಕು ಎಂದರು.
ಗುಜರಾತ ರಾಜ್ಯದಲ್ಲಿ ಸೋಂಕು ಅಧಿಕವಾಗುತ್ತಿರುವುದರಿಂದ ಪುನಃ ರಾತ್ರಿ ಕರ್ಪ್ಯು ವಿಧೀಸಿದ್ದಾರೆ. ಹಾಗೂ ದೆಹಲಿಯಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಆಧಿಕವಾಗುತ್ತಿರುವುದನ್ನು ಎಲ್ಲರು ಗಮನಿಸಿ, ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲಿದೇ. ಎಲ್ಲರೂ ಸಾಮಾಜಿಕ ಸ್ವಾಸ್ಥ ಕಾಪಾಡುವುದರೋಂದಿಗೆ ಕುಟುಂಬ ಹಾಗೂ ವಯಕ್ತಿಕ ಆರೋಗ್ಯದೆಡೆಗೆ ನಿಗಾವಹಿಸಬೇಕು ಎಂದು ಸಚಿವ ಸಿ.ಸಿ. ಪಾಟೀಲ ಅವರು ನುಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಬಿ ಮಡ್ಲೂರ ಮಾಹಿತಿ ನೀಡುತ್ತಾ, ಕೋವಿಡ್-೧೯ ಸೋಂಕು ನಿಯಂತ್ರಣ ಕುರಿತ ಎರಡು ವಿಶೇಷ ಎಲ್.ಇ.ಡಿ. ಜಾಗೃತಿ ಪ್ರಚಾರ ವಾಹನಗಳು ಜಿಲ್ಲೆಯ ೭ ತಾಲೂಕುಗಳ ಆಯ್ದ ೧೮೦ ಗ್ರಾಮಗಳಲ್ಲಿ ಪ್ರತಿದಿನ ೧೦ ಗ್ರಾಮಗಳಂತೆ ನವೆಂಬರ್ ೧೪ ರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ೭೦ ಗ್ರಾಮಗಳಲ್ಲಿ ಕೋರೋನಾ ಸೋಂಕು ನಿಯಂತ್ರಣ ಕುರಿತು ಜಾಗೃತಿಯನ್ನು ಎಲ್.ಇ.ಡಿ. ಬೃಹತ್ ಪರದೆಯ ವಿಡಿಯೋ ಮುಲಕ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನರಗುಂದ ಪುರಸಭೆ ಅಧ್ಯಕ್ಷೆ ಶ್ರೀಮತಿ ಭಾವನಾ ಪಾಟೀಲ, ಉಪಾದ್ಯಕ್ಷ ಪ್ರಶಾಂತ ಜೋಷಿ, ತಹಶೀಲ್ದಾರ ಪ್ರಶಾಂತ, ಎಂ.ಎಸ್.ಪಾಟೀಲ, ಅಜ್ಜಪ್ಪ ಸೇರಿದಂತೆ ಹಲವರು ಹಾಜರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos