whatsapp facebooktwitter

ಭಾರತಕ್ಕೆ ಬೇಕು ವಿಶ್ವಸಂಸ್ಥೆಯ ಶಾಶ್ವತ ಸ್ಥಾನಮಾನ

ಭಾರತಕ್ಕೆ ಬೇಕು ವಿಶ್ವಸಂಸ್ಥೆಯ ಶಾಶ್ವತ ಸ್ಥಾನಮಾನ

21-11-2020 07:56 PM

ವಿಶ್ವಸಂಸ್ಥೆಯ ಶಾಶ್ವತ ಸ್ಥಾನಮಾನ
ಪಡೆದುಕೊಳ್ಳುವುದು ಭಾರತದ ಮಹತ್ತರ ಉದ್ದೇಶವಾಗಿದೆ.
ಎಲ್ಲ ರೀತಿಯ ಅರ್ಹತೆಗಳನ್ನು ಭಾರತ ಪಡೆದುಕೊಂಡಿದ್ದರೂ
ಶಾಶ್ವತ ಸ್ಥಾನ ಪಡೆದ ಬೇರೆ ದೇಶಗಳಿಗೆ ಹೋಲಿಸಿದಾಗ ನಮ್ಮ
ದೇಶವು ಆದೇಶಗಳಿಗಿಂತಲೂ ಉತ್ತಮವಾದ ಅನುಭವ, ಅರ್ಹತೆ
ಹೊಂದಿದ್ದರೂ ಶಾಶ್ವತ ಸದಸ್ಯತ್ವಕ್ಕಾಗಿ ತಪಸ್ಸು ಮಾಡುತ್ತಲೇ
ಇದೆ.
ವಿಶ್ವಸಂಸ್ಥೆ ಸ್ಥಾಪಿಸಿ ೭೦ ವರ್ಷಗಳಾಗಿವೆ. ಈ ಅವಧಿಯಲ್ಲಿ ಸೂಪರ್
ಪವರ್ ದೇಶಗಳು ಅವುಗಳ ಪ್ರಾಬಲ್ಯ, ಪ್ರಾಧಾನ್ಯತೆ
ಕಳೆದುಕೊಂಡಿವೆ. ಪ್ರಪಂಚದ ಜನಸಂಖ್ಯೆಯಲ್ಲಿ ೨ನೇ ಸ್ಥಾನ
ವಹಿಸಿದ ಭಾರತ ತನ್ನ ಆರ್ಥಿಕತೆಯಲ್ಲಿ ಹಿಡಿತ ಸಾಧಿಸಿ ಮುನ್ನುಗ್ಗುತ್ತಾ,
ಅಂತರರಾಷ್ಟಿçÃಯ ಮಟ್ಟದಲ್ಲಿ ತನ್ನ ಸ್ಥಾನ
ಗಟ್ಟಿಗೊಳಿಸಿಕೊಳ್ಳುತ್ತಿದೆ. ಜನರ ದೈನಂದಿನ ಜೀವನಕ್ಕೆ ಆತಂಕ
ಸೃಷ್ಟಿಸುವ ಉಗ್ರವಾದದಿಂದ ವಾತಾವರಣದಲ್ಲಿ ಮಾರ್ಪಾಡುಗಳಿಂದ,
ವಿಶ್ವದೇಶಗಳ ಅಭಿವೃದ್ಧಿಗೆ ಆತಂಕಮಾಡುತ್ತಿವೆ. ಇಷ್ಟಾದರೂ
ವಿಶ್ವಸಂಸ್ಥೆ ಮುಖ್ಯವಾದ ತಿದ್ದುಪಡಿಗಳನ್ನು ಮಾಡಿ ಭಾರತವನ್ನು
ವಿಶ್ವಸಂಸ್ಥೆಯ ಸದಸ್ಯತ್ವ ನೀಡಲು ಮೀನಮೇಷ ಎನ್ನುತ್ತಿದೆ.
ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡುವ ವಿಷಯವಾಗಿ
ವಿಶ್ವಸಂಸ್ಥೆಯ ೭೫ನೇ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ
ಮೋದಿಯವರು ಈ ವಿಷಯ ಪ್ರಸ್ತಾಪಿಸಿದ್ದಾರೆ.
ಇದೇ ವಿಷಯವನ್ನು ಪ್ರಸ್ತಾಪಿಸಿ, ವಿಶ್ವಸಂಸ್ಥೆಯ ಹಲವು
ಪ್ರತಿನಿಧಿಗಳು ಭಾರತಕ್ಕೆ ಸದಸ್ಯತ್ವ ಕಲ್ಪಿಸಲು ಕೋರಿರುತ್ತಾರೆ.
ತನ್ನ ಪ್ರಾಥಮಿಕ ಸೂತ್ರಗಳಿಗೆ ಬದ್ದರಾಗಿರಬೇಕೆಂದು ಡಿಮಾಂಡ್
ಮಾಡುವ ಹಕ್ಕು, ಪ್ರಪಂಚದಲ್ಲೇ ಅತಿ ದೊಡ್ಡ ದೇಶವಾಗಿರುವ
ಭಾರತಕ್ಕೆ ಇದೆ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ.
ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ಮಹಿಳೆಯರಿಗೆ, ಪುರುಷರಿಗೆ ಹಾಗೂ
ಚಿಕ್ಕ ಮತ್ತು ದೊಡ್ಡ ದೇಶಗಳಿಗೆ ಸಮಾನಹಕ್ಕು
ಗಳಿಸುವುದನ್ನು ಅದರ ಪೀಠಿಕೆಯಲ್ಲಿ ವಿವರಿಸಲಾಗಿದೆ. ಈ
ಚಾರ್ಟರ್‌ನಲ್ಲಿಯ ೨ನೇ ಅಧಿನಿಯಮದಂತೆ ಇದರ ಸದಸ್ಯ ದೇಶಗಳ
ಸಾರ್ವಭೌಮಾಧಿಕಾರವು ಸಮಾನತೆಯ ಆಧಾರದ ಮೇಲೆಯೇ
ಕಾರ್ಯನಿರ್ವಹಿಸಬೇಕೆಂದು ಹೇಳಿದೆ. ಹಾಗಾದರೆ, ಜಗತ್ತಿನಜನಸಂಖ್ಯೆಯಲ್ಲಿ ೨ನೇ ಅತಿ ದೊಡ್ಡದೇಶವಾಗಿ ಹೊರಹೊಮ್ಮಿದ
ಭಾರತದಂತಾ ದೇಶಕ್ಕೆ ಈ ಮಂಡಳಿಯಲ್ಲಿ ಸದಸ್ಯತ್ವ
ಇಲ್ಲವೆಂದಮೇಲೆ ಸಮಾನತ್ವದ ಭಾವನೆಯು ಹೇಗೆ
ಜಾರಿಯಾದಂತಾಗಿದೆ?
ಭಾರತದಲ್ಲಿಯ ೨೮ ರಾಜ್ಯಗಳಲ್ಲಿಯ ಒಂದು ರಾಜ್ಯದ
ಜನಸಂಖ್ಯೆಯಷ್ಟೇ ಇರುವ ಐರೋಪದಲ್ಲಿಯ ಬ್ರಿಟನ್ (೬.೭ ಕೋಟಿ
ಜನಸಂಖ್ಯೆ), ಪ್ರಾನ್ಸ್ (೬.೫ ಕೋಟಿ) ಈ ದೇಶಗಳಿಗೆ

Advertise

ಸದಸ್ಯತ್ವ ಇದ್ದು,
ನಮ್ಮ ದೇಶದಂತಹ ದೊಡ್ಡ ದೇಶಗಳಿಗೆ ಸದಸ್ಯತ್ವ
ಇಲ್ಲದಿರುವುದು ಆಶ್ಚರ್ಯವಾಗುತ್ತಿದೆ. ಅಲ್ಲದೇ ಇದೆಂತಾ ನಿಯಮ
ಎಂದು ಪ್ರಶ್ನಿಸುವಂತೆ ಮಾಡುತ್ತಿದೆ. ಇದು ಸಮಾನತೆ
ಹೇಗಾಗುತ್ತೆ ಹೇಳಿ.
ಇನ್ನೊಂದು ಉದಾಹರಣೆ ಕೊಡಬೇಕಾದರೆ, ವಿಶ್ವಸಂಸ್ಥೆಯ
೧೦೮, ೧೦೯ ಅಧಿಸೂಚನೆಗಳೇ ಪ್ರಜಾಸತ್ತೆಗೆ ವಿರೋಧವಾಗಿದೆ.
ವಿಶ್ವಸಂಸ್ಥೆಯ ಸದಸ್ಯರಲ್ಲಿ ೨/೩ ರಷ್ಟು ದೇಶಗಳು
ಚಾರ್ಟರ್‌ನಲ್ಲಿಯ ಯಾವುದೇ ತಿದ್ದುಪಡಿಗಳಿಗೆ ಒಪ್ಪಿಗೆ ಸೂಚಿಸಿದ್ದರೂ,
ಶಾಶ್ವತ ಸದಸ್ಯತ್ವ ಹೊಂದಿದೆ. ೫ ದೇಶಗಳಲ್ಲಿ ಯಾವ ಒಂದು
ದೇಶವಾದರೂ ತನ್ನ ವಿಟೋ ಶಕ್ತಿ ಯಿಂದ ಈ ತಿದ್ದುಪಡಿಗೆ
ವಿರೋಧ ವ್ಯಕ್ತಪಡಿಸಿದಲ್ಲಿ, ಅದು ಜಾರಿಯಾಗದು.
ಇದನ್ನು ಪ್ರಜಾಪ್ರಭುತ್ವ ಪ್ರಕ್ರಿಯೆ ಎನ್ನಲು ಸಾಧ್ಯವೇ
ಎನ್ನುವುದನ್ನು ಎಲ್ಲರೂ ಆಲೋಚಿಸಬೇಕಾಗಿದೆ. ಇಂಥಹ ಪ್ರತ್ಯೇಕ
ವಿಟೋ ಅಧಿಕಾರವು ಶಾಶ್ವತ ಸಭ್ಯ ದೇಶಗಳು ರಾಜಕೀಯ
ಮಾಡಲು ಅವಕಾಶ ಕಲ್ಪಿಸುತ್ತಿವೆ, ಅಲ್ಲದೆ ತಿದ್ದುಪಡಿಗಳನ್ನು ಮಾಡಿ
ಜಾರಿಮಾಡಲು ಸಾಧ್ಯವಾಗದಂತೆ ಮಾಡುತ್ತಿವೆ. ಭಾರತ, ಬ್ರೆಜಿಲ್, ಜಪಾನ್,
ಜರ್ಮನಿ ದೇಶಗಳು, ಜಿ-೪ ದೇಶಗಳಾಗಿ ಒಗ್ಗಟ್ಟಾಗಿ
ವಿಶ್ವಸಂಸ್ಥೆಯಲ್ಲಿ ಸದಸ್ಯತ್ವಕ್ಕಾಗಿ ಹೋರಾಟ ನಡೆಸುತ್ತಲೇ ಇವೆ.
ಆದರೂ ಎನೂ ಪ್ರಯೋಜನವಾಗಿಲ್ಲ. ಏಳು ದಶಾಬ್ದಿಗಳ ಹಿಂದೆ
ನೂರಾರು ವರ್ಷಗಳ ಪರಕೀಯ ಪಾಲನೆಯ ಪ್ರಭಾವದಿಂದ,
ಆರ್ಥಿಕವಾಗಿ ಜರ್ಜರಿತವಾದ ಭಾರತ ತನ್ನ ಸ್ವಂತ ಅಭಿವೃದ್ದಿಯನ್ನು
ಎಲ್ಲಾ ರಂಗಗಳಲ್ಲಿ ನೆರವೇರಿಸುವ ಆದ್ಯ ಕರ್ತವ್ಯದಿಂದ,
ವಿಶ್ವಸಂಸ್ಥೆಯಲ್ಲಿ ತನ್ನ ಸದಸ್ಯತ್ವಕ್ಕಾಗಿ ಹಕ್ಕು
ಪ್ರತಿಪಾದಿಸಲಾಗಲಿಲ್ಲ.
ಈಗಿನ ಪರಿಸ್ಥಿತಿ ತುಂಬಾ ಬದಲಾಗಿದೆ. ಇದುವರೆಗೆ ಆಗಿರುವ
ಅಭಿವೃದ್ದಿ, ಆಶಾವಾದ, ಆತ್ಮವಿಶ್ವಾಸ, ರಕ್ಷಣಾ ಕ್ಷೇತ್ರದಲ್ಲಿ ಬಲಿಷ್ಠತೆ,
ಆತ್ಮನಿರ್ಭರತೆಯಿಂದ ಕೂಡಿದ ಬಲಿಷ್ಠ ಭಾರತವನ್ನು ಈಗ ಎಲ್ಲಾ
ದೇಶಗಳು ಗುರ್ತಿಸಿವೆ. ನಮ್ಮ ದೇಶದ ಪ್ರಪಂಚದ ಇತರೆ
ಯಾವ ದೇಶಗಳಿಗೇನೂ ಕಡಿಮೆ ಇಲ್ಲ. ಈಗ ವಿಶ್ವಸಂಸ್ಥೆಯ
ಶಾಶ್ವತ ಸದಸ್ಯತ್ವ ಪಡೆಯಲು ಎಲ್ಲಾ ಅರ್ಹತೆ ಇದೆ. ಅದನ್ನು ಪಡೆಯಲು ಹೋರಾಟ ನಿಲ್ಲದು. ೨೦೨೨ ರಲ್ಲಿ ಭಾರತವು ತನ್ನ ೭೫ನೇ
ಸ್ವಾತಂತ್ರೊö್ಯತ್ಸವÀನ್ನು ಆಚರಿಸಲಿದ್ದು, ಆ ಸಮಯದೊಳಗೆ
ನಮ್ಮ ಹೆಮ್ಮಯ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ
ಸಿಗಲಿದೆ ಎಂಬುದಾಗಿ ಆಶಿಸೋಣ.
ಎಸ್.ಎಲ್. ಶ್ರೀಧರಮೂರ್ತಿ,
ನಿವೃತ್ತ ಸಹಾಯಕ ಆಡಳಿತ ಅಧಿಕಾರಿ,
ಪೊಲೀಸ್ ಇಲಾಖೆ,
# ೩೧, ೨ನೇ ಮುಖ್ಯ ರಸ್ತೆ,
ಗುರುರಾಜ ಲೇಔಟ್,
ಬೆಂಗಳೂರು-೫೬೦ ೦೨೮
ಮೊ: ೯೬೩೨೪ ೫೩೪೮೩

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಬೈಕ್ ಕಳ್ಳರ ಬಂಧನ

ಯರಗಟ್ಟಿ : ಬೈಕ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಮುರಗೋಡ ಪೋಲಿಸರು ಬಂಧಿಸಿದ್ದು ಆರು (6) ಬೈಕ್ ವಶಪಡಿಸಿಕೊಂಡಿದ್ದಾರೆ.
ಯರಗಟ್ಟಿ ನಗರ ಮತ್ತು ಹಲವು...

Read More

28-11-2020 08:38 PM

ಪರಿತ್ಯಕ್ತ ಗಂಡು ಮಗು ರಕ್ಷಣೆ

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು ಪರಿತ್ಯಕ್ತ ಗಂಡು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು...

Read More

28-11-2020 08:37 PM

ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಧ್ಯತೆ ನೀಡಿ : ಸುಂದರೇಶ ಬಾಬು

ಗದಗ ೨೮ : ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆಧ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ....

Read More

28-11-2020 08:25 PM

ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಗಂಭೀರ

ಜೈಪುರ : ಕೊರೋನಾ ಸೋಂಕಿನಿಂದ ಬಳಲುತ್ತಿರುವ ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೊರೊನಾದಿಂದ ಪೈಲಟ್...

Read More

28-11-2020 08:09 PM

ಕುರುಬ ಸಮುದಾಯ ಎಸ್‍ಟಿಗೆ ಸೇರಿಸಬೇಕು ಇಲ್ಲದೇ ಹೋದ್ರೆ ಉಗ್ರ ಹೋರಾಟ : ನಿರಂಜನಾನಂದಪುರಿ ಸ್ವಾಮೀಜಿ

ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ...

Read More

28-11-2020 07:57 PM

Read More
×E-Paperಸಾಹಿತ್ಯGeneralVideos