whatsapp facebooktwitter

ಸರಳತೆಯಲ್ಲಿ ಅಸಮಾನ್ಯತೆ ಕಂಡ ವಾರ್ತಾಧಿಕಾರಿ ವೆಂಕಟೇಶ ನವಲೆ

ಸರಳತೆಯಲ್ಲಿ ಅಸಮಾನ್ಯತೆ ಕಂಡ ವಾರ್ತಾಧಿಕಾರಿ ವೆಂಕಟೇಶ ನವಲೆ

31-07-2020 02:13 PM

( ೩೧-೭-೨೦೨೦ ರಂದು ಸೇವಾ ನಿವೃತ್ತಿ ನಿಮಿತ್ಯ ಲೇಖನ)
ಸ್ವಾಗತಕಾರರಾಗಿ (ರೆಸಿಪ್ಷಪನಿಸ್ಟ್ ) ಗ್ರಂಥಪಾಲಕರಾಗಿ ಸರಕಾರಿ ಸೇವೆ ಆರಂಭಿಸಿದ ವೆಂಕಟೇಶ ವಿ. ನವಲೆಯವರು ಬಡ್ತಿ ಪಡೆದು ವಾರ್ತಾ ಸಹಾಯಕರು ನಂತರ ಪ್ರಭಾರ ವಾರ್ತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.ತಮ್ಮ ಕಚೇರಿಗೆ ಬಂದವರು ಹಿರಿ ಕಿರಿಯರೆನ್ನದೇ ಪ್ರತಿಯೊಬ್ಬರನ್ನೂ ಸ್ವಾಗತಿಸುವ ಗುಣ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಾಗಿದ್ದಾಗಲೂ ಕರಗತ ಮಾಡಿಕೊಂಡಿದ್ದರು. ಆರಂಭದಲ್ಲಿ ಸ್ವಾಗತಕಾರರಾಗಿ ಶುಭಾರಂಭಗೊAಡ ಇವರ ಸೇವೆ, ಸೇವಾವಧಿವರೆಗೂ ಅದೇ ಪರಂಪರೆ ಮುಂದುವರೆಸಿಕೊAಡಿದ್ದು ಅವರ ಹುಟ್ಟುಗುಣ ಎನಿಸುತ್ತದೆ.
ಕಚೇರಿಯಲ್ಲಿ ಅವರು ಕೂಡ್ರುವ ಸ್ಥಳ ಸಿಂಪಲ್, ತೊಡುವ ಬಟ್ಟೆ ಸಿಂಪಲ್, ಸ್ವಭಾವ ಸಿಂಫಲ್, ಮಾತುಗಳೂ ಸಿಂಪಲ್ ಇವು ಅವರ ಸಿಂಪಲ್ ಬದುಕಿನ ಕೆಲವೇ ಶ್ಯಾಂಪಲ್‌ಗಳು ಮಾತ್ರ. ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಗೂ ಸಿಂಪಲ್‌ದಲ್ಲಿಯೇ ಸೇವಾ ಅವಧಿ ಪೂರ್ಣಗೊಳಿಸಿದ ವೆಂಕಟೇಶ ನವಲೆ ಅವರದು ಅಪರೂಪದ ವ್ಯಕ್ತಿತ್ವ. ಜನರ ಮಧ್ಯದಲ್ಲಿದ್ದಾಗ ಇವರೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳೆಂದು ಗುರುತಿಸುವದು ಕೆಲವರಿಗೆ ಕಷ್ಟ ಅನಿಸಿತು ನಿಜ. ಆದರೆ ಇವರ ಸೌಜನ್ಯತೆ, ಪ್ರಾಮಾಣಿಕತೆ, ಸರಕಾರಿ ಸೇವೆ ಮೇಲಿದ್ದ ಗೌರವ ಇವುಗಳಿಂದ ಖಂಡಿತ ತಿಳಿದು ಬರುತ್ತಿತ್ತು ಅವರೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳೆಂದು.
ಪತ್ರಕರ್ತರೊಂದಿಗಿನ ಇವರ ಒಡನಾಟದಲ್ಲಿ ಪ್ರೀತಿ , ಸಹನೆ , ಕರುಣೆ, ಗೌರವ ಮತ್ತು ಸಹಕಾರ ಎಂಬೈದು ಶಬ್ದಗಳು ಇವರ ಸೇವಾ ಅವಧಿಯಲ್ಲಿ ಮಂತ್ರಗಳಾಗಿ ರೂಪುಗೊಂಡಿದ್ದು ನವಲೆ ಅವರ ನಿಜ ಬದುಕಿಗೆ ಸಾಕ್ಷಿಯಾದವು. ಸರಳತೆಯಲ್ಲಿ ಅಸಮಾನ್ಯತೆ ಕಂಡ ಇವರ ಸೇವಾ ಅವಧಿ ನಿಜಕ್ಕೂ ಅಪರೂಪ ಎಂದೆನಿಸುತ್ತದೆ. ಮೂವತ್ತಾರು ವರ್ಷಗಳ ಇವರ ಸೇವಾ ಅವಧಿಯಲ್ಲಿ ವಿಶೇಷ ಅರ್ಥ ಅಡಗಿತ್ತು ಎಂಬ ಭಾವ ಬರುತ್ತದೆ. ಮೂವತ್ತಾರೆಂದರೆ ಇದೊಂದು ವಿಮುಖವಾಗಿರುವ ಸಂಖ್ಯೆ, ಸರಕಾರಿ ಸೇವೆಯಲ್ಲಿದ್ದಾಗ ಕೌಟುಂಬಿಕ ಜೀವನದಿಂದ ವಿಮುಖರಾಗಿ ಸದಾ ಸರಕಾರಿ ಕೆಲಸದತ್ತ ಮುಖ ಮಾಡಿದರೆಂಬ ಗೂಡಾರ್ಥ ಅವರ ಮೂವತ್ತಾರು ವರ್ಷದ

ಸೇವೆಯಲ್ಲಿ ಅಡಗಿತ್ತು ಎಂದು ಖುಷಿ ಅನಿಸುತ್ತದೆ.
ನಿಗರ್ವಿಗಳೂ , ಸರಳಸಜ್ಜನಿಕೆಯುಳ್ಳವರು ಆದ ನವಲೆ ಅವರದು ನಿರಾಡಂಬರ ಜೀವನ .ಆಡಂಬರದಿAದ ಸಂಪೂರ್ಣ ದೂರ ಉಳಿದು ಸೇವೆಯನ್ನು ಸದಾ ಸಮೀಪದಿಂದ ಕಂಡವರು. ಇವರ ೩೬ ವರ್ಷಗಳ ಸೇವಾ ಪಯಣದಲ್ಲಿ ಸಿಬ್ಬಂದಿಗಳೆಲ್ಲರನ್ನೂ ಸಂಬAಧಿಯAತೆ ಕಂಡವರು. ಅಧಿಕಾರಿಗಳೆಂದರೆ ಖಾರವಾಗಿ ಮಾತನಾಡುವರಲ್ಲ ಎಂಬುದನ್ನು ಸಾಬೀತು ಪಡಿಸಿದರು. ಪತ್ರಕರ್ತರೊಂದಿಗಿನ ಇವರ ಸಂಬAಧ ನಿಜಕ್ಕೂ ಪ್ರಶಂಸನಾರ್ಹ. ಪ್ರತಿಯೊಬ್ಬ ಅಧಿಕಾರಿಗಳ ಪ್ರೀತಿಯನ್ನು ಸಂಪಾದನೆ ಮಾಡುವುದು ಇವರ ಸೇವಾ ಅವಧಿಯ ವಿಶೇಷತೆಯಾಗಿತ್ತು.
೧೯೮೪ ರಲ್ಲಿ ದೆಹಲಿಯ ಕರ್ನಾಟಕ ಭವನದ ಇನ್‌ಫಾರ್ಮೇಶನ್ ಸೆಂಟರ್‌ದಲ್ಲಿ ಸ್ವಾಗತಕಾರರು/ ಗ್ರಂಥಪಾಲಕರಾಗಿ ಇವರ ಸೇವೆ ಶುಭಾರಂಭಗೊAಡಿತ್ತು. ೧೯೯೧ ರಲ್ಲಿ ಕಾರವಾರದಲ್ಲಿ ಅನಂತರ ೧೯೯೪ರಿಂದ ಧಾರವಾಡದಲ್ಲಿ ಆಮೇಲೆ ೧೯೯೬ ರಿಂದ ಹುಬ್ಬಳ್ಳಿಯಲ್ಲಿ ನಂತರ ೨೦೧೩ ರಿಂದ ಪ್ರಭಾರ ವಾರ್ತಾ ಅಧಿಕಾರಿಗಳಾಗಿ ಗದಗದಲ್ಲಿ ಹೀಗೆ ವಿವಿಧ ಹುದ್ದೆಯನ್ನ್ರು ಅಲಂಕರಿಸಿದರು. ದಿಲ್ಲಿಯಿಂದ ಹಳ್ಳಿಯವರೆಗೂ ಸೇವಾ ಅವಧಿಯಲ್ಲಿ ಸೈ ಎನಿಸಿಕೊಂಡ ನವಲೆ ಅವರದು ನಿಜಕ್ಕೂ ಸಾರ್ಥಕ ಬದುಕು. ಅದಕ್ಕೆಂದೇ ಅವರು ವರ್ಥ ಅಧಿಕಾರಿಗಳಾಗಿ ಪ್ರತಿಯೊಬ್ಬರ ದೃಷ್ಟಿಯಲ್ಲಿ ಕಾಣಿಸಿಕೊಂಡರು.
ವಿಠ್ಠಲ ಅಕ್ಕುಬಾಯಿ ದಂಪತಿಗಳ ಉದರದಲ್ಲಿ ೬-೭-೧೯೬೦ ರಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಜನ್ಮ ತಾಳಿದರು. ಸವದತ್ತಿ ಸಮೀಪದ ಗುರ್ಲಹೊಸೂರು ಇವರ ಪೂರ್ವಜರ ವಾಸಸ್ಥಳ. ಬಿ.ಎ. ಪದವೀಧರರಾದ ವೆಂಕಟೇಶ ನವಲೆ ಅವರು ಮೂರು ದಶಕಕ್ಕಿಂತ ಹೆಚ್ಚು ಕಾಲ ಸರಕಾರಿ ಸೇವೆ ಮಾಡುವ ಯೋಗ ಪಡೆದುಕೊಂಡಿದ್ದರು. ಸೇವಾ ಅವಧಿಯ ನಿವೃತ್ತಿ ಅಂಚಿನಲ್ಲಿದ್ದಾಗ ವೀರನಾರಾಯಣನ ತಪೋಭೂಮಿ ಗದುಗಿನಲ್ಲಿ ೩೧-೭-೨೦೨೦ ರಂದು ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ಸಂಗತಿ. ವೆಂಕಟೇಶ ನವಲೆ ಅವರ ನಿವೃತ್ತಿ ಜೀವನ ಸದಾ ಸುಖಕರವಾಗಲೆಂದು ಸಮಸ್ತ ಪತ್ರಕರ್ತರ ಬಳಗದವರಿಂದ ಹಾಗೂ ಸಿಬ್ಬಂದಿ ಬಳಗದಿಂದ ಶುಭ ಹಾರೈಸುತ್ತೇನೆ.
ಐ.ಕೆ. ಕಮ್ಮಾರ, ಗದಗ
ಹಿರಿಯ ಪತ್ರಕರ್ತರು
ಮೊ: ೯೯೧೬೩೧೪೪೭೬


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos