whatsapp facebooktwitter

ಬೇವಿನ ಹಾಳ ಗ್ರಾಮ ಪಂಚಾಯಿತಿ :70 ಲಕ್ಷ ರೂ. ಭ್ರಷ್ಟಾಚಾರ ಆರೋಪ

ಬೇವಿನ ಹಾಳ ಗ್ರಾಮ ಪಂಚಾಯಿತಿ :70 ಲಕ್ಷ ರೂ. ಭ್ರಷ್ಟಾಚಾರ ಆರೋಪ

31-07-2020 02:38 PM

ಗಂಗಾವತಿ ಜುಲೈ : .ಕಾರಟಗಿ ತಾಲೂಕಿನ ಬೇವಿನ ಹಾಳು ಗ್ರಾಮ ಪಂಚಾಯತಿಯಲ್ಲಿ 2015ರಿಂದ 2019ನೇ ಸಾಲಿನ ಆರ್ಥಿಕ ವರ್ಷದಲ್ಲಿ 14ನೇ ಹಣಕಾಸು ಆಯೋಗದಲ್ಲಿ ಅನುದಾನವನ್ನು ಪಿ.ಡಿ.ಒ ಹಾಗೂ ಅಧ್ಯಕ್ಷರು ದುರುಪಯೋಗ ಮಾಡಿಕೊಂಡಿದ್ದಾರೆ ಸರ್ಕಾರಕ್ಕೆ ಭ್ರಷ್ಟಾಚಾರ ಎಸಗಿರುವುದು ಎಂದು ನಾಗನಕಲ್ ನಾಗರಾಜ್ ಸದಸ್ಯರು ಬೇವಿನಾಳ ಗ್ರಾಮ ಪಂಚಾಯಿತಿ ಇವರು ಲೋಕಾಯುಕ್ತರಿಗೆ ದೂರು ಕೊಟ್ಟರು ಇವತ್ತಿಗೂ ಯಾವುದೇ ಅಧಿಕಾರಿಗಳು ಬಂದು ಕ್ರಮಕೈಗೊಂಡಿಲ್ಲ ಎಂದು ನಾಗನಕಲ್ ನಾಗರಾಜ್ ಆರೋಪ ಮಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಾರ್ವಜನಿಕರು ಕಾಮಗಾರಿ ಕೆಲಸ ನಿರ್ವಹಿಸಿದ್ದು ಬಿ.ಓ.ಸಿ ಟ್ರ್ಯಾಕ್ಟರ್ ಬಾಡಿಗೆ ಮಾಲೀಕರಿಗೆ ಹಣ ತಲುಪಿರುವುದಿಲ್ಲ ಎಂದು ಆರೋಪ ಮಾಡಿದರು 70 ಲಕ್ಷ ರೂಪಾಯಿಗಳನ್ನು ಸದಸ್ಯರು ಗಮನಕ್ಕೆ ಬರದೇ ಪಂಚಾಯಿತಿ ಅಭಿವೃದ್ಧಿ ಹೆಸರಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಸರ್ಕಾರದ ಹಣ ಲೂಟಿ ಅಪಾರ ಪ್ರಮಾಣದಲ್ಲಿ ಸ್ವಂತಕ್ಕೆಬಳಸಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಸರ್ಕಾರಕ್ಕೆ ವಿಶ್ವಾಸದ್ರೋಹ ಎಸಗಿದ್ದಾರೆ 14ನೇ ಹಣಕಾಸು ಆಯೋಗದ ಮಾರ್ಗಸೂಚಿಗಳನ್ವಯ ಅನುದಾನ ಬಳಸುವ ಪೂರ್ವದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದು ಸಾಮಾನ್ಯಸಭೆಯಲ್ಲಿ ಠರಾವು ಪಾಸು ಮಾಡಿಕೊಂಡು ನಂತರ ಕ್ರಿಯೆ ಯೋಜನೆ ರೂಪಿಸುವುದು ಖರ್ಚು ಮಾಡುವುದಾಗಲಿ ಮಾಡಬೇಕು ಆದರೆ 2015-16 ಹಾಗೂ 2016-17 ನೇ ಸಾಲಿನ 14 ನೇ ಹಣಕಾಸು ಆಯೋಗದ ಅನುದಾನ 30 ಲಕ್ಷ ರೂಪಾಯಿಗಳು 2017-18 ನೇ ಸಾಲಿನ 20 ಲಕ್ಷ ರೂಪಾಯಿಗಳು 2018 -19 ನೇ ಸಾಲಿನ ಸುಮಾರು 20 ಲಕ್ಷ ರೂಪಾಯಿಗಳು

ಸುಮಾರು 70 ಲಕ್ಷ ರೂಪಾಯಿಗಳನ್ನು ಸದಸ್ಯರು ಗಮನಕ್ಕೆ ಬರದೇ ಪಂಚಾಯಿತಿ ಅಭಿವೃದ್ಧಿ ಹೆಸರಲ್ಲಿ ಬೋಗಸ್ ಬಿಲ್ಲು ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ .
ಇದಲ್ಲದೆ ಬೇರೆ ಕಾಮಗಾರಿಗಳು ಚೆಕ್ಕಡ್ಯಾo ಮಾಡದೆ ಬೋಗಸ್ ಬಿಲ್ ಸೃಷ್ಟಿಸಿ ಹಣ ವಂಚನೆ... ಬೇವಿನಾಳ ಗ್ರಾಮದ ಸರ್ವೆ ನಂಬರ್ 17 ರಲ್ಲಿ ಚೆಕ್ ಡ್ಯಾo ನಿರ್ಮಾಣ 6 ಲಕ್ಷ ರೂ. ಬೇವಿನ ಹಾಳ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಭಿವೃದ್ಧಿ 2 ಲಕ್ಷ ರೂ. ಬೇವಿನ ಹಾಳ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿ ಬೆಲಸಿ ಟ್ರೀ ಗಾರ್ಡ್ ಹಾಕುವುದು 1 ಲಕ್ಷ ರೂ. ನಾಗನಕಲ್ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ 4 ಲಕ್ಷ ರೂ. ಪನ್ನಪುರ ಗ್ರಾಮದ ಹತ್ತಿರ ಚೆಕ್ ಡ್ಯಾo ನಿರ್ಮಾಣ 6 ಲಕ್ಷ ರೂ. ಬೇವಿನಾಳ ಗ್ರಾಮದ ಹತ್ತಿರ ಚೆಕ್ ಡ್ಯಾo ನಿರ್ಮಾಣ 6 ಲಕ್ಷ ರೂ. ಮೈಲಾಪುರ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ 7 ಲಕ್ಷ ರೂ. ಪನ್ನಪುರ ಗ್ರಾಮದಲ್ಲಿ ಮುಖ್ಯ ರಸ್ತೆ ಬದಿ ಕಣ ನಿರ್ಮಾಣ 3.10 ಲಕ್ಷ ರೂ . 5 ಲಕ್ಷ ರೂ ಗಾಂಧಿ ಪುರಸ್ಕಾರ ಖಾತೆಗೆ ವರ್ಗಾವಣೆ ಮಾಡಿಕೊಂಡು ಎತ್ತು ವಾಲಿ ಮಾಡಿದ್ದಾರೆ ಇವೆಲ್ಲಾ ಕಾಮಗಾರಿ ಮಾಡಲಾರದೆ 1 ಕೋಟಿ ಅಧಿಕ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ಲೂಟಿ ಮಾಡಿರುವ ಇತ್ತೀಚಿಗೆ ಬೆಳಕಿಗೆ ಬಂದಿದೆ.. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪಂಚಾಯತ್ ರಾಜ್ ಇಂಜಿನಿಯರಿಂಗ್ ಗಂಗಾವತಿ ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಯಾಕೆ? ಇದರಲ್ಲಿ ಅಧಿಕಾರಿಗಳ ಅವರ ಪಾಲು ಇದೆಯಾ? ಜನರ ಆರೋಪ. ಶರಣಪ್ಪ ಕರಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ರಮೇಶ್ ಹನುಮಂತಪ್ಪ ಆದನಗೌಡ. P ಮಾನಪ್ಪ ವೀರಭದ್ರ ರಾವ್ ಲಂಬಾಡಿ ಬಾಲಪ್ಪ ಆರೋಪ ಮಾಡಿದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos