whatsapp facebooktwitter

ಸೈಕಲ್ ಸವಾರಿ ಪಿ.ಎಸ್.ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್ !

ಸೈಕಲ್ ಸವಾರಿ ಪಿ.ಎಸ್.ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್ !

31-07-2020 05:34 PM

ಮೂಡಲಗಿ : ಎಷ್ಟೋ ಮಂದಿ ದೊಡ್ಡ ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು, ಮರಿ, ಕಿರಿ ರಾಜಕಾರಣಿಗಳು ತಮ್ಮ ವಾಹನ(ಕಾರ, ಜೀಪ್, ಇತ್ಯಾದಿ)ಗಳು ಸುಸ್ಥಿತಿಯಲ್ಲಿ ಇಲ್ಲದಾಗ ಅಥವಾ ಚಾಲಕರು ಇಲ್ಲದಿದ್ದಾಗ ಅಂದಿನ ಕರ್ತವ್ಯದ ಸಂಚಾರವನ್ನೆ ರದ್ದುಗೊಳಿಸಿದ ಅಥವಾ ಮುಂದೂಡುವ ಇಂತಹ ಸಮಯದಲ್ಲಿ ಇಲ್ಲೊಬ್ಬರು ನಿಷ್ಟಾವಂತ ಪೋಲಿಸ್ ಅಧಿಕಾರಿ ಪ್ರತಿನಿತ್ಯ ಮುಂಜಾನೆ ಸೈಕಲ್ ಸವಾರಿ ಮಾಡುತ್ತಾ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಒಮ್ಮೊಮ್ಮೆ ಠಾಣೆ ವ್ಯಾಪ್ತಿಯ 30-40 ಕಿಲೋಮೀಟರ್ ಸೈಕಲ್ ಸವಾರಿಯ ವಿಕ್ಷಣೆಯ (ಪೆಟ್ರೋಲಿಂಗ)ಉದಾಹರಣೆಗಳಿವೆ ಎಂದರೆ ನೀವು ನಂಬದೆ ಇರಬಹುದು...ಹೌದು! ಅವರೆ ಮೂಡಲಗಿ ಪೋಲಿಸ್ ಠಾಣೆಯ ಯುವ ಪಿ.ಎಸ್.ಐ ಮಲ್ಲಿಕಾರ್ಜುನ ಸಿಂಧೂರ ಎಂದು ಹೇಳಬೇಕಾಗುತ್ತದೆ. ಮಲ್ಲಿಕಾರ್ಜುನ ಸಿಂದೂರ ಅವರು ಆರಕ್ಷಕರಿಗೆ ರಕ್ಷಣೆಯ ಸಹಾಯ ಹಸ್ತ ಚಾಚುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಕಳೆದ ಹತ್ತು ತಿಂಗಳಿಂದ ಸಾಮಾನ್ಯ ಜನತೆ ಕರೆಗೆ ಓಗೋಟ್ಟು ಸ್ಪಂದಿಸುತ್ತಿರುವರು ಪಿ.ಎಸ್.ಐ ಅವರು ಕೊರೋನಾ ಲಾಕ್‍ಡೌನ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಶ್ರದ್ಧತೆಯಿಂದ ನಿರ್ವಹಿಸಿದ್ದಾರೆ ಠಾಣೆಯಲ್ಲಿ ಇದ್ದಾಗಾಗಲಿ ಅಥವಾ ಸಂಚಾರದಲ್ಲಿದ್ದಾಗ ಯಾವುದೇ ವ್ಯಕ್ತಿ ಫೋನ್ ಮಾಡಿದರು ಅಥವಾ ಭೇಟಿಯಾದಾಗ ನಮಸ್ಕಾರ ಹೇಳಿದರೆ ಪ್ರತಿಯಾಗಿ ಸ್ಫಂದಿಸಿ ನಮಸ್ಕಾರ ಹೇಳುವ ದೊಡ್ಡ ಗುಣ. ದರ್ಪದ

ಪೋಲಿಸ್ ಇಲಾಖೆಯಲ್ಲಿರುವವರು ಅಪರೂಪ ಆದರೆ ಇದಕ್ಕೆ ಮಲ್ಲಿಕಾರ್ಜುನ ಸಿಂದೂರ ಅಪವಾದವಾಗಿದ್ದಾರೆ. ಆರೋಪಿಗಳನ್ನು ಮೊದಲು ಸಹನೆಯಿಂದ ಮಾತನಾಡಿಸಿ ನಂತರ ಬಾಯಿ ಬಿಡದೇ ಇದ್ದಾಗ ನಂತರ ಪೋಲಿಸ್ ಭಾಷೆಯಿಂದ ಅಪರಾಧ ಪತ್ತೆ ಮಾಡುತ್ತಾರೆ. ಶೇ.90ರಷ್ಟು ಖಾಸಗಿ,ಸಾರ್ವಜನಿಕ ಸಭೆ ಸಮಾರಂಭಗಳಿಗೆ ಆವ್ಹಾನಿಸುವ ಅಭಿಮಾನಿಗಳನ್ನು ಹೊಂದಿರುವ ಇವರ ಜನಪ್ರೀಯತೆ ಎಷ್ಟು ಎಂಬುವುದು ತಿಳಿಯಿತ್ತದೆ.ಇವರ ಸೈಕಲ್ ಸವಾರಿ ಗಮನಿಸಿದರೆ ಹಳೆಯ ಚೂರಿ ಚಿಕ್ಕಣ್ಣ ಸಿನೇಮಾದ ಹಾಡು ‘ಸೈಕಲ್ ಮೇಲೆ ಬಂದ ನಮ್ಮ ಹೀರೋ’ ಹಾಡು ನೆನಪಾಗುತ್ತದೆ.ಇಂತಹ ಜನಪ್ರೀಯ ಅಧಿಕಾರಿಯ ಸೇವೆ ನಮ್ಮ ಭಾಗದಲ್ಲಿ ಇನ್ನೂ ಹೆಚ್ಚು ಬೇಕಾಗಿದೆ.ಆದರೆ ಸರಕಾರವು ಉತ್ತಮ ಸೇವೆ ಸಲ್ಲಿಸಿದ ಸಿಂಧೂರ ಅವರಿಗೆ ಮುಂಬಡ್ತಿ ಕೊಡುತ್ತಿರುವುದರಿಂದ ದಕ್ಷ ಅಧಿಕಾರಿಗೆ ಸರಕಾರ ನೀಡುತ್ತಿರುವ ಮಾನ್ಯತೆಯಿಂದ ನಮಗೆಲ್ಲ ಹೆಮ್ಮೆ ಒಂದು ಕಡೆಯಾದರೆ ಇಂತಹ ಅಧಿಕಾರಿಯ ಸೇವೆಯಿಂದ ಶೀಘ್ರ ವಂಚಿತರಾಗುತ್ತಿದ್ದೇವೆ ಎಂಬ ದು:ಖ ಇನ್ನೊಂದು ಕಡೆಯಾಗಿದೆ.ಈ ಸಂದರ್ಭದಲ್ಲಿ ಒಬ್ಬ ಅಧಿಕಾರಿ ಎಷ್ಟು ದಿವಸ ಇಲ್ಲಿ ಇದ್ದ ಎನ್ನುವುದಕ್ಕಿಂತ ಹೇಗೆ ಸೇವೆ ಸಲ್ಲಿಸಿದ ಎಂಬುದು ಮುಖ್ಯವಾಗುತ್ತದೆ.ಇಲಿಯಂತೆ ನೂರು ವರ್ಷ ಬದುವುದಕ್ಕಿಂತ ಹುಲಿಯಂತೆ ಮೂರೆ ದಿವಸ ಬದುಕಬೇಕು ಎಂಬಂತೆ ಮಲ್ಲಿಕಾರ್ಜುನ ಸಿಂಧೂರ, ಸಿಂಧೂರ ಲಕ್ಷ್ಮಣನಂತೆ ಹುಲಿಯಾಗಿ ಈ ಭಾಗದ ಸಾಮಾನ್ಯ ಜನರ ಹೃದಯದಲ್ಲಿ ನೆಲೆಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos