whatsapp facebooktwitter

ಖಾಸಗಿ ಆಸ್ಪತ್ರೆಗಳು ಶೇ.೫೦ ರಷ್ಟು ಹಾಸಿಗೆ ಕೋವಿಡ್‌ಗೆ ಮಿಸಲಿಡಿ : ಡಿ.ಸಿ

ಖಾಸಗಿ ಆಸ್ಪತ್ರೆಗಳು ಶೇ.೫೦ ರಷ್ಟು ಹಾಸಿಗೆ ಕೋವಿಡ್‌ಗೆ ಮಿಸಲಿಡಿ : ಡಿ.ಸಿ

31-07-2020 05:37 PM

ಕೊಪ್ಪಳ, ಜು.೩೧: ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ.೫೦ ರಷ್ಟು ಹಾಸಿಗೆಯನ್ನು ಕೋವಿಡ್ ಚಿಕಿತ್ಸೆಗಾಗಿ ಮಿಸಲಿಡಬೇಕು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಖಾಸಗಿ ವೈದ್ಯಕೀಯ ಸಂಸ್ಥೆಗಳು ಆಗಸ್ಟ್. ೦೨ ರಾತ್ರಿ ೮ ಗಂಟೆಯ ಒಳಗಾಗಿ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ.೫೦ ರಷ್ಟು ಕೋವಿಡ್ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸಬೇಕು. ಮತ್ತು ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟಿçÃಯ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಕಲಂ ೩೦, ೩೩, ಹಾಗೂ ೩೪ ರಡಿಯ ಆದೇಶ ಹೋರಡಿಸಲಾಗಿದೆ.
ಖಾಸಗಿ ವೈದ್ಯಕೀಯ ಸಂಸ್ಥೆಗಳು;
ಕೊಪ್ಪಳದ ಸಿಟಿ ಹಾಸ್ಪಿಟಲ್, ಗೋವನಕೊಪ್ ನರ್ಸಿಂಗ್ ಹೋಮ್, ಮಂಗಳ ನರ್ಸಿಂಗ್ ಹೋಮ್, ಜಿ.ಎಸ್.ಆರ್ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್, ಖುಷಿ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್ ಮತ್ತು ಗಂಗಾವತಿ ತಾಲ್ಲೂಕಿನ ಶ್ರುಶ್ರೂಷ ನರ್ಸಿಂಗ್ ಹೋಮ್, ವಿವೇಕಾನಂದ

ಹಾಸ್ಪಿಟಲ್, ವಾಸವಿ ನರ್ಸಿಂಗ್ ಹೋಮ್, ತೇಜಸ್ವಿನಿ ಮಕ್ಕಳ ಆಸ್ಪತ್ರೆ, ಡಾ.ಚಂದ್ರಪ್ಪ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್, ಅಮರೇಶ್ವರ ಇ.ಎನ್.ಟಿ ಹಾಸ್ಪಿಟಲ್, ಯಶೋಧಾ ಆಸ್ಪತ್ರೆ, ವರಸಿದ್ದಿ ಹಾಸ್ಪಿಟಲ್, ಶ್ರಿ ಮಲ್ಲಿಕಾರ್ಜುನ್ ಆಸ್ಪತ್ರೆ, ನಿರ್ಮಲಾ ಹಾಸ್ಪಿಟಲ್, ಅಮರ್ ಹಾಸ್ಪಿಟಲ್, ಗಜಾನನ ಹಾಸ್ಪಿಟಲ್, ಅನ್ನಪೂರ್ಣ ಹಾಸ್ಪಿಟಲ್, ಸಂಜೀವಿನಿ ಹಾಸ್ಪಿಟಲ್, ಭಗೀರಥ ಹಾಸ್ಪಿಟಲ್, ಚನ್ನಬಸವ ನರ್ಸಿಂಗ್ ಹೋಂ, ಮಾರುತಿ ಕಣ್ಣು ಮತ್ತು ಹಲ್ಲಿನ ಆಸ್ಪತ್ರೆ, ನೇತ್ರಜ್ಯೋತಿ ಹಾಸ್ಪಿಟಲ್, ಆನಂದ ನರ್ಸಿಂಗ್ ಹೋಂ, ಶ್ರೀ ಸಿದ್ದೇಶ್ವರ ನರ್ಸಿಂಗ್ ಹೋಂ ಎಕ್ಸ್ರೇ ಕ್ಲೀನಿಕ್, ಶ್ರೀ ಲಕ್ಷಿö್ಮ ನರ್ಸಿಂಗ್ ಹೋಂ ಹಾಗೂ ವಿನಾಯಕ ನರ್ಸಿಂಗ್ ಹೋಂ, ಈ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ತಮ್ಮ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ.೫೦ ರಷ್ಟು ಹಾಸಿಗೆಯನ್ನು ಕೋವಿಡ್ ಚಿಕಿತ್ಸೆಗಾಗಿ ಮಿಸಲಿಡಬೇಕು. ಈ ಅಂಶವನ್ನು ಕಾಲಮಿತಿ ಒಳಗೆ ಅನುಪಾಲಿಸಿ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರದೇ, ಶೀಘ್ರವಾಗಿ ಕ್ರಮಕೈಗೊಳ್ಳದೇ ಇದ್ದಲ್ಲಿ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos