whatsapp facebooktwitter

ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಊಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ‌ ಸಂತಾಪ

ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಊಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ‌ ಸಂತಾಪ

31-07-2020 07:06 PM

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ಧವ್ವ ಮೇತ್ರಿ ಅವರು 95 ವರ್ಷಗಳ ಸುದೀರ್ಘ ಜೀವನ ನಡೆಸಿದ್ದರು‌.1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಇವರು ಅವಕಾಶ ನೀಡಿದ್ದರು ಎಂದು ಸಚಿವರು ಸ್ಮರಿಸಿಕೊಂಡಿದ್ದಾರೆ.
ಅಂಬೇಡ್ಕರ್ ಅವರಿಗೆ ಇವರೇ ಅಡಿಗೆ ಮಾಡಿ ಊಟ‌ ಬಡಿಸುತ್ತಿದ್ದರು. ಇದರಿಂದ ತೀವ್ರ

ಸಂತೋಷಗೊಂಡಿದ್ದ ಡಾ. ಅಂಬೇಡ್ಕರ್ ಅವರು, ನಿಮ್ಮಂಥಹಾ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜದಲ್ಲಿ ಬೆಳೆಯಬೇಕೆಂಬ ಸಲಹೆ ಮನ್ನಿಸಿ ತೀವ್ರ ಪ್ರಭಾವಿತಳಾಗಿದ್ದ ಸಿದ್ಧವ್ವ, ಜೀವಿತ ಅವಧಿಯಲ್ಲಿ ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ‌ ಸ್ಮರಿಸಿಕೊಂಡಿದ್ದಾರೆ.
ಇವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಇವರ ಕುಟುಂಬದ ಸದಸ್ಯರಿಗೆ ಮತ್ತು ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿದ್ದ ಇವರ ತಂಡದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ‌ ರಮೇಶ್ ಜಾರಕಿಹೊಳಿ‌ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos