whatsapp facebooktwitter

kpsc ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

kpsc ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಅರ್ಜಿ ಆಹ್ವಾನ

31-07-2020 07:18 PM

ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್‌ ಬಿ ಮತ್ತು ಗ್ರೂಪ್‌ ಸಿ ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದ್ದು, ಅಧಿಸೂಚನೆಯ ವಿವರಗಳು ಈ ಕೆಳಗಿನಂತಿವೆ.
ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್‌ ಬಿ ಸಹಾಯಕ ಇಂಜಿನಿಯರ್‌ ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದ 600 ಹುದ್ದೆಗಳು ಮತ್ತು ಹೈದೆರಾಬಾದ್‌ ಕರ್ನಾಟಕ ವೃಂದದ 60 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗ್ರೂಪ್ ಸಿ ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದ 325 ಹುದ್ದೆಗಳು ಮತ್ತು ಹೈದೆರಾಬಾದ್‌ ಕರ್ನಾಟಕ ವೃಂದದ 05 ಹುದ್ದೆಗಳು ಖಾಲಿ ಇವೆ.
ಗ್ರೂಪ್ ಬಿ ಖಾಲಿ ಹುದ್ದೆಗಳ ವಿವರ
ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (ಗ್ರೇಡ್- 1)(ಸಿವಿಲ್) 660
ಗ್ರೂಪ್‌ ಸಿ ಹುದ್ದೆಗಳು
ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ (ಸಿವಿಲ್) 330
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ : 17-08-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-09-2020
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 18-09-2020
ರಾಷ್ಟ್ರೀಯ ಶಿಕ್ಷಣ ನೀತಿ 2020: ಉನ್ನತ ಶಿಕ್ಷಣದಲ್ಲಿ ಭರ್ಜರಿ ಬದಲಾವಣೆ
ಅರ್ಜಿ ಸಲ್ಲಿಕೆ ವಿಧಾನ
ಮೇಲಿನ ಹುದ್ದೆಗಳಿಗೆ ಆನ್‌ಲೈನ್‌ ಅಪ್ಲಿಕೇಶನ್‌ ಅನ್ನು ಮೂರು ಹಂತಗಳಲ್ಲಿ ಸಲ್ಲಿಸಬೇಕು.
ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್‌ ಮಾಡುವುದು.
ಎರಡನೇ ಹಂತ : ಅಪ್ಲಿಕೇಶನ್‌ ಸಲ್ಲಿಸುವುದು. (ಅಗತ್ಯ ಮಾಹಿತಿಗಳೊಂದಿಗೆ)
ಮೂರನೇ ಹಂತ : ಅರ್ಜಿ ಶುಲ್ಕವನ್ನು My Application Section ಮೂಲಕ ಸಲ್ಲಿಸುವುದು.
ಅರ್ಜಿ ಶುಲ್ಕ ಎಷ್ಟು :-
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.600.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50.
ಎಸ್‌ಸಿ /

ಎಸ್‌ಟಿ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸಿದಲ್ಲಿ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಒಂದೇ ಶುಲ್ಕವನ್ನು ಪಾವತಿಸಬೇಕು.
National Education Policy 2020: 5ನೇ ತರಗತಿ ವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣಕ್ಕೆ ಒತ್ತು
ಶೈಕ್ಷಣಿಕ ವಿದ್ಯಾರ್ಹತೆ:-
ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ಸಿ ಮತ್ತು ಬಿ ವೃಂದದ ಸಹಾಯಕ ಇಂಜಿನಿಯರ್‌ ಹುದ್ದೆಗಳಿಗೆ ಸಿವಿಲ್ ಇಂಜಿನಿಯರಿಂಗ್ ಪದವಿ ಪಾಸ್‌ ಮಾಡಿರಬೇಕು.
ಯುಪಿಎಸ್‌ಸಿ ಮೆಡಿಕಲ್‌ ಸರ್ವೀಸೆಸ್‌ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ: ಅರ್ಜಿ ಆಹ್ವಾನ
ವಯೋಮಿತಿ ಅರ್ಹತೆಗಳು:-
ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ತುಂಬಿರಬೇಕು. ಹಿಂದುಳಿದ ವರ್ಗಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅಧಿಸೂಚನೆ ಮತ್ತು ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ kpsc.kar.nic.in ಗೆ ಭೇಟಿ ನೀಡಿರಿ.
ಉದ್ಯೋಗ ವಿವರ:-
ಹುದ್ದೆಯ ಹೆಸರು PWD ಇಲಾಖೆಯಲ್ಲಿ ಗ್ರೂಪ್ ಬಿ ಮತ್ತಿ ಸಿ ಹುದ್ದೆಗಳ ನೇಮಕ
ವಿವರ ಕೆಪಿಎಸ್‌ಸಿಯು PWD ಇಲಾಖೆಯ ಸಹಾಯಕ ಇಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಪ್ರಕಟಣೆ ದಿನಾಂಕ 2020-07-30
ಕೊನೆ ದಿನಾಂಕ 2020-09-16
ಉದ್ಯೋಗ ವಿಧ :- ಪೂರ್ಣಾವಧಿ
ಉದ್ಯೋಗ ಕ್ಷೇತ್ರ :- ಸರ್ಕಾರಿ ಹುದ್ದೆ
ವೇತನ ವಿವರ :- ರೂ.ಗಳಲ್ಲಿ 30000 to 60000 /ತಿಂಗಳಿಗೆ
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ :- ಕೌಶಲ,
ವಿದ್ಯಾರ್ಹತೆ :- ಸಿವಿಲ್ ಇಂಜಿನಿಯರಿಂಗ್ ಪದವಿ
ಕಾರ್ಯಾನುಭವ :- 0 years
ನೇಮಕಾತಿ ಸಂಸ್ಥೆ ಸಂಸ್ಥೆಯ ಹೆಸರು :- ಕರ್ನಾಟಕ ಲೋಕಸೇವಾ ಆಯೋಗ
ವೆಬ್‌ಸೈಟ್‌ ವಿಳಾಸ :- http://www.kpsc.kar.nic.in/


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos