whatsapp facebooktwitter

ಸತ್ಯಂಪೇಟ ಮೇಲಿನ ಪ್ರಕರಣ ರದ್ದು ಪಡಿಸಲು ಬಸವ ಪರ ಸಂಘಟನೆಗಳ ಆಗ್ರಹ

ಸತ್ಯಂಪೇಟ ಮೇಲಿನ ಪ್ರಕರಣ ರದ್ದು ಪಡಿಸಲು ಬಸವ ಪರ ಸಂಘಟನೆಗಳ ಆಗ್ರಹ

31-07-2020 07:21 PM

ಬೆಳಗಾವಿ: ಕಲಬುರಗಿ ಜಿಲ್ಲೆಯ ಶಹಾಪೂರದ ಪತ್ರಕರ್ತ, ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲೆ ದಾಖಲಿಸಲಾದ ಪ್ರಕರಣವನ್ನು ತಕ್ಷಣ ರದ್ದು ಪಡಿಸುವಂತೆ ಆಗ್ಹಿಸಿ ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ಸೇನೆ ಹಾಗೂ ಬಸವಪರ ಸಂಘಟನೆಗಳು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿವೆ.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಅವರು, ನಾಡಿನ ಅನುಭವಿ ಪತ್ರಕರ್ತ, ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲೆ ದುರುದ್ದೇಶದಿಂದ ದಾವಣಗೇರೆ ಜಿಲ್ಲೆಯ ಹೊನ್ನಾಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಸ್ತುತ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಸತ್ಯಂಪೇಟ ಅವರು ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ನಾಡಿನಾದ್ಯಂತ ಬಸವ ತತ್ವಗಳ ಬಗ್ಗೆ ಹಾಗೂ ಮೂಢ ನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಲವಾರು ಅಧ್ಯಯನಪೂರ್ಣ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಸವ ಮಾರ್ಗ ಎಂಬ ವೆಬ್ ಮೂಲಕ ಶರಣರ ತತ್ವ ಪ್ರಚಾರ ಮಾಡುತಿದ್ದಾರೆ. ಲಕ್ಷಾಂತರ ಓದುಗರನ್ನು ಹೊಂದಿದ್ದಾರೆ. ತಮ್ಮ ವೈಚಾರಿಕ ಲೇಖನಗಳಿಂದಾಗಿ ಮೂಲಭೂತವಾದಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ದಾವಣಗೇರೆಯ ಹೊನ್ನಾಳಿಯ ಶ್ರೀವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಬಗ್ಗೆ ಸತ್ಯಂಪೇಟ ಅವರು ಬರೆದ ಸೈದ್ದಾಂತಿಕ ಭಿನ್ನಾಭಿಪ್ರಾಯದ

ಲೇಖನವನ್ನು ನೆಪವಾಗಿಟ್ಟುಕೊಂಡು ಪ್ರಕರಣ ದಾಖಲಿಸುವ ಮೂಲಕ ಸತ್ಯಂಪೇಟ ಅವರನ್ನು ಹಣೆಯುವ ಷಡ್ಯಂತ್ರ ರೂಪಿಸಲಾಗಿದೆ. ಟೀಕೆ-ಟಿಪ್ಪಣಿ-ಚರ್ಚೆಗಳು ಸಕರಾತ್ಮಕವಾಗಿರಬೇಕು.Áದರೆ, ಕೆಲವರು ದ್ವೇಷ ಸಾಧಿಸಲಿಕ್ಕೆ ಹೊರಟಿರುವುದು ಅಪಾಯದ ಮುನ್ಸೂಚನೆಯಾಗಿರುವದರಿಂದ ರಾಜ್ಯದ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಪ್ರಕರಣವನ್ನು ರದ್ದು ಪಡಿಸುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷ ಶಂಕರ ಗುಡಸ ಅವರು, ಕೆಲ ವರ್ಷಗಳ ಹಿಂದೆ, ಅಪ್ಪಟ ಬಸವ ಪ್ರೇಮಿಯಾಗಿದ್ದ ವಿಶ್ವರಾಧ್ಯ ಸತ್ಯಂಪೇಟ ಅವರ ತಂದೆ ಲಿಂಗಣ್ಣ ಸತ್ಯಂಪೇಟ ಅವರನ್ನು ಕಲಬುರಗಿಯಲ್ಲಿ ಕೊಲೆ ಮಾಡಲಾಗಿತ್ತು. ಸರಕಾಋ ಇಂದಿಗೂ ಆ ಕೊಲೆಗಡುಕರನ್ನು ಪತ್ತೆ ಹಚ್ಚಿಲ್ಲ. ಈಗ ವಿಶ್ವರಾಧ್ಯ ಸತ್ಯಂಪೇಟ ವಿರುದ್ಧ ಕೆಲವರು ಹಗೆ ಸಾಧಿಸಲು ಹೊರಟಿರುವದು ವೈಚಾರಿಕ ಚಿಂತನೆಯ ಹಾಗೂ ಲಿಂಗಾಯತ ಸಮಾಜವನ್ನು ಚಿಂತೆಗೀಡು ಮಾಡಿದೆ.
ತಕ್ಷಣ ಆ ಪ್ರಕರಣವನ್ನು ರದ್ದು ಪಡಿಸಬೇಕು. ಪ್ರಕರಣ ರದ್ದು ಪಡಿಸದಿದ್ದರೇ, ನಾಡಿನಾದ್ಯಂತ ಜಾಗತಿಕ ಲಿಂಗಾಯತ ಮಹಾಸಭೆ ಸೇರಿದಂತೆ ವಿವಿಧ ಸಂಘಟನೆಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಆನಂದ ಕರ್ಕಿ, ಬಸವ ಭೀಮ ಸೇನೆಯ ರಾಜ್ಯಾಧ್ಯಕ್ಷ ಆರ್.ಎಸ್.ದರ್ಗೆ, ಲಿಂಗಾಯತ ಸೇವಾ ಸಮಿತಿಯ ರಾಜು ಕುಂದಗೋಳ, ಸಿದ್ದರಾಮ ಸಾವಳಗಿ, ವಿ.ಕೆ.ಪಾಟೀಲ, ರಾಜಶ್ರೀ ದಯನ್ನವರ, ಶಿವಯೋಗಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos