whatsapp facebooktwitter

ಒಟ್ಟು 63,922 ಅನರ್ಹ ಪಡಿತರ ಕಾರ್ಡು,96,27,961/-ರೂ.ದಂಡ ವಸೂಲಿ

ಒಟ್ಟು 63,922 ಅನರ್ಹ ಪಡಿತರ ಕಾರ್ಡು,96,27,961/-ರೂ.ದಂಡ ವಸೂಲಿ

31-07-2020 08:53 PM

ಬೆಳಗಾವಿ : ರಾಜ್ಯದಲ್ಲಿ ಒಟ್ಟು 1ಕೋಟಿ 27 ಲಕ್ಷ ಪಡಿತರ ಕಾರ್ಡುಗಳು ಇದ್ದು ಇವುಗಳಲ್ಲಿ 63,922 ಕಾರ್ಡುಗಳನ್ನು ಅನರ್ಹ ಪಡಿತರ ಕಾರ್ಡುಗಳೆಂದು ಗುರುತಿಸಿ ರದ್ದು ಪಡಿಸಲಾಗಿದೆ. ಅಲ್ಲದೇ 43,138 ಕಾರ್ಡುಗಳನ್ನು ಬಿಪಿಎಲ್ ದಿಂದ ಎಪಿಎಲ್ ಗೆ ಪರಿವರ್ತಿಸಲಾಗಿದೆ. ಮತ್ತು ಅಕ್ರಮವಾಗಿ ಹೊಂದಿರುವ ಬಿಪಿಎಲ್ ಕಾರ್ಡುಗಳನ್ನು ವಾಪಸ್ಸು ಪಡೆಯುವಾಗ ಕಾರ್ಡುದಾರರಿಂದ ದಂಡದ ರೂಪದಲ್ಲಿ ಒಟ್ಟು 96,27,961/- ರೂ.ಗಳನ್ನು ಖಜಾನೆಗೆ ಪಾವತಿಸಿಕೊಳ್ಳಲಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಉತ್ತರ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಭೀಮಪ್ಪ ಗಡಾದ ಸರ್ಕಾರದ ಗಮನ ಸೆಳೆದಿದ್ದು, ಬೆಳಕಿಗೆ ಬಂದಿರುವದು.
ಬಡವರ ಪಡಿತರದ ಹಣ ವಸೂಲಿ ಮಾಡಿದ ಸರಕಾರ ಸಂಸದೀಯ ಕಾರ್ಯದರ್ಶಿಗಳ ವೇತನ ಭತ್ಯೆ ವಸೂಲಿಗೆ ಯಾಕೆ ಹಿಂದೇಟು ಹಾಕುತ್ತಿದೆ ? ಜನ ಸಾಮಾನ್ಯರಿಗೊಂದು ಕಾನೂನು ಜನಪ್ರತಿನಿಧಿಗಳಿಗೊಂದು ಕಾನೂನು ಅನರ್ಹ ಸಂಸದೀಯ ಕಾರ್ಯದರ್ಶಿ ಗಳ ವೇತನವನ್ನು ಹಿಂದೆ ಪಡೆಯಬೇಕು ಎಂದು ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ.
ಆಹಾರ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಬೆಂಗಳೂರ ನಗರ ಜಿಲ್ಲೆಯಲ್ಲಿ ಒಟ್ಟು 5,08,485 ಕಾರ್ಡುಗಳಿದ್ದು ಇವುಗಳಲ್ಲಿ ಅತೀ ಹೆಚ್ಚು ಅಂದರೆ 8,308 ಕಾರ್ಡುಗಳನ್ನು ಹಾಗೂ ಕೊಡಗು ಜಿಲ್ಲೆಯಲ್ಲಿ 1,09,940 ಕಾರ್ಡುಗಳಿದ್ದು ಇವುಗಳಲ್ಲಿ ಅತೀ ಕಡಿಮೆ ಎಂದರೆ 234 ಅಕ್ರಮ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ.
11,29,818 ಪಡಿತರ ಕಾರ್ಡುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು ಇದರಲ್ಲಿ 3097 ಕಾರ್ಡುಗಳನ್ನು ರದ್ದು ಪಡಿಸಲಾಗಿದ್ದು ಅಕ್ರಮ ಕಾರ್ಡುದಾರರಿಂದ 34,64,457/- ರೂ.ಗಳ ದಂಡ ವಸೂಲಿ ಮಾಡುವ ಮೂಲಕ ಇದರಲ್ಲಿಯೂ ರಾಜ್ಯಕ್ಕೆ ಪ್ರಥಮವೆಂಬ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿರುವದು
ಆದರೆ ಚಿಕ್ಕಬಳ್ಳಾಪೂರ, ಮೈಸೂರು, ರಾಯಚೂರ, ಕೊಪ್ಪಳ ಸೇರಿದಂತೆ 15 ಜಿಲ್ಲೆಗಳಲ್ಲಿ 17,173

ಕಾರ್ಡುಗಳನ್ನು ರದ್ದು ಪಡಿಸಿದ್ದರೂ ಕೂಡಾ ದಂಡದ ರೂಪದಲ್ಲಿ ಹಣ ಪಾವತಿಸಿಕೊಳ್ಳದೇ ಇರುವದು ಚರ್ಚೆಗೆ ಗ್ರಾಸವಾಗಿದೆ.
ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸರಕಾರದ ಯೋಜನೆಗಳನ್ನು ಪಡೆಯುವ ಸಲುವಾಗಿ ಸುಳ್ಳು ದಾಖಲೆಗಳನ್ನು ನೀಡಿ ತಾವು ತೆಗೆದುಕೊಂಡಿರುವ ಬಿಪಿಎಲ್ ಪಡಿತರ ಕಾರ್ಡುಗಳನ್ನು ಸರಕಾರದ ನಿರ್ದೇಶನದ ಮೇರೆಗೆ ಪ್ರಾಮಾಣಿಕವಾಗಿ ವಾಪಸ್ಸು ಮಾಡುತ್ತಿರುವ ಬಡ ಜನಸಾಮಾನ್ಯರಿಂದ ಕೋಟಿಗಟ್ಟಲೆ ಹಣವನ್ನು ದಂಡದ ರೂಪದಲ್ಲಿ ಪಾವತಿಸಿಕೊಂಡಿರುವ ಸರಕಾರವು ಸಂಸದೀಯ ಕಾರ್ಯದರ್ಶಿಗಳ ನೇಮಕವೇ ಅಸಿಂಧು ಎಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದರಿಂದ, ಆಗಿನ ಸಂಸದೀಯ ಕಾರ್ಯದರ್ಶಿಗಳು ತಮ್ಮ ಅಧಿಕಾರವದಿಯಲ್ಲಿ ವೇತನ, ಭತ್ಯೆಗಳ ರೂಪದಲ್ಲಿ ಸರಕಾರದಿಂದ ಪಾವತಿಸಿಕೊಂಡಿರುವ 3,67,71,716 /- ರೂ.ಗಳನ್ನು ಶಾಸಕರುಗಳಿಂದ ಸರಕಾರಕ್ಕೆ ಮರು ಪಾವತಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು 05 ತಿಂಗಳುಗಳು ಕಳೆದಿದ್ದರೂ ಕೂಡಾ ವಿಧಾನ ಸೌಧದಲ್ಲಿರುವ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಲು ಒಬ್ಬರ ಕಡೆ ಒಬ್ಬರು ಬೊಟ್ಟು ಮಾಡಿ ತೋರಿಸುತ್ತಿರುವುದನ್ನು ನೋಡಿದರೆ ಈಗಿರುವ ಸರಕಾರದಿಂದ ಜನಸಾಮಾನ್ಯರಿಗೊಂದು ಕಾನೂನು ಶಾಸಕರು/ ಸಚಿವರುಗಳಿಗೊಂದು ಕಾನೂನು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು ಎಂದಿದ್ದಾರೆ.
ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡುದಾರರಿಗೆ ಸರಕಾರದಿಂದ ನೀಡಲಾಗಿದ್ದ ಅಕ್ಕಿ ಹಾಗೂ ಇತರೆ ಧಾನ್ಯಗಳ ಲೆಕ್ಕ ಮಾಡಿ ಅವರಿಂದ ಮರಳಿ ಹಣ ಪಾವತಿಸಿಕೊಳ್ಳುತ್ತಿರುವ ಸರಕಾರವು ಸಂಸದೀಯ ಕಾರ್ಯದರ್ಶಿಗಳಿಗೆ ನೀಡಿರುವ ಕೋಟ್ಯಂತರ ರು.ಗಳ ವೇತನ ಭತ್ಯೆಗಳನ್ನು ಸರಕಾರಕ್ಕೆ ಮರು ಪಾವತಿಸಿಕೊಳ್ಳದೇ ಇದ್ದಲ್ಲಿ ಸರಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವದು ಎಂದು ಗಡಾದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗಾರ

ಯರಗಟ್ಟಿ : ಗುರುವಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು...

Read More

14-08-2020 09:47 PM

ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ಪತ್ರ ಚಳುವಳಿ

ಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ...

Read More

14-08-2020 09:44 PM

೨೦ ಕ್ಕೂ ಹೆಚ್ಚು ಸಂಶಯಾಸ್ಪದ ವ್ಯಕ್ತಿಗಳ ವಶಕ್ಕೆ ಪಡೆದು ಖಡಕ್ ಎಚ್ಚರಿಕೆ

ಕಾರವಾರ - ಬೆಂಗಳೂರಿನ ಡಿಜಿ ಹಳ್ಳಿ ಮತ್ತು,ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತ ಪುಂಡರು ದಾಳಿ ಮಾಡಿ ದಾಂಧಲೆ ಎಬ್ಬಿಸಿ ಉಂಟಾದ ಗಲಭೆಯಲ್ಲಿ ಮೂರು...

Read More

14-08-2020 09:43 PM

ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಡಾ. ಹರೀಶಕುಮಾರ. ಕೆ.

ಕಾರವಾರ : ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಹಾಗೂ ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ಪ್ರತಿಷ್ಠಾಪನೆಗೆ...

Read More

14-08-2020 09:41 PM

ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 ಜನರಿಗೆ ಸೊಂಕು

ಬೆಂಗಳೂರು :ಇಂದು ರಾಜ್ಯದಲ್ಲಿ 7908, ಬೆಂಗಳೂರು 2452, ಬಳ್ಳಾರಿ 608, ಬೆಳಗಾವಿ 334, ಕೊಪ್ಪಳ 162, ಗದಗ 190 , ಶಿವಮೊಗ್ಗ 413, ದಾವಣಗೆರೆ 351,, ಉಡುಪಿ 322, ದಕ್ಷಿಣ ಕನ್ನಡ 307,ಮೈಸೂರು 291,...

Read More

14-08-2020 09:37 PM

Read More
×E-Paperಸಾಹಿತ್ಯGeneralVideos