whatsapp facebooktwitter

ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಸರಕಾರ ಮುಂದಾಗಲಿ : ಸಚ್ಚೇಂದ್ರ ಲಂಬು

ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಸರಕಾರ ಮುಂದಾಗಲಿ : ಸಚ್ಚೇಂದ್ರ ಲಂಬು

01-08-2020 05:25 PM

ವಿಜಯಪುರ, : ಕರೋನಾ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅದೆಷ್ಟೋ ಪತ್ರಕರ್ತರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದೆಲ್ಲವನ್ನು ಗಮನಿಸಿ ಪತ್ರಕರ್ತರಿಗೆ ಸರಕಾರ ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಮುಂದಾಗಲಿ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಅದ್ಯಕ್ಷ ಸಚೇಂದ್ರ ಲಂಬು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ,ಭವಿಷ್ಯತ್ತಿನಲ್ಲಿ ಹೇಗೆ ?ಎಂಬ ಆತಂಕ ಪತ್ರಕರ್ತರ ಅಳಲಾಗಿದೆ ಎಂದು ಅವರು ಹೇಳಿದರು. ಕಾನಿಪ ಸಂಘದ ಜಿಲ್ಲಾ ಘಟಕದಿಂದ ಒಳ್ಳೆಯ ಕಾರ್ಯಚಟುವಟಿಕೆಗಳು ನಡೆಯಲು ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳ ಸಹಕಾರ ಅತೀ ಅವಶ್ಯವಾಗಿ ಬೇಕು. ಎಲ್ಲರೂ ಸೇರಿ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಸಂಘಟನೆಯನ್ನು ಬಲಪಡಿಸೋಣ ಎಂದು ಹೇಳಿದರು.ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟಿçÃಯ ಮಂಡಳಿ ಸದಸ್ಯ ರಾಜು ಕೊಂಡಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಕೋವಿಡ್-೧೯ ಭೀತಿಯ ಸಂದರ್ಭದಲ್ಲಿಯೂ ಕೊರೋನಾ ವಾರಿರ‍್ಸ್ಗಳಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದುದು. ಆದರೆ ಸರಕಾರದಿಂದ ಮಾತ್ರ ಪತ್ರಕರ್ತರಿಗೆ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ ಮಾತನಾಡುತ್ತಾ,ಸಮಾಜವನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾ ಸಂದರ್ಭದಲ್ಲಿಯೂ ಪತ್ರಕರ್ತರು ಪ್ರಾಣಾಪಾಯವನ್ನು ಲೆಕ್ಕಿಸದೇ ಜವಾಬ್ದಾರಿಯಿಂದ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರೇ ಇಂದು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಇಂಥ ಸಂದರ್ಭದಲ್ಲಿ ಸರಕಾರ ಅವರ

ನೆರವಿಗೆ ಬರಬೇಕಾದ ಅಗತ್ಯವಿದೆ.ಪತ್ರಕರ್ತರ ಸಂಕಷ್ಟಕ್ಕೆ ಸರಕಾರ ಸ್ಪಂದಿಸದಿರುವುದು ವಿಷಾದನೀಯ ಎಂದರು.
ಜಿಲ್ಲಾ ಕಾನಿಪ ಸಂಘದ ಉಪಾಧ್ಯಕ್ಷ ಫಿರೋಜ್ ರೋಜಿನ್‌ದಾರ ಮಾತನಾಡಿ, ಸರಕಾರ ಸಹ ಪತ್ರಕರ್ತರ ಸೇವೆಯು ಸಮಾಜಕ್ಕೆ ಅಗತ್ಯ ಸೇವೆ ಎಂದು ಹೇಳಿದೆ. ಪತ್ರಕರ್ತರೂ ಕೂಡ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತ ಕೊರೋನಾ ಬಗ್ಗೆ ಜನರಲ್ಲಿ ಮಾಧ್ಯಮದ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ದಿನೇ-ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇಂಥ ಸಂದರ್ಭದಲ್ಲಿ ಪತ್ರಕರ್ತರು ಬಹಳ ಜಾಗೃತೆಯಿಂದ ಕಾರ್ಯ ನಿರ್ವಹಿಸುವ ಜೊತೆಗೆ ತಮ್ಮ ಹಾಗೂ ಕುಟುಂಬದವರ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶಮಸುದ್ದೀನ್ ಸೈಯ್ಯದ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಹಟಾತ್ ಸ್ಪೋಟ್ ದಿನಪತ್ರಿಕೆ ಆರಂಭವಾಗಿ ಒಂದು ನೂರು ದಿನ ಪೂರೈಸಿದ್ದಕ್ಕಾಗಿ ಸಂತಸ ವ್ಯಕ್ತ ಪಡಿಸುತ್ತಾ ಪತ್ರಿಕೆಯನ್ನು ವಿತರಿಸಿ, ನಂತರದಲ್ಲಿ ಮಾತನಾಡುತ್ತಾ, ದಿನ ಪತ್ರಿಕೆ ಪ್ರಕಟಣೆ ಇಂದು ಅಷ್ಟು ಸುಲಭದ ಮಾತಲ್ಲಾ ಎಂದರು.ಪತ್ರಿಕೆಯ ಬೆಳವಣಿಗೆಗೆ ಪರೋಕ್ಷವಾಗಿ ಅಪರೋಕ್ಷವಾಗಿ ಸಹಾಯ ಸಹಕಾರ ನೀಡಿದ ಜಿಲ್ಲೆಯ ಜನತೆಗೆ ಮತ್ತು ಕಾನಿಪ ಸಂಘದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಧನ್ಯವಾದ ತಿಳಿಸಿದರು.
ಸಂಘದ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ ಅಶೋಕ ಕುಲಕರ್ಣಿ ವೇದಿಕೆ ಮೇಲಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಪತ್ರಿಕಾ ದಿನಾಚರಣೆಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಖಾಂತರ ಸರಳ ರೀತಿಯಲ್ಲಿ ಆಚರಿಸಲಾಯಿತು. ಕಾನಿಪ ಸಂಘದ ಹಲವಾರು ಸದಸ್ಯರು, ವಿವಿಧ ತಾಲೂಕಾ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾನಿಪ ಸಂಘದ ಸದಸ್ಯ ವಿಜಯಕುಮಾರ ಕೋತವಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೋಂಡೂರ ವಂದಿಸಿದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos