whatsapp facebooktwitter

ಗೋಕುಲ‌ ಮಿಷನ್: ರಾಸುಗಳ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಚಾಲನೆ

ಗೋಕುಲ‌ ಮಿಷನ್: ರಾಸುಗಳ ಕೃತಕ ಗರ್ಭಧಾರಣೆ ಕಾರ್ಯಕ್ರಮಕ್ಕೆ ಚಾಲನೆ

01-08-2020 08:27 PM

ಬೆಳಗಾವಿ, ಆಗಸ್ಟ್ 1 : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ ವತಿಯಿಂದ ರಾಸುಗಳ ತಳಿಗಳನ್ನು ಕೃತಕ ಗರ್ಭಧಾರಣೆ ಮೂಲಕ ಉನ್ನತೀಕರಿಸುವ "ರಾಷ್ಟ್ರೀಯ ಗೋಕುಲ ಮಿಶನ್" ಯೋಜನೆಯಡಿಯಲ್ಲಿ ರಾಷ್ಟ್ರ ವ್ಯಾಪಿ ಕೃತಕ ಗರ್ಭಧಾರಣೆ ಯೋಜನೆ-2 ಕಾರ್ಯಕ್ರಮ ದಿನಾಂಕ:
01-ಆಗಷ್ಟ-2020 ರಿಂದ ಮೇ-3-2021 ರವರೆಗೆ ನಡೆಯಲಿದ್ದು, ಈ ಯೋಜನೆಗೆ ರೈಲ್ವೆ ಇಳಾಖೆಯ ರಾಜ್ಯ ಸಚಿವರಾದ ಸುರೇಶ ಅವರು ಗೋಪೂಜೆಯೊಂದಿಗೆ ಚಾಲನೆ ನೀಡಿದರು.
ನಗರದ ಪಶು ಆಸ್ಪತ್ರೆ ಆವರಣ ಶನಿವಾರ(ಆ.1) ಜರುಗಿದ ಈ ಸರಳ ಕಾರ್ಯಕ್ರಮದಲ್ಲಿ ಹಸುವಿಗೆ
ಕೃತಕಗರ್ಭಧಾರಣೆ ಮಾಡಲಾಯಿತು.
ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಯೋಜನೆ-2(ಕೃತಕ ಗರ್ಭಧಾರಣೆ ಮೂಲಕ ರಾಸುಗಳ
ತಳಿ ಉನ್ನತೀಕರಣ ಕಾರ್ಯಕ್ರಮ) ಭಾರತ ಸರ್ಕಾರದಿಂದ ಘೋಷಣೆಯಾದ ಉತೃಷ್ಣ ದೇಶೀ ತಳಿ
ಅಥವಾ ವಿದೇಶಿ ತಳಿ ವೀರವನ್ನು ಬಳಸಿ ಕೃತಕ ಗರ್ಭಧಾರಣೆ ಮೂಲಕ ಉತ್ತಮ ತಳಿ ಕರುಗಳ
ಜನನದೊಂದಿಗೆ ಸ್ಥಳೀಯ ಜಾನುವಾರುಗಳ

ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶ ಇದಾಗಿದೆ.
ಯೋಜನೆಯಡಿಯಲ್ಲಿ ಆಯ್ಕೆಯಾದ 500 ಹಳ್ಳಿಗಳ
ರೈತಬಾಂಧವರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಲು ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಇಲಾಖೆಯ ಎಲ್ಲಾ ಅಧಿಕಾರಿಗಳು ಸಕ್ರೀಯವಾಗಿ ಪಾಲ್ಗೊಂಡು ಈ ಯೋಜನೆಯನ್ನು ಈ ಭಾಗದಲ್ಲಿ
ಯಶ್ವಸಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸದರಿ ಸಮಾರಂಭದಲ್ಲಿ ಡಾ:ಅಶೋಕ ಎಲ್
ಎಲ್ ಕೊಳ್ಳಾ ಉಪ ನಿರ್ದೇಶಕರು(ಆಡಳಿತ)
ಡಾ:ಎ.ಕೆ.ಚಂದ್ರಶೇಖರ ಉಪ ನಿರ್ದೇಶಕರು (ಪಾಲಿ ಕ್ಲಿನಿಕ್) ಡಾ:ಶಶಿಧರ ನಾಡಗೌಡ ಸಹಾಯಕ
ನಿರ್ದೇಶಕರು, ಉಪ ನಿರ್ದೇಶಕರ ಕಚೇರಿ, ಡಾ:ದೇವೇಂದ್ರ ಲಮಾಣಿ ಸಹಾಯಕ ನಿರ್ದೇಶಕರು ಪಶು
ಆಸ್ಪತ್ರ, ಬೆಳಗಾವಿ, ಡಾ:ಹೆಚ್.ಕೆ.ಯರಗಟ್ಟಿ ಜಿಲ್ಲಾ ಸಂಯೋಜನಾಧಿಕಾರಿಗಳು ರಾಷ್ಟ್ರವ್ಯಾಪಿ ಕೃತಕ
ಗರ್ಭಧಾರಣೆ ಯೋಜನೆ-2 ಹಾಗೂ ಬೆಳಗಾವಿ ತಾಲೂಕಿನ ಎಲ್ಲಾ ಪಶುವೈದ್ಯಾಧಿಕಾರಿಗಳು ಹಾಗೂ
ಎಲ್ಲಾ ಸಿಬ್ಬಂದಿಯವರು ಹಾಜರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಸಿಂಧನೂರು: ಕರ್ತವ್ಯ ನಿಷ್ಠ ಪೋಲಿಸ ಅಧಿಕಾರಿಗಳಿಗೆ ವರಿಷ್ಠ ರಿ0ದ ಪ್ರಶಂಸೆ

ಕೊರೋನ್ ವೈರಸ್‌ ಹರಡದಂತೆ ತಡೆಗಟ್ಟಲು ಉದ್ದೇಶದಿಂದ ದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು.ಪೋಲಿಸ್ ಇಲಾಖೆಗೆ ಕಂಡು ಮತ್ತು ಕೇಳರಿಯದ ರೀತಿಯಲ್ಲಿ...

Read More

13-08-2020 10:11 AM

ಎಸ್ ಎಸ್ ಎಲ್ ಸಿ : ನೀಮಾ ಕುಮಾರಿಗೆ ಸತ್ಕಾರ

ಕುಷ್ಟಗಿ : ಪತಂಜಲಿ ಯೋಗ ಸಮಿತಿ ಕುಷ್ಟಗಿಯ ಯೋಗಸಾಧಕರು ಸೇರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಗರದ ಕ್ರೈಸ್ತ ಕಿಂಗ್ ಶಾಲೆಯ...

Read More

12-08-2020 09:38 PM

ತಾಲೂಕಿನ ಗೌರವ ಹೆಚ್ಚಿಸಿದ ರಮೇಶ್ ಗುಮಗೇರಿ

ಕುಷ್ಟಗಿ : ಮುಸ್ಲಿಂ ಸಮುದಾಯದ ತಾಲೂಕಾ ಅಂಜುಮನ್ ಪಂಚ್ ಕಮಿಟಿ ಯುವಘಟಕದ ವತಿಯಿಂದ ಯು.ಪಿ ಎಸ್.ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಕುಷ್ಟಗಿ ತಾಲೂಕಿನ...

Read More

12-08-2020 09:23 PM

ದೇವಸ್ಥಾನ, ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ, ಆ.12 : ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕೋವಿಡ್-೧೯ ಸೋಂಕು ನಿಂದಾಗಿ...

Read More

12-08-2020 09:16 PM

4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡು ವಶಕ್ಕೆ

ಬೆಳಗಾವಿ : ಶ್ರೀಗಂಧ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ...

Read More

12-08-2020 09:13 PM

Read More
×E-Paperಸಾಹಿತ್ಯGeneralVideos