whatsapp facebooktwitter

ಲಾಕ್‌ಡೌನ್ ಪರಿಹಾರಧನ: ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನ

ಲಾಕ್‌ಡೌನ್ ಪರಿಹಾರಧನ: ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನ

12-08-2020 06:47 PM

ಬೆಳಗಾವಿ, ಆ.12: ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ವಿದ್ಯುತ್ ಮಗ್ಗ ನೇಕಾರರು
ಸಹ ಸಂಕಷ್ಟದಲ್ಲಿರುವುದರಿಂದ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ಘಟಕಗಳ ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಕೂಲಿ ಕಾರ್ಮಿಕರಿಗೆ ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ರೂ.2,000/- ಗಳ ಪರಿಹಾರಧನವನ್ನು ನೇರವಾಗಿ ಸದರಿ ಕಾರ್ಮಿಕರ ಆಧಾರ್ ಲಿಂಕ್ಸ್ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಬಾಕಿ ಇರುವ
ನೇಕಾರರು/ಮಾಲೀಕರು ದಿನಾಂಕ:20-08-2020 ರ ಒಳಗಾಗಿ ಆಯಾ ಊರುಗಳಲ್ಲಿ ಈಗಾಗಲೇ

ನಿಗದಿಪಡಿಸಿದ ಸ್ಥಳಗಳಲ್ಲಿ ಸಲ್ಲಿಸಬಹುದು ಅಥವಾ ಈ ಕಚೇರಿಗೆ ನೇರವಾಗಿ ಸಂಪರ್ಕಿಸಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ದಿನಾಂಕ: 20-08-2020
ಕೊನೆಯ ದಿನವಾಗಿದ್ದು, ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ.
ಈಗಾಗಲೇ ಅರ್ಜಿ ಸಲ್ಲಿಸಿರುವ ನೇಕಾರರು ಹಾಗೂ ಇನ್ನು ಮುಂದೆ ಅರ್ಜಿ ಸಲ್ಲಿಸುವ ನೇಕಾರರು ತಮ್ಮ ಆಧಾರ
ಸಂಖ್ಯೆ ತಮ್ಮ ಬ್ಯಾಂಕಿನ ಖಾತೆಗಳಿಗೆ ಲಿಂಕ್ ಆಗಿರುವುದನ್ನು ಹಾಗೂ ಖಾತೆ ಚಾಲ್ತಿಯಲ್ಲಿರುವುದನ್ನು ಕೂಡಲೇ ಖಾತ್ರಿಪಡಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0831-2950674 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

The Farmers’ Produce Trade and Commerce (Promotion and Facilitation) Bill, 2020 ಒಂದು ಚಿಂತನೆ ....

The Farmers’ Produce Trade and Commerce (Promotion and Facilitation) Bill, 2020 ಬೇರೇನೋ ಅಲ್ಲ, ಈ ದೇಶದ ಒಕ್ಕೂಟ ವ್ಯವಸ್ಥೆಯ ಮೂಲತತ್ತ್ವಗಳ ಮೇಲೆ ಆಗುತ್ತಿರುವ ಮತ್ತೊಂದು ದಾಳಿ. ಒಂದು ದೇಶ- ಒಂದು...

Read More

19-09-2020 10:19 PM

ಸಚಿವರಿಂದ ತಾಲ್ಲೂಕಾ ಆಸ್ಪತ್ರೆಯ ಹೈಟೆಕ್ ಲ್ಯಾಬ್, 50 ಆಕ್ಸಿಜನ್ ಬೆಡ್ ಲೋಕಾರ್ಪಣೆ

ನರಗುಂದ .19 : ನರಗುಂದ ನಗರದಲ್ಲಿನ ಬಾಬಾಸಾಹೇಬ ಭಾವೆ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾದ ಹೈಟೆಕ್ ಲ್ಯಾಬ್, ಸುಸಜ್ಜಿತವಾದ 50 ಆಕ್ಸಿಜನ್ ಬೆಡ್...

Read More

19-09-2020 09:41 PM

ಅದ್ಬುತ ಯಶಸ್ಸು ಕಂಡ ಇ- ಮೇಗಾ ಲೋಕ್ ಅದಾಲತ್

ಕಾರವಾರ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ಬನ್ನಿ ರಾಜಿ ಸಂಧಾನ...

Read More

19-09-2020 09:24 PM

ಪಿಂಚಣಿ ಪಾವತಿಗೆ ವಿಳಂಬ ಬೇಡ : ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ.

ಕಾರವಾರ : `ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುತ್ತಿರುವ ವೃದ್ಯಾಪ್ಯ, ವಿಕಲಚೇತನ, ವಿಧವಾ ವೇತನದಂತಹ ಅರ್ಹ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಪಿಂಚಣಿ...

Read More

19-09-2020 09:20 PM

ರಾಜ್ಯದಲ್ಲಿಂದು 8364, ಬೆಂಗಳೂರು 3733, ಕೊಪ್ಪಳ 96, ಬಳ್ಳಾರಿ 300, ಬೆಳಗಾವಿ 100, ಗದಗ 391 ಜನರಿಗೆ ಸೋಂಕು

ಬೆಂಗಳೂರು ; ರಾಜ್ಯದಲ್ಲಿಂದು 8364, ಬೆಂಗಳೂರು 3733, ಕೊಪ್ಪಳ 96, ಬಳ್ಳಾರಿ 300, ಬೆಳಗಾವಿ 100, ಗದಗ 391,ಬಾಗಲಕೋಟೆ 152, ಬೆಂಗಳೂರು ಗ್ರಾಮಾಂತರ 189, ಬೀದರ್ 23, ಚಾಮರಾಜನಗರ 72,...

Read More

19-09-2020 09:03 PM

Read More
×E-Paperಸಾಹಿತ್ಯGeneralVideos