whatsapp facebooktwitter

ಕೆ.ವಿ.ಜಿ.ಬ್ಯಾಂಕ ಸ್ಥಳಾಂತರಕ್ಕೆ‌ ತೀವೃ ವಿರೋಧ. ಬ್ಯಾಂಕ‌ ಮುಂದೆ ಅಕ್ಕತಂಗೇರಹಾಳ ಗ್ರಾಮಸ್ಥರ ಪ್ರತಿಭಟನೆ

ಕೆ.ವಿ.ಜಿ.ಬ್ಯಾಂಕ ಸ್ಥಳಾಂತರಕ್ಕೆ‌ ತೀವೃ ವಿರೋಧ. ಬ್ಯಾಂಕ‌ ಮುಂದೆ ಅಕ್ಕತಂಗೇರಹಾಳ ಗ್ರಾಮಸ್ಥರ ಪ್ರತಿಭಟನೆ

14-09-2020 04:14 PM

ಅಂಕಲಗಿ. ೧೪- ಗ್ರಾಮದಲ್ಲಿರುವ ಕೆ.ವಿ.ಜಿ.ಬ್ಯಾಂಕ್ ಸ್ಥಳಾಂತರಗೊಳಿಸಿ, ಅಂಕಲಗಿ ಕೆ.ವಿ.ಜಿ ಬ್ಯಾಂಕ್ ನಲ್ಲಿ ವಿಲೀನಗೊಳಿಸುವ ಬ್ಯಾಂಕ ಕ್ರಮಕ್ಕೆ ತೀವೃ ಆಕ್ರೋಶ ‌ವ್ಯಕ್ತಪಡಿಸಿ ಗ್ರಾಹಕರು ಪ್ರತಿಭಟಿಸಿದ ಘಟನೆ ಸೋಮವಾರ ಅಕ್ಕತಂಗೇರಹಾಳ ಗ್ರಾಮದಲ್ಲಿ ಜರುಗಿದೆ.
ಗ್ರಾಹಕರ ಸಂಖ್ಯೆ ಯಲ್ಲಿ‌ ಇಳಿಮುಖವಾಗುತ್ತಿದೆ ಎಂಬ ಏಕೈಕ ಕಾರಣವೊಡ್ಡಿ ಇರುವ ಬ್ಯಾಂಕ ಸೌಲಭ್ಯವನ್ನು 7 ಸಾವಿರಕ್ಕೂ ಅಧಿಕ ಜನರಿರುವ ಈ ಗ್ರಾಮದಿಂದ ಕಸಿದುಕೊಳ್ಳುವದು ಸರಿಯಲ್ಲ. ಗ್ರಾಮೀಣ ಬ್ಯಾಂಕ್ ಇದಾದ್ದರಿಂದ ಹಳ್ಳಿಗರ ಆರ್ಥಿಕ ಬಲವರ್ಧನೆಗೆ ಶ್ರಮಿಸುವ ಸಂಸ್ಥೆ ಇದಾಗಬೇಕು. ಗ್ರಾಹಕರ ಸಂಖ್ಯೆ ಹೆಚ್ಚಿಸಲು‌ ಬ್ಯಾಂಕನ ಉತ್ತಮ ಸೇವೆಯಿಂದ ಮಾತ್ರ ಸಾಧ್ಯ. ಗ್ರಾಮದಲ್ಲಿಯ ಈ ಇರುವ ಇದೊಂದೇ ಬ್ಯಾಂಕ ಕಿತ್ತು ಹೋದರೆ ಗ್ರಾಹಕರಿಗೂ ಅನ್ಯಾಯವಾಗುವದು.
ಇದರಿಂದ. ಗ್ರಾಮಕ್ಕೂ ಕಳಂಕ ಉಂಟಾಗುವದಲ್ಲದೆ, ಬ್ಯಾಂಕನೊಂದಿಗೆ ನಂಟು ಹೊಂದಿರುವ ಪ್ರಾಮಾಣಿಕರು, ವಯೋ ವೃದ್ಧರು, ಸ್ವಾತಂತ್ರ್ಯ ಯೋಧರು, ಕೃಷಿಕರು, ಕಬ್ಬು ಬೆಳೆಗಾರರು, ಗ್ರಾಹಕರು ಸಾವಿರಾರು ಜನರಿದ್ದು ಇವರೆಲ್ಲ ಬ್ಯಾಂಕ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ಗ್ರಾಹಕರೊಬ್ಬರು ಅಭಿಪ್ರಾಯ ಪಟ್ಟರು. ಗ್ರಾಮದಲ್ಲಿ ರುವ ಈ ಏಕೈಕ ಬ್ಯಾಂಕ್ ಸ್ಥಳಾಂತರಗೊಳ್ಳಲು ನಾವು ಅವಕಾಶ ಕೊಡುವದಿಲ್ಲ ಎಂದು‌ ಗ್ರಾಮದ‌ ನೂರಾರು ಗ್ರಾಹಕರು ಪಟ್ಟು ಹಿಡಿದರಲ್ಲದೆ, ಬ್ಯಾಂಕ ನ ಮುಂದೆ ಕುಳಿತು

Advertise

ಪ್ರತಿಭಟನೆ ನಡೆಸಿ, ಬ್ಯಾಂಕ ಸ್ಥಳಾಂತರ ಆದೇಶ ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಲಾಗುವದಿಲ್ಲ ಎಂದು ತೀವೃ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಬ್ಯಾಂಕ ಆಡಳಿತ ಮಂಡಳಿಯ ಈ ಗ್ರಾಮದ‌ ಬ್ಯಾಂಕ ರದ್ದತಿ ಆದೇಶವು ಕಲ್ಲೇಟು ಹೊಡೆದಂತಿದ್ದು, ಈ ಸ್ಥಳಾಂತರ ಆದೇಶದ ಕ್ರಮ ರದ್ದು ಪಡಿಸದಿದ್ದರೆ ಪ್ರತಿಭಟನೆ ಮುಂದುವರೆಸುವದಾಗಿ ಗ್ರಾಮಸ್ಥರು ಬ್ಯಾಂಕ ಆಡಳಿತ ಮಂಡಳಿಯನ್ನು ಎಚ್ಚರಿಸಿದ್ದಾರೆ. ಅಗತ್ಯ ಕ್ರಮಕ್ಕೆ. ತ ಮ್ಮ ಈ ವಿನಂತಿ ಅರ್ಜಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸುವದಾಗಿ ಕೆ.ವಿ.ಜಿ.ಶಾಖಾ ಮ್ಯಾನೇಜರ ಜಾನಕಿರಾಮ ಆಶ್ವಾಸನೆ‌ ನೀಡಿದ‌ ನಂತರ ಜನ ಕಾಲ್ಕಿತ್ತರು
ಈ ಪ್ರತಿಭಟನೆ ಯಲ್ಲಿ‌ ಗ್ರಾಮದ ಧುರೀಣರಾದ ರವಿ ಭಡಕಲ್, ಮಲ್ಲಿಕಾರ್ಜುನ. ನಾಯಿಕ, ಶಂಕರ ಬೆಣ್ಣಿ, ಬಾಳಪ್ಪಾ ದಡ್ಡಿ, ಸಂತೋಷ‌ ಈಶ್ವರಪ್ಪಗೋಳ, ಶಂಕರ ತುಪ್ಪದ, ಸುರೇಶ ಸತ್ತಿಗೇರಿ, ರಾಜು ಬೆಣ್ಣಿ, ಶಿವಪುತ್ರಪ್ಪಾ ತುಪ್ಪದ, ಸತ್ಯಪ್ಪಾ ಪಂಗಣ್ಣವರ, ಜಾಫರ ದೇಸಾಯಿ, ರಾಜು ಪಾಟೀಲ, ಶಿವನಪ್ಪಾ ಕುಂದರಗಿ, ಶಿಂಗಪ್ಪಾ ಪಾಟೀಲ, ಬಸನಗೌಡ ಮಾವನೂರ, ಶಿವನಗೌಡ. ಮಾನಗಾವ, ಬಾಳಪ್ಪಾ ಪೂಜೇರಿ, ಬಸಪ್ಪಾ ಹೆಬ್ಬಾಳ ಚಂದ್ರು ಶೆಟ್ಟೆಣ್ಣವರ ಸೇರಿದಂತೆ,. ರಾಜಕೀಯ ಮುಖಂಡರು, ಗ್ರಾಹಕರು, ಕೃಷಿಕರು, ಉದ್ಯಮಿಗಳು, ನಿವೃತ್ತ ನೌಕರರು , ಕಾರ್ಮಿಕರು, ವಿದ್ಯಾರ್ಥಿ‌ ಪಾಲಕರು, ಮಹಿಳೆಯರು ಗ್ರಾಮಸ್ಥರು ಉಪಸ್ತಿತರಿದ್ದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos