whatsapp facebooktwitter

ಜಿಲ್ಲಾಡಳಿತದಿಂದ ಪ್ರಜ್ವಲನ್ ಶೀರ್ಷಿಕೆಯಡಿ ವಾಟ್ಸಪ್ ಗ್ರೂಪ್ ರಚನೆ

ಜಿಲ್ಲಾಡಳಿತದಿಂದ ಪ್ರಜ್ವಲನ್ ಶೀರ್ಷಿಕೆಯಡಿ ವಾಟ್ಸಪ್ ಗ್ರೂಪ್ ರಚನೆ

14-09-2020 06:20 PM

ಕೊಪ್ಪಳ, ಸೆ.: ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಜ್ವಲನ್ ಎಂಬ ಶೀರ್ಷಿಕೆಯಡಿ ವಾಟ್ಸಪ್ ಗ್ರೂಪ್ ಅನ್ನು ರಚಿಸಲಾಗಿದ್ದು, ಜಿಲ್ಲೆಯಲ್ಲಿ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛಿಸುವವರಿಗೆ ಈ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಜಿಲ್ಲೆಯ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಛಿಸುವವರಿಗೆ ಎಲ್ಲ ತರಹದ ಆಡಳಿತಾತ್ಮಕ, ಸಾಲ ಸೌಲಭ್ಯ, ಮಾರುಕಟ್ಟೆ ಮತ್ತು ತಾಂತ್ರಿಕ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ನೀಡಲು ಈ ವಾಟ್ಸಪ್ ಗ್ರೂಪ್ ರಚಿಸಲಾಗಿದೆ. ಇದರಲ್ಲಿ ಜಿಲ್ಲಾಧಿಕಾರಿಗಳನ್ನೊಳಗೊಂಡAತೆ ಸಂಬAಧಪಟ್ಟ ಎಲ್ಲ

Advertise

ಇಲಾಖೆಗಳು, ತಾಂತ್ರಿಕ, ಮಾರಾಟ, ಆರ್ಥಿಕ, ಸೂಕ್ತ ಮಾನವ ಸಂಪನ್ಮೂಲದ ಮಾಹಿತಿ, ಯೋಜನಾ ವರದಿ ತಯಾರಿಕೆ, ಸಂಶೋಧನಾ ಸಂಸ್ಥೆಗಳನ್ನು ಗ್ರೂಪ್ ಒಳಗೊಂಡಿರುತ್ತದೆ. ಅವಶ್ಯಕತೆ ಇರುವ ಸ್ವಂತ ಉದ್ಯೋಗಾಕಾಂಕ್ಷಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಮೊ.ಸಂ. ೯೪೪೮೫೪೪೦೮೬ ಮುಖಾಂತರ ಸಂಪರ್ಕದಲ್ಲಿ ಬಂದಾಗ ಅವರ ವಿಚಾರ/ಯೋಜನೆ ಫಲಿಸುವ ಉದ್ದೇಶದಿಂದ ಈ ಗ್ರೂಪಿನ ಮುಖಾಂತರ ಜಿಲ್ಲಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ನಿಗಾವಹಿಸಲಾಗುವುದು. ಪ್ರಾರಂಭದಲ್ಲಿ ನೂರು ಪ್ರಸ್ತಾವನೆಗಳನ್ನು ಈ ಗುಂಪಿನ ಮೂಲಕ ಅನುಪಾಲನೆ ಮಾಡಿ ಯಶಸ್ಸು ಕಾಣಲು ಪ್ರಯತ್ನಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos