whatsapp facebooktwitter

ನಿರ್ದೇಶಕರಿಂದ ಜಿಲ್ಲೆಯ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನದ ವೀಕ್ಷಣೆ

ನಿರ್ದೇಶಕರಿಂದ ಜಿಲ್ಲೆಯ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನದ ವೀಕ್ಷಣೆ

14-09-2020 07:31 PM

ಧಾರವಾಡ ಸೆ.14:ಇಂದು ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳನ್ನು ಪ್ರಾಥಮಿಕ ಶಿಕ್ಷಣ ಹಾಗೂ ಸಾ.ಶಿ ಇಲಾಖೆ ನಿರ್ದೇಶಕರು ಮಮತಾ ನಾಯಕ ಇವರು ವೀಕ್ಷಣೆ ಮಾಡಿದರು.

ಉಪನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಜಿಲ್ಲೆಯ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನದ ಕುರಿತು ಸÀಮಗ್ರ ಮಾಹಿತಿಯನ್ನು ಪಡೆದು ಮಾರ್ಗದರ್ಶನ ಮಾಡಿದರು. ನಂತರ ಧಾರವಾಡ ಗ್ರಾಮೀಣ ವಲಯದ ಕೆಜಿಎಸ್ ನರೇಂದ್ರ ಹಾಗೂ ಜಿಹೆಚ್‍ಎಸ್ ಚಿಕ್ಕಮಲ್ಲಿಗವಾಡ ಶಾಲೆಗಳ ವೀಕ್ಷಣೆ ಮಾಡಿದರು. ಗ್ರಾಮೀಣ ಮಕ್ಕಳು ಬಹಳ ಉತ್ಸಾಹದಿಂದ ಕಲಿಕಾ ಕೇಂದ್ರಗಳಲ್ಲಿ ಭಾಗವಹಿಸಿರುವುದು ಹಾಗೂ ಊರಿನ ಜನರ ಸಹಕಾರದಿಂದ ಕಲಿಕಾ ಕೇಂದ್ರಗಳು ನಡೆಯುತ್ತಿರುವುದನ್ನು ನಿರ್ದೇಶಕರು ಶ್ಲಾಘಿಸಿದರು. ಮಕ್ಕಳು ಕೋವಿಡ್-19 ಸಂಧಿಗ್ದ ಪರಿಸ್ಥಿತಿಯಲ್ಲಿಯೂ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

ನಂತರ ಧಾರವಾಡ ಶಹರ ವಲಯದ ಮಾದರಿ ಪ್ರಾಥಮಿಕ ಶಾಲೆ ಪಿಹೆಚ್‍ಕ್ಯೂ ಶಾಲೆಯ ದುರ್ಗಾದೇವಿ ದೇವಸ್ಥಾನದಲ್ಲಿರುವ ಕಲಿಕಾ ಕೇಂದ್ರಗಳನ್ನು ವೀಕ್ಷಿಸಲಾಯಿತು. ಶಿಕ್ಷಕರು ಹಾಗೂ

ಸಮನ್ವಯಾಧಿಕಾರಿಗಳಾದ ಎಂ.ವಿ. ಅಡಿವೇರ ಪುಸ್ತಕ ನೀಡಿ ಸ್ವಾಗತಿಸಿದರು. ಒಳ್ಳೆಯ ವಾತಾವರಣದಲ್ಲಿ ಸಾಮಾಜಿಕ ಅಂತರದಲ್ಲಿ ಅಭ್ಯಾಸ ಹಾಳೆಗಳನ್ನು ನೀಡಿ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿರುವುದನ್ನು ವೀಕ್ಷಿಸಿದರು. ಮಕ್ಕಳು ದೀಕ್ಷಾ ಪೋರ್ಟಲ್ ಮೂಲಕ ಸಂವೇದ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿರುವುದನ್ನು ಕಂಡು ನಿರ್ದೇಶಕರು ಹರ್ಷ ವ್ಯಕ್ತ ಪಡಿಸಿದರು. ಅದೇ ರೀತಿ ಟಿಟಿಐ ಡಯಟ್ ಶಾಲೆಯ ರಕ್ಷಾ ಕಾಲೊನಿ ಹನುಮಾನ ದೇವಸ್ಥಾನದಲ್ಲಿ ನಡೆದ ಕಲಿಕಾ ಕೇಂದ್ರ ವೀಕ್ಷಿಸಿದರು. ಅಲ್ಲಿ ಸ್ವಯಂ ಸೇವಕರು ಭಾಗವಹಿಸಿದ್ದನ್ನು ಕಂಡು ಅವರಿಗೆ ಇಲಾಖೆ ಪರವಾಗಿ ಧನ್ಯವಾದ ತಿಳಿಸಿದರು. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಾದ್ಯಂತ ವಿದ್ಯಾಗಮ ಕಾರ್ಯಕ್ರಮ ಉತ್ತಮವಾಗಿ ಅನುಷ್ಠಾನಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ಸಂದರ್ಶನ ಸಮಯದಲ್ಲಿ ಸಾ.ಶಿ ಇಲಾಖೆಯ ಉಪನಿರ್ದೇಶಕರು ಮೋಹನಕುಮಾರ ಹಂಚಾಟೆ, ಡಿವೈಪಿಸಿ ಪ್ರಮೋದ ಮಹಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಮೇಶ ಬೊಮ್ಮಕ್ಕನವರ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಮತಿ ಎನ್ ಎಸ್ ಧಪೇದಾರ, ಎಂ ವಿ ಅಡಿವೇರ ಹಾಜರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಚಿಕ್ಕಜಂತಕಲ್ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಹಾಗೂ ಉಡಿತುಂಬ ಕಾರ್ಯಕ್ರಮ

ಗಂಗಾವತಿ ; .ಚಿಕ್ಕ ಜಂಥಕಲ್ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಕೃಷಿ ಇಲಾಖೆ ಇವರ ಸಂಯುಕ್ತ...

Read More

23-09-2020 07:55 AM

ಕೊವಿಡ್ ನಿಂದ‌ ಮೃತಪಟ್ಟ ವಸತಿಶಾಲೆಯ ಪ್ರಾಂಶುಪಾಲರ ಕುಟುಂಬ ವರ್ಗಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ಅವರಿಂದ 30ಲಕ್ಷ ಚೆಕ್ ವಿತರಣೆ

ಬೆಂಗಳೂರು. ಸೆ.22; ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರ‌ ಬೀಡು...

Read More

23-09-2020 06:36 AM

ಕಡಬಿಯಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವ್ರಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಬಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ...

Read More

23-09-2020 06:15 AM

ಪೋಷಣ ಅಭಿಯಾನ ಯೋಜನೆ: ಪೋಷಣ ರಥಕ್ಕೆ ಚಾಲನೆ

ಧಾರವಾಡ ಸೆ.22: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ-ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಗಳು ಪೌಷ್ಠಿಕತೆ...

Read More

22-09-2020 08:21 PM

ಸಾರ್ವಜನಿಕ ಸ್ಥಳಗಳ ಹಸರೀಕರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು

ಗದಗ ಸೆ. : ಜಿಲ್ಲೆಯಲ್ಲಿ ಒತ್ತುರಿಯಾಗಿರುವ ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯ ತ್ವರಿತವಾಗಿ ಆಗಬೇಕು. ಒತ್ತುವರಿ...

Read More

22-09-2020 08:19 PM

Read More
×E-Paperಸಾಹಿತ್ಯGeneralVideos