whatsapp facebooktwitter

ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯವರೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ

ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯವರೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ

14-09-2020 07:43 PM

ಹಾಸನ,ಸೆ.14. ಜಿಲ್ಲೆಯಲ್ಲಿ ಶೇ 70 ರಷ್ಟು ಕೋವಿಡ್-19 ಸೋಂಕಿತ ಪ್ರಕರಣಗಳು ರೋಗ ಲಕ್ಷಣಗಳನ್ನು ಹೊಂದಿಲ್ಲದ ಪ್ರಕರಣಗಳಾಗಿವೆ, ಈ ಹಿನ್ನಲೆಯಲ್ಲಿ ಇಂತಹವರನ್ನು ಸಹ ಆರೋಗ್ಯ ಇಲಾಖಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು ಇದಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಕೋರಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ರೋಗ ಲಕ್ಷಣಗಳನ್ನು ಹೊಂದಿಲ್ಲದ ಸೋಂಕಿತರನ್ನು ಗುರುತಿಸಲು ವಿಳಂಭವಾದಲ್ಲಿ ಅವರಿಂದ ಇನ್ನಷ್ಟು ಜನರಿಗೆ ಸೋಂಕು ಹಬ್ಬುವ ಸಾಧ್ಯತೆ ಇದೆ ಎಮದು ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸಾವು ಸಂಭವಿಸಿದ್ದು ಇದಕ್ಕೆ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಪ್ರಮುಖ ಕಾರಣವಾಗಿದೆ.
ಬಹಳಷ್ಟು ಜನರು ರೋಗ ಲಕ್ಷಣಗಳನ್ನು ನಿರ್ಲಕ್ಷಿಸಿ ಕೊನೆಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸುತ್ತಿದೆ. ಆದ್ದರಿಂದ ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ಕೊರೋನಾ ಚಿಕಿತ್ಸೆ ಪಡೆಯುವಂತೆ ಜಿಲ್ಲಾಧಿಕಾರಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವಯೋ ವೃದ್ದರು, ರಕ್ತದೊತ್ತಡ, ಮಧುಮೇಹ ಇತ್ಯಾದಿ ರೋಗ ಲಕ್ಷಣಗಳನ್ನು ಹೊಂದಿರುವವರು ಕೊರೋನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು ಇಂತಹವರು ರೋಗ ಲಕ್ಷಣ ಇಲ್ಲದಿದ್ದರು ಸಹ ಕೋವಿಡ್ ಪರೀಕ್ಷಿಸಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 26 ಸ್ಥಳಗಳಲ್ಲಿ ಕೊರೋನಾ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ಕೊರೋನಾ ಹಾಟ್ ಸ್ಪಾಟ್‍ಗಳಾಗಿ ಮಾರ್ಪಡಾಗಿದೆ. ಈ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಹೆಚ್ಚಿನ ತಪಾಸಣೆ ನಡೆಯುತ್ತಿದ್ದು ಪ್ರತಿಯೊಬ್ಬರು ತಪಾಸಣೆಗೆ ಒಳಪಡುವಂತೆ ಕೋರುವುದಾಗಿ ಅವರು ತಿಳಿಸಿದರು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದಕೊಳ್ಳುವುದು ಕಡ್ಡಾಯವಾಗಿದೆ ಇದನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಜಾಗ್ರತರಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಮನವಿ ಮಾಡಿದರು.
ಹಾಸನ ಹಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಆತ್ಯಾಧುನಿಕ ಸೌಲಭ್ಯಗಳಿವೆ, 250 ಬೆಡ್‍ಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಿದ್ದು ಉಳಿದ 150 ಬೆಡ್‍ಗಳನ್ನು ಆಮ್ಲಜನಕ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್

ಹೇಳಿದರು.
ಹಾಸನದ ಹಿಮ್ಸ್ ಆಸ್ಪತೆಯಲ್ಲಿ 400 ಹಾಸಿಗೆಗಳು ಇವೆ ನಗರದ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಕೇಂದ್ರ ಪ್ರಾರಂಭವಾಗಿದ್ದು, ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ 50-100 ಹಾಸಿಗೆಗಳ ಪ್ರತ್ಯೇಕ ಕೋವಿಡ್ ಚಿಕಿತ್ಸಾ ಕೇಂದ್ರ ಲಭ್ಯ ಇದೆ. ಅಲ್ಲದೆ ಕೋವಿಡ್ ಕೇರ್ ಕೇಂದ್ರಗಳು ಇವೆ. ಇದಲ್ಲದೆ ಹೆಚ್ಚುವರಿ ತುರ್ತು ಚಿಕಿತ್ಸೆಗೆ ಬೆಳೂರುಕ್ರಾಸ್‍ನ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗಳಲ್ಲಿ ಮನವಿ ಮಾಡಿದ್ದು ಅಲ್ಲಿಯೂ ಹಾಸನದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ 350 ಬೆಡ್‍ಗಳು ಹಾಗೂ 25 ವೆಂಟಿಲೇಟರ್‍ಗಳ ಕೋವಿಡ್ ಚಿಕಿತ್ಸೆಗೆ ಲಭ್ಯವಿದ್ದು ಹಾಗೂ 166 ಮಂದಿ ದಾಖಲಾಗಿದ್ದಾರೆ. ಹೆಚ್ಚಿನ ಬಿಲ್ ಪಡೆಯುತ್ತಿರುವ ಬಗ್ಗೆ ದೂರುಗಳೂ ಬಂದಿದ್ದು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರ್ಕಾರಿ ಮಾನದಂಡದಂತೆ ಹಣ ಪಡೆಯುವ ಸೂಚನೆ ನೀಡಲಾಗುವುದು ಎಂದು ಆರ್ ಗಿರೀಶ್ ಹೇಳಿದರು.

ಕೋವಿಡ್ ಸೋಂಕಿತರ ಶೇ.95 ರಷ್ಟು ಪ್ರಥಮ ಮತ್ತು ದ್ವಿತೀಯ ಹಂತದ ಸಂಪರ್ಕರನನು ತಪಾಸಣೆ ಮಾಡಲಾಗಿದೆ. 34 ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡವಿಧಿಸಲಾಗಿದೆ. ವಿವಿಧ ರೀತಿಯ ನಿಯಮ ಉಲ್ಲಂಘನೆಗಳಲ್ಲಿ 8.34 ಲಕ್ಷ ರೂ ದಂಡ ವಸೂಲು ಮಾಡಲಾಗಿದೆ. ಎಲ್ಲಾ ಸಾರ್ವಜನಿಕರು ಜಾಗೃತರಾಗಿ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್-19 ಗುಣಮುಖರಾದವರ ಪ್ರಮಾಣ ಶೇ. 75 ರಷ್ಟಿದ್ದು, ಮರಣ ಪ್ರಮಾಣ ಶೇ. 1.5 ರಷ್ಟಿದೆ. ಅದನ್ನು ಶೇ. 1 ಕ್ಕಿಂತಲೂ ಕಡಿಮೆಗೆ ಇಳಿಸುವುದು ಜಿಲ್ಲಾಡಳಿತದ ಗುರಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಹೆಚ್ಚು ತಪಾಸಣೆಗೆ ಅವಕಾಶ ಕಲ್ಪಿಸಲು ಹಾಗೂ ಅದಕ್ಕೆ ಪೂರಕ ಅಗತ್ಯ ಸಂಘಟನೆ, ಸೌಲಭ್ಯ ಮತ್ತು ಸಹಕಾರ ನೀಡಲು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಸ್ಥಳೀಯ ಜನಪತ್ರಿನಿಧಿಗಳು, ಗ್ರಾಮದ ಪ್ರಮುಖರನ್ನು ಇದರಲ್ಲಿ ತೋಡಗಿಸಿ ಅರಿವು ಮತ್ತು ಜಾಗೃತಿ ಚಟುವಟಿಕೆಗಳನನು ಹೆಚ್ಚಾಗಿ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಶಸ್ತ್ರಬಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಸ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.


ನಿಮ್ಮ ಅನಿಸಿಕೆ ತಿಳಿಸಿ

Read More News

ಚಿಕ್ಕಜಂತಕಲ್ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಹಾಗೂ ಉಡಿತುಂಬ ಕಾರ್ಯಕ್ರಮ

ಗಂಗಾವತಿ ; .ಚಿಕ್ಕ ಜಂಥಕಲ್ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಕೃಷಿ ಇಲಾಖೆ ಇವರ ಸಂಯುಕ್ತ...

Read More

23-09-2020 07:55 AM

ಕೊವಿಡ್ ನಿಂದ‌ ಮೃತಪಟ್ಟ ವಸತಿಶಾಲೆಯ ಪ್ರಾಂಶುಪಾಲರ ಕುಟುಂಬ ವರ್ಗಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ಅವರಿಂದ 30ಲಕ್ಷ ಚೆಕ್ ವಿತರಣೆ

ಬೆಂಗಳೂರು. ಸೆ.22; ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರ‌ ಬೀಡು...

Read More

23-09-2020 06:36 AM

ಕಡಬಿಯಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವ್ರಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಬಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ...

Read More

23-09-2020 06:15 AM

ಪೋಷಣ ಅಭಿಯಾನ ಯೋಜನೆ: ಪೋಷಣ ರಥಕ್ಕೆ ಚಾಲನೆ

ಧಾರವಾಡ ಸೆ.22: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ-ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಗಳು ಪೌಷ್ಠಿಕತೆ...

Read More

22-09-2020 08:21 PM

ಸಾರ್ವಜನಿಕ ಸ್ಥಳಗಳ ಹಸರೀಕರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು

ಗದಗ ಸೆ. : ಜಿಲ್ಲೆಯಲ್ಲಿ ಒತ್ತುರಿಯಾಗಿರುವ ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯ ತ್ವರಿತವಾಗಿ ಆಗಬೇಕು. ಒತ್ತುವರಿ...

Read More

22-09-2020 08:19 PM

Read More
×E-Paperಸಾಹಿತ್ಯGeneralVideos