whatsapp facebooktwitter

ಕೊಡವ ಸಾಹಿತ್ಯ ಅಕಾಡೆಮಿ; ಫೆಲೋಶಿಪ್ ದಾಖಲೀಕರಣ ಆಯ್ಕೆ ಸಮಿತಿ ಸಭೆ

ಕೊಡವ ಸಾಹಿತ್ಯ ಅಕಾಡೆಮಿ; ಫೆಲೋಶಿಪ್ ದಾಖಲೀಕರಣ ಆಯ್ಕೆ ಸಮಿತಿ ಸಭೆ

14-09-2020 07:55 PM

ಮಡಿಕೇರಿ ಸೆ.14-ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗೆ(ಸೆ.10) ಫೆಲೋಶಿಪ್ ದಾಖಲೀಕರಣ ಮಾಡಲು ಅರ್ಹರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮಿತಿ ಸಭೆಯು ಅಕಾಡೆಮಿಯ ಕಚೇರಿಯಲ್ಲಿ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಆಯ್ಕೆ ಸಭೆಗೆ ಪ್ರೊಫೆಸರ್ ಕೋಡೀರ ಲೋಕೇಶ್ ತಜ್ಞರಾಗಿ ಆಗಮಿಸಿದ್ದರು. ಅಲ್ಲದೆ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಮಾಚಿಮಾಡ ಜಾನಕಿ ಮಾಚಯ್ಯ, ಬಬ್ಬಿರ ಸರಸ್ವತಿ, ಪಿ.ಪ್ರಭುಕುಮಾರ್, ಡಾ.ಮೇಚಿರ ಸುಭಾಷ್ ನಾಣಯ್ಯ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ತೇಲಪಂಡ ಕವನ್ ಕಾರ್ಯಪ್ಪ ಇವರುಗಳು ಈ ಸಮಿತಿ ಸಭೆಯಲ್ಲಿ ಹಾಜರಿದ್ದರು.
ಸಮಿತಿಯ ಸಮ್ಮುಖದಲ್ಲಿ ಅರ್ಜಿದಾರರ ಸಂದರ್ಶನ ನಡೆಯಿತು. 12 ಅರ್ಜಿಗಳು ಬೇರೆ ಬೇರೆ ವಿಷಯದಲ್ಲಿ ಸಂಶೋಧನೆ ನಡೆಸಲು ಬಂದಿದೆ. ಕೊಡಗಿನಲ್ಲಿ ಸಂವಿಧಾನಿಕ ಸುಧಾರಣೆಗಳು ಮತ್ತು ಕೊಡವರ ಪ್ರಾತಿನಿಧ್ಯ, ಕೊಡವ ಸಂಸ್ಕøತಿ ಮತ್ತು ಮಹಿಳೆ, ಕೊಡವ

ಸಂಸ್ಕøತಿ-ಸ್ಥಿತ್ಯಂತ್ರಗಳು, ಕೊಡಗಿನ ಅಸ್ಮಿತೆಯ ಕುರುಹು -ಹಾಕಿ, ಕೊಡಗಿನ ದೇವರ ಕಾಡುಗಳ ಒಂದು ವಿಶ್ಲೇಷಣೆ, ಕೊಡವ ಸಾಂಸ್ಕøತಿಕ ಆಭರಣಗಳು ಹಾಗೂ ಆಯುಧಗಳು, ಅನನ್ಯತೆಯಲ್ಲಿ ಆದಿ ಶ್ರೀ ಪನ್ನಂಗಾಲತಮ್ಮೆ, ಕೊಡವ ಭಾಷೆ ಮತ್ತು 8ನೇ ಪರಿಛೇಧ, Myth and reality of Kodava customs(English) ಹಾಗೂ ದಾಖಲೀಕರಣಕ್ಕೆ ಕೊಡವ ಭಾಷಿಕರ ಐನ್‍ಮನೆ ಮತ್ತು ಕೈಮಡ, ಕೊಡವ ಭಾಷಿಕ ಜನಾಂಗಗಳ ಸಾಂಸ್ಕøತಿಕ ಅಧ್ಯಯನ, ಸೇರಿ ವೈವಿಧ್ಯಮಯವಾದ ವಿಷಯಗಳ ಬಗ್ಗೆ ಸಂಶೋಧನೆ ಮಾಡಲು ಹಾಗೂ ದಾಖಲೀಕರಣ ಮಾಡಲು ಆಸಕ್ತ ಅಭ್ಯರ್ಥಿಗಳಲ್ಲಿ ಕಂಡುಬಂದಿದೆ. ಈ ಅಭ್ಯರ್ಥಿಗಳು 1 ವರ್ಷದವರೆಗೆ ಸಂಶೋಧನೆ ನಡೆಸಲಿದ್ದಾರೆ. ಹಾಗೂ ಅವರ ಸಂಶೋಧನೆಯನ್ನು ಅಕಾಡೆಮಿ ಪುಸ್ತಕ ರೂಪದಲ್ಲಿ ಪ್ರಕಟ ಮಾಡುವುದು. ಸಂಶೋಧನೆಗೆ ಸ್ನಾತಕೋತ್ತರ ಪದವಿ ಕನಿಷ್ಠ ವಿದ್ಯಾರ್ಹತೆಯಾಗಿದೆ. ಈ ಯೋಜನೆಯಿಂದ ಕೊಡವ ಸಾಹಿತ್ಯ, ಕಲೆ, ಜನಪದ ಸಂಸ್ಕøತಿಯ ಬಗ್ಗೆ ಹೆಚ್ಚು ಸಂಶೋಧನೆಯಾಗುವುದು. ಅಲ್ಲದೆ ಸಂಶೋಧನಾಲಯ ಮತ್ತು ಗ್ರಂಥಾಲಯವು ಕೂಡ ಅಭಿವೃದ್ಧಿಗೊಳ್ಳುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ಚಿಕ್ಕಜಂತಕಲ್ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಹಾಗೂ ಉಡಿತುಂಬ ಕಾರ್ಯಕ್ರಮ

ಗಂಗಾವತಿ ; .ಚಿಕ್ಕ ಜಂಥಕಲ್ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಕೃಷಿ ಇಲಾಖೆ ಇವರ ಸಂಯುಕ್ತ...

Read More

23-09-2020 07:55 AM

ಕೊವಿಡ್ ನಿಂದ‌ ಮೃತಪಟ್ಟ ವಸತಿಶಾಲೆಯ ಪ್ರಾಂಶುಪಾಲರ ಕುಟುಂಬ ವರ್ಗಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ಅವರಿಂದ 30ಲಕ್ಷ ಚೆಕ್ ವಿತರಣೆ

ಬೆಂಗಳೂರು. ಸೆ.22; ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರ‌ ಬೀಡು...

Read More

23-09-2020 06:36 AM

ಕಡಬಿಯಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವ್ರಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಬಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ...

Read More

23-09-2020 06:15 AM

ಪೋಷಣ ಅಭಿಯಾನ ಯೋಜನೆ: ಪೋಷಣ ರಥಕ್ಕೆ ಚಾಲನೆ

ಧಾರವಾಡ ಸೆ.22: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ-ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಗಳು ಪೌಷ್ಠಿಕತೆ...

Read More

22-09-2020 08:21 PM

ಸಾರ್ವಜನಿಕ ಸ್ಥಳಗಳ ಹಸರೀಕರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು

ಗದಗ ಸೆ. : ಜಿಲ್ಲೆಯಲ್ಲಿ ಒತ್ತುರಿಯಾಗಿರುವ ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯ ತ್ವರಿತವಾಗಿ ಆಗಬೇಕು. ಒತ್ತುವರಿ...

Read More

22-09-2020 08:19 PM

Read More
×E-Paperಸಾಹಿತ್ಯGeneralVideos