whatsapp facebooktwitter

ಗದಗ ಜಿಲ್ಲೆ: 96 ಸೋಂಕು ಪ್ರಕರಣಗಳು ದೃಢ

ಗದಗ ಜಿಲ್ಲೆ: 96 ಸೋಂಕು ಪ್ರಕರಣಗಳು ದೃಢ

14-09-2020 08:59 PM

ಗದಗ : ಗದಗ ಜಿಲ್ಲೆಯಲ್ಲಿ ಸೆಪ್ಟೆಂಬರ 14 ರಂದು ಕೋವಿಡ್-19 ಸೋಂಕಿನಿಂದ ಒಟ್ಟು 96 ಪ್ರಕರಣಗಳು ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಜವಳ ಗಲ್ಲಿ, ವಾಟರ ಟ್ಯಾಂಕ ಹತ್ತಿರ, ಬಸವೇಶ್ವರ ನಗರ, ಹುಡ್ಕೋ ಕಾಲನಿ, ತಾಜ ನಗರ, ಜಿಮ್ಸ, ಕಬಾಡಿ ಚಾಳ, ಮಹಾಂತೇಶ ನಗರ, ಬಾಪೂಜಿ ನಗರ, ಬ್ಯಾಂಕರ್ಸ ಕಾಲನಿ, ವಿವೇಕಾನಂದ ನಗರ, ಶಿವಾನಂದ ನಗರ, ಗಂಗಿಮಡಿ, ರಾಜೀವಗಾಂಧೀ ನಗರ, ಸಾಯಿಬಾಬಾ ದೇವಸ್ಥಾನದ ಹತ್ತಿರ, ಗದಗ ತಾಲೂಕಿನ ಮುಳಗುಂದ, ಹುಲಕೋಟಿ, ಲಕ್ಕುಂಡಿ, ನಾಗಸಮುದ್ರ, ಕುರ್ತಕೋಟಿ,
ಮುಂಡರಗಿ ಪಟ್ಟಣದ ಜೆ.ಟಿ.ಮಠ ರಸ್ತೆ, ಮುಂರಡಗಿ ತಾಲೂಕಿನ ಹಿರೇವಡ್ಡಟ್ಟಿ,
ನರಗುಂದ ಪಟ್ಟಣದ ದಂಡಾಪುರ ಓಣಿ, ರಾಚಯ್ಯ ನಗರ, ನರಗುಂದ ತಾಲೂಕಿನ ಹದ್ಲಿ, ಸೋಮಾಪುರ, ಚಿಕ್ಕ ನರಗುಂದ
ರೋಣ ತಾಲೂಕಿನ ಸೂಡಿ, ಜಕ್ಕಳಿ, ಗಜೇಂದ್ರಗಡ ಪಟ್ಟಣದ ಭೂಮರೆಡ್ಡಿ ಪ್ಲಾಟ, ವಿದ್ಯಾನಗರ,
ಶಿರಹಟ್ಟಿ ಪಟ್ಟಣದ ಶಿವಲಿಂಗೇಶ್ವರ ನಗರ, ರಾಘವೇಂದ್ರ ಮಠ, ವಿಜಯನಗರ, ಸೇವಾನಗರ, ಶಿರಹಟ್ಟಿ ತಾಲೂಕಿನ ನಾರಾಯಣಪುರ, ಬೆಳ್ಳಟ್ಟಿ, ವಡವಿ, ಸುಗ್ನಳ್ಳಿ, ಶಿಗ್ಲಿ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಕೆರಿ,

ಮೃತರ ವಿವರ
ಗದಗ ನಿವಾಸಿ 52 ವರ್ಷದ ಪುರುಷ ಪಿ-470554 ಅವರು ಜಿಮ್ಸ್

ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಸೆಪ್ಟಂಬರ್ 2 ರಂದು ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಹೃದಯ ಸಂಬಂಧಿ ಖಾಯಿಲೆ ಹಾಗೂ ನಿಮೋನಿಯಾದಿಂದಾಗಿ ಸೆಪ್ಟೆಂಬರ 5 ರಂದು ಮೃತಪಟ್ಟಿರುತ್ತಾರೆ.
ಗದಗ ನಿವಾಸಿ 54 ವರ್ಷದ ಮಹಿಳೆ ಪಿ-470556 ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಸೆಪ್ಟೆಂಬರ 4 ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಶ್ವಾಸಕೋಶದ ತೊಂದರೆ ಹಾಗೂ ನಿಮೋನಿಯಾದಿಂದಾಗಿ ಸೆಪ್ಟೆಂಬರ 6 ರಂದು ಮೃತಪಟ್ಟಿರುತ್ತಾರೆ.
ಗದಗ ನಿವಾಸಿ ನಿವಾಸಿ 64 ವರ್ಷದ ಪುರುಷ ಪಿ-471329 ಅವರು ಜಿಮ್ಸ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಆಗಸ್ಟ್ 25 ರಂದು ಕೋವಿಡ್-19 ದೃಢಪಟ್ಟಿದ್ದು ಅಧಿಕ ರಕ್ತದೊತ್ತಡ, ಸಕ್ಕರೆ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದಾಗಿ ಸೆಪ್ಟೆಂಬರ 5 ರಂದು ಕೋವಿಡ್-19 ಅಲ್ಲದ ಅನ್ಯ ಕಾರಣದಿಂದಾಗಿ ಮೃತಪಟ್ಟಿರುತ್ತಾರೆ.
ಗದಗ-ಬೆಟಗೇರಿ ನಿವಾಸಿ 65 ವರ್ಷದ ಪುರುಷ ಪಿ-409116 ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಸೆಪ್ಟೆಂಬರ 4 ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಹೃದಯಾಘಾತದಿಂದಾಗಿ ಸೆಪ್ಟೆಂಬರ 6 ರಂದು ಕೋವಿಡ್-19 ಅಲ್ಲದ ಅನ್ಯ ಕಾರಣದಿಂದಾಗಿ ಮೃತಪಟ್ಟಿರುತ್ತಾರೆ.
ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19 ರ ಮಾರ್ಗ ಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.


ನಿಮ್ಮ ಅನಿಸಿಕೆ ತಿಳಿಸಿ

Read More News

ಚಿಕ್ಕಜಂತಕಲ್ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಹಾಗೂ ಉಡಿತುಂಬ ಕಾರ್ಯಕ್ರಮ

ಗಂಗಾವತಿ ; .ಚಿಕ್ಕ ಜಂಥಕಲ್ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣ ಇಲಾಖೆ ಕೃಷಿ ಇಲಾಖೆ ಇವರ ಸಂಯುಕ್ತ...

Read More

23-09-2020 07:55 AM

ಕೊವಿಡ್ ನಿಂದ‌ ಮೃತಪಟ್ಟ ವಸತಿಶಾಲೆಯ ಪ್ರಾಂಶುಪಾಲರ ಕುಟುಂಬ ವರ್ಗಕ್ಕೆ ಡಿಸಿಎಂ ಶ್ರೀ ಗೋವಿಂದ ಕಾರಜೋಳ ಅವರಿಂದ 30ಲಕ್ಷ ಚೆಕ್ ವಿತರಣೆ

ಬೆಂಗಳೂರು. ಸೆ.22; ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಮೃತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರ‌ ಬೀಡು...

Read More

23-09-2020 06:36 AM

ಕಡಬಿಯಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಇಲಾಖೆ ಶಿಶು ಅಭಿವ್ರಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಡಬಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣೆ ಅಭಿಯಾನ...

Read More

23-09-2020 06:15 AM

ಪೋಷಣ ಅಭಿಯಾನ ಯೋಜನೆ: ಪೋಷಣ ರಥಕ್ಕೆ ಚಾಲನೆ

ಧಾರವಾಡ ಸೆ.22: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಹುಬ್ಬಳ್ಳಿ-ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ಕಛೇರಿಗಳು ಪೌಷ್ಠಿಕತೆ...

Read More

22-09-2020 08:21 PM

ಸಾರ್ವಜನಿಕ ಸ್ಥಳಗಳ ಹಸರೀಕರಣಕ್ಕೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ. ಸುಂದರೇಶ್‌ಬಾಬು

ಗದಗ ಸೆ. : ಜಿಲ್ಲೆಯಲ್ಲಿ ಒತ್ತುರಿಯಾಗಿರುವ ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯ ತ್ವರಿತವಾಗಿ ಆಗಬೇಕು. ಒತ್ತುವರಿ...

Read More

22-09-2020 08:19 PM

Read More
×E-Paperಸಾಹಿತ್ಯGeneralVideos