whatsapp facebooktwitter

ಜಿಲ್ಲೆಯ ಪಾರಂಪರಿಕ ಕಟ್ಟಡಗಳ 3ಡಿ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ

ಜಿಲ್ಲೆಯ ಪಾರಂಪರಿಕ ಕಟ್ಟಡಗಳ 3ಡಿ ಡಿಜಿಟಲೀಕರಣ ಕಾರ್ಯಕ್ಕೆ ಚಾಲನೆ

15-09-2020 06:54 PM

ಶಿವಮೊಗ್ಗ, ಸೆ.15 . ಜಿಲ್ಲೆಯ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು, ಅರಮನೆ, ದೇವಸ್ಥಾನಗಳನ್ನು 3ಡಿ ಲೇಸರ್ ತಂತ್ರಜ್ಞಾನ ಬಳಸಿ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಬುಧವಾರ ಚಾಲನೆ ನೀಡುವರು.

ಜಿಲ್ಲೆಯಲ್ಲಿ 12 ಪಾರಂಪರಿಕ ಕಟ್ಟಡ, ಅರಮನೆ, ಸ್ಮಾರಕಗಳನ್ನು ಈ ಕಾರ್ಯಕ್ಕಾಗಿ ಗುರುತಿಸಲಾಗಿದೆ. ಇವುಗಳಲ್ಲಿ ಶಿವಮೊಗ್ಗ ನಗರದ ಶಿವಪ್ಪ ನಾಯಕ ಅರಮನೆ, ಕೋಟೆ ಆಂಜನೇಯ ದೇವಾಲಯ, ಶ್ರೀ ಭೀಮೇಶ್ವರ ದೇವಾಲಯ, ಕುಸ್ಕೂರಿನ ಶ್ರೀ ಭೀಮೇಶ್ವರ ದೇವಾಲಯ, ಭದ್ರಾವತಿಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ, ಹೊಸನಗರ ತಾಲೂಕಿನ ಸಾಲಗೇರಿಯ ಉಮಾಪತಿ ದೇವಾಲಯ, ಶಿವಪ್ಪ ನಾಯಕನ ಗೋಪುರ, ಶಿಕಾರಿಪುರ-ಚಿಕ್ಕಮಾಗಡಿ ಜೈನಬಸ್ತಿ, ನರಸಾಪುರ ಬಸದಿ, ಸೊರಬ ತಾಲೂಕಿನ ಪುರಗ್ರಾಮದ ಸೋಮೇಶ್ವರ ದೇವಾಲಯ, ದವನಿ ಭೈಲಿನ ಕಪಿಲೇಶ್ವರ ದೇವಾಲಯಗಳು ಸೇರಿವೆ.

ಮುಂದಿನ ದಿನಗಳಲ್ಲಿ ಸ್ಮಾರಕಗಳು ಯಾವುದೇ ಕಾರಣಕ್ಕೂ ಹಾನಿಗೊಳಗಾದರೆ, ಕಟ್ಟಡಗಳ ಮರು ನಿರ್ಮಾಣಕ್ಕೆ ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಸ್ಮಾರಕಗಳ ಯಥಾವತ್ತಾದ 3ಡಿ ವರ್ಚುವಲ್ ವಲ್ರ್ಡ್ ಅನ್ನು

Advertise

ರಚಿಸಬಹುದಾಗಿದೆ. 3ಡಿ ಸ್ಕ್ಯಾನಿಂಗ್ ಸರ್ವೆ ಮಾಡುವ ಸ್ಮಾರಕಗಳ 33ಅಂಶಗಳನ್ನು ಕ್ರೋಢೀಕರಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಸ್ಮಾರಕಗಳ ಅಳತೆ, ಆಳ, ಅಗಲ, ಸ್ಮಾರಕಕ್ಕೆ ಬಳಸಲಾಗಿರುವ ಸಾಮಾಗ್ರಿ, ನಿರ್ಮಾಣಗೊಂಡ ವರ್ಷ, ಯಾರ ಕಾಲದಲ್ಲಿ ನಿರ್ಮಾಣಗೊಂಡಿದೆ, ವರ್ಷ ಮತ್ತು ಐತಿಹಾಸಿಕ ವಿವರಗಳು, ವಾಸ್ತು ಶಿಲ್ಪದ ಶೈಲಿಯನ್ನು ಸಹ ಕ್ರೋಢೀಕರಿಸಿ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಜಿಯೋ ಸ್ಪೇಶಿಯಲ್ ತಂತ್ರಜ್ಞಾನವನ್ನು ಇದರಲ್ಲಿ ಅಡಕಗೊಳಿಸಿ, ಸ್ಮಾರಕಗಳ ಜಿಪಿಎಸ್ ಲೊಕೇಶನ್, ಛಾಯಾಚಿತ್ರ ಇರಲಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿದಾಗ ಹತ್ತಿರದ ಊರು, ತಲುಪುವ ವ್ಯವಸ್ಥೆ ಮುಂತಾದ ವಿವರಗಳು ಸಹ ಪ್ರವಾಸಿಗರಿಗೆ ಲಭ್ಯವಾಗಲಿದೆ.

ಚಾಲನೆ: ಬುಧವಾರ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಮಧ್ಯಾಹ್ನ 12ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯ ಪುರಾತತ್ವ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ಸಹಯೋಗದೊಂದಿಗೆ ಈ ಕಾರ್ಯ ನಡೆಯಲಿದೆ. ಜಿಲ್ಲಾ ಪಂಚಾಯತ್, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಎನ್‍ಆರ್‍ಡಿಎಂಎಸ್ ಕೇಂದ್ರಗಳು ನೆರವು ನೀಡುತ್ತಿವೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos