whatsapp facebooktwitter

ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

15-09-2020 07:00 PM

ಮಡಿಕೇರಿ ಸೆ.15-ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಪ್ರೋತ್ಸಾಹಧನ ಮಂಜೂರು ಮಾಡುವ ಸಂಬಂಧ ಕಾನೂನು ಪದವೀಧರರ ಶಿಷ್ಯ ವೇತನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುವ ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ಪ್ರೋತ್ಸಾಹಧನ. ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರ್‍ಜಾತಿ ವಿವಾಹವಾದಲ್ಲಿ ಅಂತವರಿಗೆ ಪ್ರೋತ್ಸಾಹಧನ, ಪರಿಶಿಷ್ಟ ಪಂಗಡದ ವಿಧವೆಯರು ಮರು ವಿವಾಹವಾದಲ್ಲಿ ಅಂತವರಿಗೆ ಪ್ರೋತ್ಸಾಹಧನ ಮತ್ತು ಪರಿಶಿಷ್ಟ ಪಂಗಡದವರು ಅಂತರ್ಜಾತಿ

Advertise

ವಿವಾಹವಾದಲ್ಲಿ ಅಂತವರಿಗೆ ಪ್ರೋತ್ಸಾಹಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಪರಿಶಿಷ್ಟ ಪಂಗಡದ ಫಲಾನುಭವಿಗಳುwww.tw.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಪೊನ್ನಂಪೇಟೆ 08274-261261 ಹಾಗೂ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ 08276-281115 ಮತ್ತು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ 08272-223552 ನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಸಿ.ಶಿವಕುಮಾರ್ ಅವರು ತಿಳಿಸಿದ್ದಾರೆ.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos