whatsapp facebooktwitter

ಯಡಿಯೂರಪ್ಪನವರಿಂದ ಎಲ್ಲರಿಗೂ ನ್ಯಾಯ : ಸಚಿವ ಬಿ.ಸಿ.ಪಾಟೀಲ್

ಯಡಿಯೂರಪ್ಪನವರಿಂದ ಎಲ್ಲರಿಗೂ ನ್ಯಾಯ : ಸಚಿವ ಬಿ.ಸಿ.ಪಾಟೀಲ್

16-09-2020 12:34 PM

ಕಲಬುರಗಿ,ಸೆ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ ಯಾರನ್ನೂ ಕೈಬಿಟ್ಟಿಲ್ಲ. ಹದಿನೇಳು ಜನರಿಗೆ ಯಡಿಯೂರಪ್ಪ ನ್ಯಾಯ ಒದಗಿಸಿದ್ದಾರೆ.ಮುಂದಿನ ದಿನಗಳಲ್ಲಿಯೂ ಒದಗಿಸುತ್ತಾರೆ.ಎಂಟಿಬಿ ನಾಗರಾಜ್, ಆರ್.ಶಂಕರ್ ಅವರಿಗೂ ಸಚಿವಸ್ಥಾನ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರರಂಗ ಮೊದಲು ಈ ರೀತಿಯಾಗಿ ಇರಲಿಲ್ಲ.ಆದರೆ ಇತ್ತೀಚೆಗೆ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುವ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಸಹ ಹಾಳು ಮಾಡುತ್ತಿದ್ದಾರೆ.ಡ್ರಗ್ ವ್ಯಸನಿ ಕಲಾವಿದರನ್ನು ಅನುಕರಿಸಿದರೆ ದೇಶಕ್ಕೆ ಮಾರಕವಾಗಲಿದೆ.ಡ್ರಗ್ಸ್ ವ್ಯಸನ ಚಿತ್ರರಂಗಕ್ಕೆ

Advertise

ಪೂರಕವಲ್ಲ.ಚಿತ್ರರಂಗದಲ್ಲೀಗ ನಮಸ್ಕಾರ ಸಂಸ್ಕೃತಿ ಬಿಟ್ಟುಹೋಗಿ ಹಾಯ್, ಬಾಯ್ ಸಂಸ್ಕೃತಿ ಬಂದಿದೆ. ಆದರೆ ತಮ್ಮ ಅವಧಿಯಲ್ಲಿ ಕ್ಯಾಮೆರಾ ಮತ್ತು ಕ್ಯಾಮೆರಾಮೆನ್ ಗಳಿಗೂ ನಮಸ್ಕಾರ ಮಾಡುತ್ತಿದ್ದೆವು.ಹಿಂದಿನಂತಹ ಸಂಸ್ಕೃತಿ ಈಗ ಚಿತ್ರರಂಗದಲ್ಲಿ ಕಾಣಲಾಗುತ್ತಿಲ್ಲ.ಎಂದಿಗೂ ನಮ್ಮ ಸಂಸ್ಕೃತಿ ಪಾವಿತ್ರತೆಯನ್ನು ಕೈಬಿಡಬಾರದು ಎಂದರು.
ಕ್ಯಾಸಿನೋಗೆ ಹೊರದೇಶದಲ್ಲಿ ಅನುಮತಿ ನೀಡಲಾಗಿದೆ.ಗೋವಾದಲ್ಲಿಯೂ ಇದೆ. ಕ್ಯಾಸಿನೋಗೆ ಹೋದ ಮಾತ್ರಕ್ಕೆ ಡ್ರಗ್ಸ್ ಸೇವಿಸುತ್ತಾರೆ ಎಂದರ್ಥವಲ್ಲ. ಜಮೀರ್ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾರೆಯೋ ಇಲ್ಲವೋ ಎಂಬುದು ತನಿಖೆಯಿಂದ ತಿಳಿಯಲಿದೆ. ಜಮೀರ್ ಆಗಾಗ ಪ್ರಚಾರಕ್ಕಾಗಿ ಹೇಳಿಕೆಗಳನ್ನು ಕೊಡುವುದು ಸಹಜ.ಮೊದಲು ಯಡಿಯೂರಪ್ಪ ಮನೆಗೆ ಕಾವಲುಗಾರನಾಗುತ್ತೇನೆ ಎಂದಿದ್ದರು.ಇದೀಗ ಆರೋಪ ಸಾಬೀತಾದರೆ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುವುದಾಗಿ ಹೇಳಿದ್ದಾರಷ್ಟೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

Advertise

ನಿಮ್ಮ ಅನಿಸಿಕೆ ತಿಳಿಸಿ

Read More News

ಹಿಂದಿ ಹೇರಿಕೆ ಸುಪ್ರೀಂ ಸಲಹೆ ತಿರಸ್ಕಾರ ಪ್ರಜ್ವಲ್ ರೇವಣ್ಣ ಕಿಡಿ

ಬೆಂಗಳೂರು ; ಭಾಷಾ ನೀತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಸಲಹೆಯನ್ನು ತಿರಸ್ಕರಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ...

Read More

18-09-2020 07:05 AM

ಹಿಂದಿ ಹೇರಿಕೆ ಬಗ್ಗೆ ನಟ ಜಗ್ಗೇಶ್ ಅಸಮಾಧಾನ

ಬೆಂಗಳೂರು ; ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ ನನ್ನ ಮನಃಸಾಕ್ಷಿ ಅರಿತು ಈ ಮಾತು...

Read More

18-09-2020 07:01 AM

ಯಡಿಯೂರಪ್ಪ ನಿರ್ಮಲಾ ಸೀತಾರಾಮನ್ ಭೇಟಿ

ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ, ರಾಜ್ಯದಲ್ಲಿ...

Read More

17-09-2020 10:04 PM

ಯಡಿಯೂರಪ್ಪ ರಾಜನಾಥ್ ಸಿಂಗ್ ಭೇಟಿ

ನವದೆಹಲಿ ಸೆಪ್ಟೆಂಬರ್ 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಈ...

Read More

17-09-2020 10:02 PM

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕರ್ನಾಟಕ ವಾಗಬೇಕಾದರೆ ಶಿಕ್ಷಣ ಅಗತ್ಯ

ಕುಷ್ಟಗಿ-ನಮ್ಮಲ್ಲಿ ಕೂಡ ಸಂಪತ್ತು ಸಾಕಷ್ಟು ಇದ್ದು ಆದರೆ ನಮ್ಮಲ್ಲಿ ಅನಕ್ಷರತೆ ಇನ್ನೂ ಜೀವಂತ ಇದ್ದು ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿದ್ದರಿಂದ...

Read More

17-09-2020 09:55 PM

Read More
×E-Paperಸಾಹಿತ್ಯGeneralVideos