This is the title of the web page
This is the title of the web page

Please assign a menu to the primary menu location under menu

Local News

ದಿ. ೦೭ ರಿಂದ ಕರಗುಪ್ಪಿಯ ಗ್ರಾಮದೇವತೆ ಜಾತ್ರಾ ಮಹೋತ್ಸವ


ಯಮಕನಮರಡಿ: ಪ್ರತಿ ೯ ವರ್ಷಕ್ಕೊಮ್ಮೆ ಜರುಗುವ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದ ಗ್ರಾಮದೇವತೆ ಶ್ರೀ ದ್ಯಾಮವ್ವಾದೇವಿ ಹಾಗೂ ಶ್ರೀ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವವು ಮಂಗಳವಾರ ದಿ. ೦೭-೦೩-೨೦೨೩ ರಿಂದ ಬುಧವಾರ ದಿ. ೧೫-೦೩-೨೦೨೩ ರವರಗೆ ೯ ದಿನಗಳ ಕಾಲ ನಡೆಯಲಿದೆ.
ಮಂಗಳವಾರಿ ದಿ. ೦೭ ರಂದು ಮುಂಜಾನೆ ಶ್ರೀದೇವಿಯರಿಗೆ ಪೂಜೆ ಅಲಂಕಾರ, ಅಭಿಷೇಕ ಹೋಮ ಸಂಜೆ ಶ್ರೀ ಲಕ್ಷ್ಮೀದೇವಿ ಗುಡಿಗೆ ಪಲ್ಲಕ್ಕಿಗಳ ಆಗಮನ ಸಾಯಂಕಾಲ ಕಳಸಾರೋಹಣ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಸಂಜೆ ೭ ಗಂಟೆಯಿಂದ ಶ್ರೀ ಗ್ರಾಮದೇವತೆಯ ಉಡಿ ತುಂಬುವ ಕಾರ್ಯಕ್ರಮವಿದೆ.
ಬುಧವಾರ ದಿ. ೦೮ ರಂದು ಮುಂಜಾನೆ ೮ ಗಂಟೆಗೆ ಶ್ರೀ ಗ್ರಾಮದೇವಿಯ ಹೊನ್ನಾಟ ಸಾಯಂಕಾಲವರೆಗೆ ಜರುಗುವುದು. ಮತ್ತು ಅದೇ ದಿವಸ ರಥದಲ್ಲಿ ಮೂರ್ತಿ ಪ್ರತಿಷ್ಠಾಪನೆ ರಾತ್ರಿ ೧೦.೩೦ಕ್ಕೆ ಶ್ರೀ ಲಕ್ಷ್ಮೀದೇವಿ ನಾಟ್ಯ ಸಂಘ ಕರಗುಪ್ಪಿ ಇವರು ಅರ್ಪಿಸುವ ನಾಟಕ ವಾಲ್ಮೀಕಿ ಹುಲಿ ಪ್ರದರ್ಶನವಾಗಲಿದೆ.
ಗುರುವಾರ ದಿ. ೦೯ ರಂದು ಮುಂಜಾನೆ ಡೊಳ್ಳಿನ ವಾಲಗ ಮಧ್ಯಾಹ್ನ ೩ ಗಂಟೆಗೆ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಕುಂದರಗಿ ಇವರ ಅಮೃತ ಹಸ್ತದಿಂದ ರಥೋತ್ಸವ ಜರುಗುವುದು.
ಶುಕ್ರವಾರ ದಿ. ೧೦ ರಂದು ಮುಂಜಾನೆ ಪಲ್ಲಕ್ಕಿ ಉತ್ಸವ ಮತ್ತು ಮಧ್ಯಾಹ್ನ ೩.೩೦ಕ್ಕೆ ಪೈಲ್ವಾನರಿಂದ ಜಂಗೀ £ಕಾಲಿ ಕುಸ್ತಿಗಳು ಇರುತ್ತವೆ. ರಾತ್ರಿ ೧೦.೩೦ಕ್ಕೆ ಶ್ರೀ ಸಿಮಿದೇವಿ ನಾಟ್ಯ ಸಂಘ ಕರಗುಪ್ಪಿ ಇವರು ಅರ್ಪಿಸುವ ಮನೆಯ ಮಾನ ಅಣ್ಣನ ಪ್ರಾಣ ಎಂಬ ನಾಟಕ ಜರುಗುವುದು.
ಶ£ವಾರ ದಿ. ೧೧ ರಂದು ಮುಜಾನೆ ೧೦ ಗಂಟೆಗೆ ಕುದರೆ ಗಾಡಿ ಷರತ್ತಗಳಿವೆ. ಮದ್ಯಾಹ್ನ ೩.೩೦ಕ್ಕೆ ಜಂಗಿ ಕುಸ್ತಿಗಳಿವೆ. ರಾತ್ರಿ ೧೦.೩೦ಕ್ಕೆ ಶ್ರೀ ಬಸವೇಶ್ವರ ನಾಟಕ ಕಂಪ£ ಮೆಳವಂಕಿ ತಾ. ಗೋಕಾಕ ಇವರಿಂದ ದುಡ್ಡು ದಾರಿ ಬಿಡಿಸಿತು ಎಂಬ ನಾಟಕವಿದೆ.
ರವಿವಾರ ದಿ. ೧೨ ರಂದು ಮುಂಜಾನೆ ೧೦ ಗಂಟೆಗೆ ಟಗರಿನ ಕಾಳಗವಿದೆ. ರಾತ್ರಿ ೧೦.೩೦ ಶ್ರೀ ಬಸವೇಶ್ವರ ನಾಟಕ ಕಂಪ£ ಮೆಳವಂಕಿ ತಾ. ಗೋಕಾಕ ಇವರಿಂದ ತಾಯಿಗೆ ಮಗನ್ಯಾರು ಎಂಬ ನಾಟಕವಿದೆ.
ಸೋಮವಾರ ದಿ. ೧೩ ರಂದು ಮುಂಜಾನೆ ೧೦ ಗಂಟೆಗೆ ಸೈಕಲ್ ಷರತ್ತುಗಳಿವೆ. ರಾತ್ರಿ ೧೦.೩೦ ಕ್ಕೆ ಶ್ರೀ ಜೈಹನುಮಾನ ನಾಟ್ಯ ಸಂಘ ತುಳಸಗಿರಿ ತಾ. ಬಾಗಲಕೋಟ ಇವರಿಂದ ಶ್ರೀ ಕೃಷ್ಣ ಪಾರಿಜಾತ ನಾಟಕ ಜರುಗಲಿದೆ.
ಮಂಗಳವಾರ ದಿ. ೧೪ ರಂದು ಮುಂಜಾನೆ ಡೊಳ್ಳಿನ ವಾಲಗ, ಮತ್ತು ರಂಗೋಲಿ ಸ್ಪರ್ದೆಗಳಿವೆ. ರಾತ್ರಿ ೧೦.೩೦ಕ್ಕೆ ಸಿಂಚನಾ ಮೆಲೋಡಿಸ್ ಆರ್ಕಸ್ಟ್ರಾ ಹುಬ್ಬಳ್ಳಿ ಇವರಿಂದ ಆರ್ಕೇಸ್ಟ್ರಾ ಕಾರ್ಯಕ್ರಮವಿದೆ.
ಬುಧವಾರ ದಿ. ೧೫ ರಂದು ಮುಂಜಾನೆ ಡೊಳ್ಳಿನ ವಾಲಗ ಮತ್ತು ಕಳಸ ಇಳಿಸುವ ಕಾರ್ಯಕ್ರಮವಿದೆ. ರಾತ್ರಿ ೧೦.೩೦ ಕ್ಕೆ ಗ್ರಾಮದೇವಿಯನ್ನು ಸೀಮೆಗೆ ಕಳುಹಿಸಿಕೊಡಲಾಗುವುದು.
ದಿ. ೦೭ ರಿಂದ ದಿ ೧೧ ರಂದು ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ಮತ್ತು ಜಂಗಿ £ಕಾಲಿಕುಸ್ತಿಗಳ ಬಹುಮಾನ ಶಾಸಕ ಸತೀಶ ಜಾರಕಿಹೊಳಿಯವರಿಂದ ಆಯೋಜಿಸಿದ್ದಾರೆ.


Gadi Kannadiga

Leave a Reply