This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಗ್ರಾಮ ಆರೋಗ್ಯ ಅಭಿಯಾನ


ಬೆಳಗಾವಿ, ಮೇ.೨೪ : ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮೇ.೨೨ ರಿಂದ ಗ್ರಾಮ ಆರೋಗ್ಯ ಅಭಿಯಾನ ಆರಂಭಿಸಲಾಗಿದ್ದು, ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನದಲ್ಲಿ ನರೇಗಾ ಕೂಲಿಕಾರರು ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಆರೋಗ್ಯ ಅಭಿಯಾನ ಆರಂಭವಾಗಿದೆ. ಈ ಅಭಿಯಾನದ ಮೂಲಕ ಪ್ರತಿಯೊಬ್ಬ ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ ನಡೆಯಲಿದೆ. ಜತೆಗೆ ನರೇಗಾ ಕೂಲಿಕಾರರು ಕೆಲಸ ಮಾಡುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ.
ಒಂದು ತಿಂಗಳ ಕಾಲ ಶಿಬಿರ ನಡೆಯಲಿದ್ದು, ಜಿಲ್ಲೆಗೆ ಕನಿಷ್ಠ ೨ ಲಕ್ಷ ೧೫ ಸಾವಿರ ಕೂಲಿಕಾರರನ್ನು ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಆರಂಭಿಸಿರುವ “ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ” ಆರೋಗ್ಯ ಇಲಾಖೆ ಹಾಗೂ ಏಊPಖಿ ವತಿಯಿಂದ ಈಗಾಗಲೇ ಮಹಾತ್ಮ ಗಾಂಧಿ ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಇದನ್ನು ಹೆಚ್ಚಿನ ಕೂಲಿಕಾರರಿಗೆ ವಿಸ್ತರಿಸುವ ಸಲುವಾಗಿ ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಠ ೪೩೦ ಕೂಲಿಕಾರರನ್ನು ಹಾಗೂ ಜಿಲ್ಲೆಗೆ ಕನಿಷ್ಠ ೨ ಲಕ್ಷ ೧೫ ಸಾವಿರ ತಪಾಸಣೆ ಮಾಡುವ ಗುರಿ ಹೊಂದಿದು,್ದ ಮೇ ೨೨ ರಿಂದ ಒಂದು ತಿಂಗಳವರೆಗೆ ಗ್ರಾಮ ಆರೋಗ್ಯ ಅಭಿಯಾನದ ಶಿಬಿರಗಳು ನಡೆಯಲಿವೆ.
ಸದರಿ ಶಿಬಿರದಲ್ಲಿ ಓಅಆ, ಂಟಿemiಚಿ, Uಟಿಜeಡಿ ಓuಣಡಿiಣioಟಿ, ಖಿಃ ಚಿಟಿಜ ಒeಟಿಣಚಿಟ ಊeಚಿಟಣh ಹೀಗೆ ಕೂಲಿಕಾರರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಲಾಗುವುದು. ವೈದ್ಯರು ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಲಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿನ ನರೇಗಾ ಕೂಲಿಕಾರರ ಆರೋಗ್ಯದ ಸ್ವಾಸ್ಥö್ಯ ಕಾಪಾಡುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆಯುತ್ತಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತಿ ಸಂಪರ್ಕಿಸಿ ಅಭಿಯಾನದ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.


Leave a Reply