This is the title of the web page
This is the title of the web page

Please assign a menu to the primary menu location under menu

State

ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ದಿನಾಚರಣೆ


ಸಂಡೂರು: ಆ: ೨೩: ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಅರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಪುರಸಭೆ ಸದಸ್ಯರಾದ ಕೆ.ಕಲ್ಗುಡೆಪ್ಪ ಅವರು ಮಹಿಳೆಯರು ಮತ್ತು ಮಕ್ಕಳು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕಿದೆ, ಒಳ್ಳೆಯ ಆಹಾರ ಸೇವನೆ ಮಾಡಿ ಎಂದು ಸಲಹೆ ನೀಡಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಉತ್ತಮ ಆಹಾರದಿಂದ ಆರೋಗ್ಯವಂತ ಮಗು ಪಡೆಯಲು ಸಾಧ್ಯ,ಗರ್ಭಿಣಿ ಮಹಿಳೆಯರು ಹೆಚ್ಚು ಹೆಚ್ಚು ಪೌಷ್ಟಿಕಾಹಾರವನ್ನು ಪ್ರಾರಂಭದಿಂದಲೇ ಸೇವಿಸ ಬೇಕು,ಮೊಳಕೆ ಕಟ್ಟಿದ ಕಾಳು,ಹಸಿರು ಸೊಪ್ಪು, ಹಣ್ಣುಗಳು,ಹಾಲು ತುಪ್ಪ, ಮೊಸರು, ಬೆಲ್ಲಾ,ಶೇಂಗಾ,ಕಡಲೆ,ಮೊಟ್ಟೆ ಸೇವಿಸುವುದರಿಂದ ರಕ್ತ ವೃದ್ಧಿಯಾಗುತ್ತದೆ,೧೪ ಗ್ರಾಂ ರಕ್ತ ಹೊಂದಿದ ಮಹಿಳೆಗೆ ಹೆರಿಗೆ ಸುಲಭವಾಗಲಿದೆ, ಕಾಲಕಾಲಕ್ಕೆ ಗರ್ಭವನ್ನು ಮತ್ತು ರಕ್ತವನ್ನು ತಪಾಸಣೆ ಮಾಡಿಸಿಕೊಳ್ಳಬೇಕು, ಹೆರಿಗೆಗೆ ಪೂರ್ವದಲ್ಲೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು, ಜನಿಸಿದ ಕೂಡಲೆ ಶಿಶುಗೆ ಎದೆ ಹಾಲು ಪ್ರಾರಂಭಿಸಿ ಪೂರ್ಣ ಅವಧಿಯವರೆಗೆ ಎದೆ ಕೊಡಬೇಕು, ಬಯಲು ಶೌಚ ಬೇಡ, ಶೌಚ ಗೃಹದಲ್ಲೆ ಶೌಚಕ್ಕೆ ಹೋಗಬೇಕು, ಬಂದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯ ಬೇಕು, ಶಿಶುಗಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ಕೊಡಿಸ ಬೇಕು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಬಸಮ್ಮ ಮತ್ತು ನೀಲಮ್ಮ ಅವರು ಏಕದಳ ಮತ್ತು ದ್ವಿದಳ ಧಾನ್ಯಗಳು,ಬೆಲ್ಲ, ಸೊಪ್ಪುಗಳ ಕುರಿತು ಚಾರ್ಟ್ ಮೂಲಕ ಮಾಹಿತಿ ನೀಡಿದರು,
ಈ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಕೆ.ಕಲ್ಗುಡೆಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಆಶಾ ಸುಶೀಲಮ್ಮ,ತಿಮ್ಮಕ್ಕ, ಅಂಗನವಾಡಿ ಕಾರ್ಯಕರ್ತೆ ಮಾರೆಕ್ಕ, ಅಂಬಮ್ಮ, ಗರ್ಭಿಣಿ ಮಹಿಳೆಯರಾದ ನೀಲಾವತಿ,ಗೀತಾ,ಸರೋಜಾ,ರೇಣುಕಾ,ಜಡೆಮ್ಮ,ಜ್ಯೋತಿ, ಹುಲಿಗೆಮ್ಮ,ಪುಷ್ಪವತಿ,ಗೌರಿ,ರಸಿಕಾ ಸುಷ್ಮಾ ಇತರರು ಹಾಜರಿದ್ದರು.


Leave a Reply