This is the title of the web page
This is the title of the web page

Please assign a menu to the primary menu location under menu

State

ಹುಲಿಗಿಯಲ್ಲಿ ವಯಲ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಯಶಸ್ವಿ


ಕೊಪ್ಪಳ, ಸೆ. ೨೨ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹುಲಿಗಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ವಲಯ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರದಲ್ಲಿ ಮಂಗಳವಾರದಂದು (ಸೆ.೨೦) ಹುಲಿಗಿ ಗ್ರಾಮದ ಸಮುದಾಯ ಭವನ, ವಲಯ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮೇಲ್ವಿಚಾರಕಿ ಗಾಯತ್ರಿ ದೇವಾಂಗದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಣ್ ಮಾಸಾಚರಣೆಯ ಪ್ರಮುಖ ಅಂಶಗಳಾದ ರಕ್ತಹೀನತೆ ತಡೆಯುವುದು, ಪೋಷಣ್ ಅಭಿಯಾನ ಯೋಜನೆಯಡಿ ಬರುವ ಪ್ರತಿಯೊಂದು ಸೌಲಭ್ಯವನ್ನು ಪಡೆದುಕೊಂಡು ಅಪೌಷ್ಠಿಕತೆಯನ್ನು ತೊಲಗಿಸುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯ ಎಂದು ಅಭಿಪ್ರಾಯ ಪಟ್ಟರು. ಹಾಗೂ ಇಲಾಖೆಯ ಮಾತೃ ವಂದನಾ, ಮಾತೃ ಪೂರ್ಣ ಯೋಜನೆಯ ಸದುಪಯೋಗ ಪಡೆಯಬೇಕು. “ಅಪೌಷ್ಟಿಕತೆ ಮುಕ್ತ ದೇಶವನ್ನಾಗಿ ಮಾಡಲು ನಾವೆಲ್ಲರೂ ಕೈ ಜೋಡಿಸೋಣ” ಎಂದು ಅಭಿಪ್ರಾಯ ಪಟ್ಟರು. ಪೌಷ್ಟಿಕತೆಯ ಕುರಿತು, ಸಿರಿ ಧಾನ್ಯಗಳ ಬಳಕೆ ಕುರಿತು, ಅಂಗನವಾಡಿಯಲ್ಲಿ ವಿತರಣೆ ಮಾಡುವ ಆಹಾರ ಪದಾರ್ಥಗಳನ್ನು ಉಪಯೋಗಿಸಲು ಹೇಳಿದರು.
ಕಾರ್ಯಕ್ರಮದಲ್ಲಿ ಒಂದನೇ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ, ಹೀಗೆ ಪೋಷಣ್ ಮಾಸಾಚರಣೆಯ ಕಾರ್ಯಕ್ರಮವು ಸೆಪ್ಟೆಂಬರ್ ೩೦ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಅಂಗನವಾಡಿಯಲ್ಲಿ ಪ್ರತಿದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ ನಾಗರಾಜ ಹಾಗೂ ಸದಸ್ಯರು, ಆರೋಗ್ಯ ವೈಧ್ಯಾಧಿಕಾರಿಗಳಾದ ಅರ್ಪಿತಾ ಮತ್ತು ಶಿವಾನಿ, ಮಾಜಿ ತಾಲೂಕಾ ಪಂಚಾಯತಿ ಸದಸ್ಯ ಪಾಲಾಕ್ಷಪ್ಪ, ತುಂಗಭದ್ರ ಶಾಲೆಯ ಮುಖೋಪಾಧ್ಯಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ವಲಯದ ಮೇಲ್ವಿಚಾರಕಿಯರಾದ ಜಯಶ್ರೀ ಕೆ, ಪೀತಿ ಕೋರೆ, ವಿಶಾಲಾಕ್ಷಿ ಬಿಂಗಿ, ಹಿಟ್ನಾಳ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಮುದ್ದು ಮಕ್ಕಳು ಸೇರಿದಂತೆ ಇತರರು ಉಪಸ್ಥಿತಿದ್ದರು.


Gadi Kannadiga

Leave a Reply