This is the title of the web page
This is the title of the web page

Please assign a menu to the primary menu location under menu

State

ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ :ಅರಗ ಜ್ಞಾನೇಂದ್ರ ಅಭಿನಂದನೆ


ಪ್ರತಿಷ್ಟಿತ ರಾಜ್ಯ ಸಭಾ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಗಳಾದ ಗೌರವಾನ್ವಿತ ಶ್ರೀ ವೀರೇಂದ್ರ ಹೆಗ್ಗಡೆ ಯವರನ್ನು
ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಅಭಿನಂದಿಸಿದ್ದಾರೆ

ಈ ಕುರಿತು ಹೇಳಿಕೆ ನೀಡಿರುವ, ಗೃಹ ಸಚಿವರು, ಮಾನ್ಯ ಹೆಗ್ಗಡೆಯವರ ನೇಮಕ, ಇಡೀ ರಾಜ್ಯದ ಜನತೆಗೆ ಸಂತಸ ತಂದಿದೆ, ಎಂದಿದ್ದಾರೆ.

ರಾಜ್ಯ ಸಭಾ ನಾಮ ನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಿದ ಕೇಂದ್ರ ಸರಕಾರ ವನ್ನೂ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

ಮಾನ್ಯ ವೀರೇಂದ್ರ ಹೆಗ್ಗಡೆ ಯವರ ದೂರದರ್ಶಿತ್ವ ಸಮಾಜಸೇವಾ ಕಾರ್ಯಗಳಿಂದ, ಗ್ರಾಮೀಣ ಜನತೆಯ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಬಲೀಕರಣ ಕಾರ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ ಎಂದು ಸಚಿವರು ಹೇಳಿದ್ದಾರೆ.

ನೇಮಕಕ್ಕೆ ಕಾರಣರಾದ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆ ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರನ್ನೂ ಸಚಿವರು ಅಭಿನಂದಿಸಿದ್ದಾರೆ.


Gadi Kannadiga

Leave a Reply