ಸಿರವಾರ:-ತಾಲೂಕಿನ ಕರ್ನಾಟಕ ಪತ್ರಕರ್ತರ ಸಂಘದ ನೂತನ ಸಿರವಾರ ತಾಲೂಕ ಅಧ್ಯಕ್ಷರಾಗಿ ವಿರೂಪಾಕ್ಷಿ ಗೌಡ ಮರಾಠ ಇವರನ್ನು ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ ಶಿವಪೂಜಿ ರವರ ಸೂಚನೆ ಮೇರೆಗೆ ನೇಮಕ ಮಾಡಿ ಆದೇಶಿಸಲಾಗಿದೆ.
ಹೊಸ ವರ್ಷ ಯುಗಾದಿ ದಿನದಂದು ಪಾದರ್ಪಣೆ ಮಾಡುವ ನನಗೆ ನಮ್ಮ ಭಾಗದ ನಡೆದಾಡುವ ದೇವರು ಪರಮಪೂಜ್ಯ ನವಲಕಲ್ ಶ್ರೀಗಳಾದ ಅಬಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಹೈಕೋರ್ಟ್ ನ್ಯಾಯಾಧೀಶರಾದ ಎನ್ ಎಸ್ ಪಾಟೀಲ್ ಮತ್ತು ಮಾನ್ವಿ ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್, ಗಂಗಾಧರ್ ನಾಯಕ್ ಹಾಗೂ ಕರ್ನಾಟಕ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಶರಣಪ್ಪ ಗುಮಗೇರಾ ಕೊಪ್ಪಳ ಹಾಗೂ ಸಿರವಾರ ಬಿಜೆಪಿ ಮಂಡಲ ಅಧ್ಯಕ್ಷರಾದ ದೇವರಾಜ್ ಗೌಡ ಇವರ ನೇತೃತ್ವದಲ್ಲಿ ಸಿರವಾರ ತಾಲೂಕಿನ ನೂತನ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರನ್ನಾಗಿ ವಿರುಪಾಕ್ಷಿ ಗೌಡ ಮರಾಠ ಅವರನ್ನು ನೇಮಕ ಮಾಡಿ ಆದೇಶಿಸಿದ್ದು ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಮಹೆಬೂಬ್ ಮಾಚನೂರು ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ಚಾಗಿ ಬಾಗಲವಾಡ ಇವರಿಗೆ ಆದೇಶ ಪತ್ರ ನೀಡಿ ಶುಭ ಕೋರಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಖ್ಯಾತ ಕಾಮಿಡಿ ಕಲಾವಿದರು ಜೀ ಕನ್ನಡ ಖ್ಯಾತಿಯ ಅಪ್ಪಣ್ಣ ಮತ್ತು ವಾಣಿಗೌಡ ಕನ್ನಡ ಸಿಂಗರ್ ಬಾಳು ಬೆಳಗುಂದಿ ಸಹ ಉಪಸ್ಥಿತರಿದ್ದರು