ಬೆಳಗಾವಿ, ಮಾ.೨೮: ತಾಲ್ಲೂಕಿನಲ್ಲಿ ಕಡೆಮೆ ಮತದಾನವಾಗಿರುವ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣ ಮತದಾನವಾಗುವಂತೆ ವಿಷೇಶ ಚೇತನರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ ಹೇಳಿದರು.
ನಗರದ ತಾಲ್ಲೂಕ ಪಂಚಾಯತ ಕಾರ್ಯಾಲಯದಲ್ಲಿ ಮಂಗಳವಾರ ಮಾರ್ಚ ೨೮ ರಂದು ಜಿಲ್ಲಾ ಹಾಗೂ ತಾಲ್ಲೂಕ ಪಂಚಾಯತಿ ವತಿಯಿಂದ ಆಯೋಜಿಸಿದ್ದ ವಿಷೇಶ ಚೇತನರಿಗೆ ಮತದಾನ ಜಾಗೃತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ವಿಷೇಶ ಚೇತನರ ಮತ ಅತೀ ಅಮೂಲ್ಯವಾದುದು ಆದ್ದರಿಂದ ಮತದಾನದಿಂದ ಯಾರು ವಂಚಿತರಾಗದೆ ಎಲ್ಲ ವಿಷೇಶ ಚೇತನರು ಮತದಾನ ಮಾಡಬೇಕು. ವಿಷೇಶ ಚೇತನರಿಗೆ ಮತಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೈಕ್ ಜಾಥಾ, ಕಾಲು ನಡೇಗೆ ಜಾಥಾ ಸೇರಿದಂತೆ ಇತರ ವಿಷೇಶ ಜಾಥಾಗಳನ್ನು ಆಯೋಜಿಸುವ ಮೂಲಕ ವಿಷೇಶ ಚೇತನರಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ ಅವರು ಸ್ವಾಗತಿಸಿ ವಂದಿಸಿದರು. ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಗಣೇಶ ಕೆ.ಎಸ್., ಜಿಲ್ಲಾ ಐಇಸಿ ಸಂಯೋಜಕರಾದ ಪ್ರಮೋದ ಗೋಡೆಕರ್, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕರಾದ ಬಾಹುಬಲಿ ಮೆಳವಂಕಿ ತಾಲ್ಲೂಕು ಐಇಸಿ ಸಂಯೋಕರಾದ ರಮೇಶ ಮಾದರ ಸೇರಿಂದತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಇದ್ದರು.
Gadi Kannadiga > Local News > ವಿಷೇಶ ಚೇತನರ ಮತ ಅಮೂಲ್ಯ : ರವಿ ಬಂಗಾರಪ್ಪನವರ
ವಿಷೇಶ ಚೇತನರ ಮತ ಅಮೂಲ್ಯ : ರವಿ ಬಂಗಾರಪ್ಪನವರ
Suresh28/03/2023
posted on
