ಯರಗಟ್ಟಿ : ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಪೈಪೋಟಿ ನಡೆದಿದ್ದ ಸವದತ್ತಿ ಯಲ್ಲಮ್ಮನ ವಿಧಾನಸಭಾ ಕ್ಷೇತ್ರದ ಚುನಾವಣಾ ತಿರ್ಪು ಈಗ ಹೊರಬಿದ್ದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಜಿದ್ದಿನ ಕಣವಾಗಿದ್ದ ಕ್ಷೇತ್ರ ಸವದತ್ತಿ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿದ್ದರು.
ಒಂದು ಕಡೆ ನೋಡುವುದಾದರೆ, ಕಾಂಗ್ರೆಸ್ ನ ಗ್ಯಾರಂಟಿ ಹವಾನೇ ಅಭ್ಯರ್ಥಿಗಳನ್ನು ಜಯಗಳಿಸಿದೆ ಅಂತನೇ ಹೇಳಬಹುದು.
ಈ ವೇಳೆ ಯರಗಟ್ಟಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನಿಖಿಲ ದೇಸಾಯಿ, ಫೀರೋಜ ಖಾದ್ರಿ, ದೀಪಕ್ ಕಟ್ಟಿಮನಿ, ಶಿವಾನಂದ ಕರಿಗೋಣ್ಣವರ, ರಫೀಕ ಡಿ. ಕೆ, ನಿಖಿಲ ಪಾಟೀಲ, ರಾಮನಗೌಡ ಪಾಟೀಲ, ವಿಕ್ರಮ ದೇಸಾಯಿ, ಅರುಣ ಪಟ್ಟೇದ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಗಂಗರಡ್ಡಿ, ಫಕ್ಕೀರಪ್ಪ ಕಿಲಾರಿ, ಅಬೀದಬೇಗ ಜಮಾದಾರ, ಗುಂಡುಗೌಡ ಮಿಕಲಿ, ಮಂಜುನಾಥ ಭಾವಿಹಾಳ, ಕೆ. ಎಫ್. ನದಾಫ, ಹನುಮಂತ ಹಾರುಗೋಪ್ಪ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅನೇಕರು ಉಪಸ್ಥಿತರಿದ್ದರು.
sÀಲಿತಾಂಶ ವಿವರ :
ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವಸಂತ ವೈದ್ಯ ಪಡೆದ ಮತಗಳು: ೭೧೨೨೪
ಬಿಜೆಪಿ ಅಭ್ಯರ್ಥಿ ರತ್ನ ಆನಂದ ಮಾಮನಿ ಪಡೆದ ಮತಗಳು ೫೬೫೨೯
೧೪,೬೯೫ ಮತಗಳಿಂದ ವೈದ್ಯ ಗೆಲುವು.
Gadi Kannadiga > Local News > ಐತಿಹಾಸಿಕ ಕ್ಷೇತ್ರದಲ್ಲಿ ವಿಶ್ವಾಸ ವೈದ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು
ಐತಿಹಾಸಿಕ ಕ್ಷೇತ್ರದಲ್ಲಿ ವಿಶ್ವಾಸ ವೈದ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು
Suresh13/05/2023
posted on
