This is the title of the web page
This is the title of the web page

Please assign a menu to the primary menu location under menu

State

ಹಿಂದುಳಿದ, ದಲಿತ ಮಠಾಧೀಶರ  ನಿಯೋಗ ಸಿ ಎಂ  ಬಸವರಾಜ್ ಬೊಮ್ಮಾಯಿ ಭೇಟಿ 


 

ಬೆಂಗಳೂರು : ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ (ರಿ) ಚಿತ್ರದುರ್ಗ ದ ಶ್ರೀಗಳ ನಿಯೋಗ ಭೇಟಿ ಮಾಡಿದ ಸಂದರ್ಭ.
ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಉಪ್ಪಾರ, ಮಡಿವಾಳ ಶ್ರೀಗಳು ಸೇರಿದಂತೆ ಹಲವಾರು ಹಿಂದುಳಿದ, ದಲಿತ ಮಠಾಧೀಶರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭೇಟಿ ಮಾಡಿದ ಸಂದರ್ಭದಲ್ಲಿ ಶ್ರೀಗಳ ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಕನಕಗುರು ಪೀಠದ ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಈ ಹಿಂದೆ ಇದ್ದ ಬಿ ಎಸ್ ಯಡಿಯೂರಪ್ಪ ಸರ್ಕಾರವರು ಕೂಡ ನಮ್ಮ ಒಕ್ಕೂಟದ ಶ್ರೇಯೋಭಿವೃದ್ಧಿಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಮುಂದಾಳತ್ವದಲ್ಲಿ ಸುಮಾರು 90ಕೋಟಿ ರೂಗಳನ್ನು ಮಂಜೂರು ಮಾಡಿಸಿ ನಮ್ಮ ಮಠಗಳಿಗೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಸಹಕಾರ ನೀಡಿದೆ ಎಂದು ಹೇಳಲು ಸಂತಸ ಎನಿಸುತ್ತದೆ.

ಈಗಲೂ ಕೂಡ ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪರವರ ನೇತೃತ್ವದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಆಶಯಗಳ ಈಡೇರಿಕೆಗೆ ಸರ್ವರೀತಿಯಲ್ಲಿ ಸ್ಪಂಧಿಸುತ್ತಿರುವುದನ್ನು ಇಲ್ಲಿ ನೆನೆಸಿಕೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ಅದನ್ನು ನೆನೆದುಕೊಳ್ಳದಿದ್ದರೆ ತಪ್ಪಾಗುತ್ತದೆ. ಮಠಮಾನ್ಯಗಳು ಸಾಮಾಜಿಕ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ಗ್ರಾಮೀಣಭಾಗದಲ್ಲಿ ನೀಡುತ್ತಿರುವುದು ಅಭಿನಂದನಾರ್ಹ ಮತ್ತು ಶ್ಲಾಘನೀಯ.

ಇಷ್ಟು ವರ್ಷಗಳ ಕಾಲ ನಾವು ಮಠಮಾನ್ಯಗಳಿಂದ ಹಿಂದುಳಿದ ಸಮಾಜದ ಏಳಿಗೆಗಾಗಿ ಸಾಕಷ್ಟು ರೀತಿಗಳಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಹೋರಾಟದ ಒಂದು ಫಲವಾಗಿ ಇತ್ತೀಚೆಗೆ ನಾವು ಒಕ್ಕೂಟ ರಚಿಸಿಕೊಂಡು ನಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮಂಡಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ತಮ್ಮಲ್ಲಿ ಎಲ್ಲ ಮಠಮಾನ್ಯಗಳ ಪರವಾಗಿ ನಮ್ಮ ಮಠಗಳಿಗೆ ಎಲ್ಲ ರೀತಿಯ ಅಭಿವೃದ್ಧಿ ಪಡಿಸಲು ಸಾಕಷ್ಟಯ ಅನುದಾನ ಕೊರತೆ ಇದ್ದು ಎಲ್ಲ ಮಠಗಳು ಆರ್ಥಿಕ ಅಭದ್ರತೆಯಲ್ಲಿವೆ ಅದಕ್ಕಾಗಿ ಹಿಂದುಳಿದ ದಲಿತ ಸಮಾಜದ ವಿವಿಧ ಮಠಗಳ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗೆ ತಲಾ 5 ಕೊಟಿ ಅನುದಾನ ನೀಡಲು ಕೋರುತ್ತೇವೆ.

ಅದರಂತೆ ಬೆಂಗಳೂರು ಮಹಾನಗರದಲ್ಲಿ ತಲಾ 5 ಎಕರೆ ಭೂಮಿ ಮಂಜೂರು ಮಾಡಲು ಕೋರುತ್ತೇವೆ.
ಎಂದು ತಮ್ಮ ಮನವಿ ಸಲ್ಲಿಸಿದರು.

ನಂತರ ಮಾನ್ಯ ಮುಖ್ಯಮಂತ್ರಿಗಳು ನಿಯೋಗದ ಶ್ರೀಗಳನ್ನು ಮತ್ತು ಮಾಧ್ಯಮದವರನ್ನು ಉದ್ದೇಶಿಸಿ
ಮಾತನಾಡಿದರು.

ಶ್ರೀಗಳ ನಿಯೋಗ ನಮ್ಮನ್ನು ಭೇಟಿ ಮಾಡಿ ಅವರ ಮನವಿಯನ್ನು ಸಲ್ಲಿಸಿದೆ. ಭೇಟಿಯಾದ ಸಂದರ್ಭದಲ್ಲಿ ಒಟ್ಟಾರೆಯಾಗಿ ಹಿಂದುಳಿದ ವರ್ಗಗಗಳ ಮತ್ತು ದಲಿತ ಸಮುದಾಯಗಳ ಏಳ್ಗೇಗಾಗಿ ಮುಂಬರುವ ಬಜೆಟ್ ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಬೇಕು.

ಹಿಂದುಳಿದ ಸಮುದಾಯಗಳ ಯುವಕರಿಗೆ, ಯುವತಿಯರಿಗೆ ಹೆಚ್ಚಿನ ಅವಕಾಶಗಳನ್ನು ವಿದ್ಯಾ,ಉದ್ಯೋಗದಲ್ಲಿ ಅವಕಾಶ ನೀಡಬೇಕು. ಮತ್ತು ಸಮುದಾಯಗಳಿಗೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯತೆ ಕೊಡಬೇಕು.

ಇಷ್ಟು ವರ್ಷ ನಮ್ಮ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಈಗ ನಾವು ಒಕ್ಕೂಟವೊಂದನ್ನು ರೂಪಿಸಿಕೊಂಡು ಈಗಲೂ ಕೂಡ ಅಹರ್ನಿಷಿ ಹೋರಾಟ ಮಾಡುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ನಮ್ಮ ಸಮುದಾಯದ ಆಶೋತ್ತರಗಳು ಇಲ್ಲಿಯವರೆಗೂ ಎಷ್ಟರಮಟ್ಟಿಗೆ ಸಾಕಾರಗೋಳ್ಳಬೇಕೊ ಅವು ಆಗಿಲ್ಲ ಹೀಗಾಗಿ ಈಗ ಹೆಚ್ಚಿನ ಒತ್ತು ಕೊಟ್ಟು ವಿಶೇಷವಾದಂತಹ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಿಕೊಡಬೇಕೆಂದು ಸಮಾಜದ ಕಳಕಳಿಯಿಂದ ಶ್ರೀಗಳು ಮಾತನಾಡಿದ್ದಾರೆ.

ಮಠದಿಂದ ಹಿಂದುಳಿದವರಿಗೆ, ದಲಿತರಿಗೆ ಸಮಾಜಕ್ಕೆ ಮಕ್ಕಳೀಗೆ ಶಿಕ್ಷಣ, ಶಾಲೆ ಕಾಲೇಜು ವಿದ್ಯಾರ್ಥಿ ನಿಯಲಯಗಳು ಮತ್ತು ಅನ್ನದಾಸೋಹ ಜೊತೆಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠಗಳ ಕೊಡುಗೆ ನೀಡಲು ನಮ್ಮ ಸರ್ಕಾರದಿಂದ ಅನುದಾನವನ್ನು ಕೊಡಬೇಕು ಅದರ ಜೊತೆಗೆ ಎಲ್ಲ ಮಠಗಳಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಮಾಡುವ ಸಲುವಾಗಿ ಅವರಿಗೆ ನಿವೇಶನ ನೀಡಬೇಕೆಂದು ಬಹಳ ಹಿಂದೆಯೇ ಬೇಡಿಕೆಯನ್ನು ಹಿಂದಿನ ಸರ್ಕಾರದಲ್ಲಿ ನೀಡಿದ್ದರು.

ಬೇಡಿಕೆ ಈಡೇರಿಸಲಾಗಿತ್ತು ಆದರೆ ಸ್ವಲ್ಪ ಕಾನೂನು ತೊಡಕು ಇರುವುದರಿಂದ ಅದು ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ವಿಷಯವನ್ನೂ ಕೂಡ ನಮ್ಮ ಗಮನಕ್ಕೆ ತಂದಿದ್ದಾರೆ. ಅದಕ್ಕೂ ಕೂಡ ನಾವು ಸೂಕ್ತ ನಿರ್ಧಾರ ತೆಗೆದುಕೊಂಡು ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತೇವೆ.

ಖಂಡಿತವಾಗಲೂ ಮಠ ಮಾನ್ಯಗಳಿಗೆ ಮತ್ತು ವಿದ್ಯಾರ್ಥಿನಿಲಯಗಳಿಗೆ ಖಂಡಿತವಾಗಿಯೂ ಕೂಡ ಅನುದಾನದ ಕುರಿತು ಹೆಚ್ಚಿನ ರೀತಿಯಲ್ಲಿ ಅನುದಾನ ನೀಡಲು ಪ್ರಯತ್ನ ಮಾಡುತ್ತೇವೆ.

ಈ ಸಂದರ್ಭದಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪರವರು, ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಗರಾಭಿವೃದ್ಧಿ ಸಚಿವ ಶ್ರೀ ಬೈರತಿ ಬಸವರಾಜ್, ಸಚಿವರಾದ ಶ್ರೀ ಎಂ.ಟಿ.ಬಿ ನಾಗರಾಜ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು .


Gadi Kannadiga

Leave a Reply