ಕೊಪ್ಪಳ ಫೆಬ್ರವರಿ ೦೪: ರಾಜ್ಯ ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನೀಲ್ ಕುಮಾರ್ ಅವರು ಫೆಬ್ರವರಿ ೦೫ ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ಅಂದು ೫.೫೦ಕ್ಕೆ ಬೆಂಗಳೂರಿನಿಂದ ವಾಯುಮಾರ್ಗವಾಗಿ ಹೊರಟು ೭.೩೦ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಬೆಳಿಗ್ಗೆ ೦೮ ಗಂಟೆಗೆ ನಿರ್ಗಮಿಸಿ, ರಸ್ತೆ ಮಾರ್ಗವಾಗಿ ಹೊರಟು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲೆಯ ಕನಕಗಿರಿಗೆ ಆಗಮಿಸುವರು. ಬೆಳಿಗ್ಗೆ ೧೧ ಗಂಟೆಗೆ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ.ವಿ.ಪ್ರ.ನಿ.ನಿ ಮತ್ತು ಜೆಸ್ಕಾಂ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಅಂದು ಮಧ್ಯಾಹ್ನ ೦೩ ಗಂಟೆಗೆ ಕನಕಗಿರಿಯಿಂದ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಇಂಧನ ಸಚಿವರಾದ ವಿ.ಸುನೀಲ್ ಕುಮಾರ್ ಅವರ ಪ್ರವಾಸ