ಸೊಲ್ಲಾಪುರ:- ತೆಲಂಗಾಣದ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಗನಸೂರಿನ ಕನ್ನಡ ಭವನ ಎಜುಕೇಶನ್ ಸೊಸೈಟಿ ಹೈಸ್ಕೂಲ್, ಫೋರ್ಟ್, ಮುಂಬೈ, ಸೃಜನಶೀಲ ವಿದ್ಯಾರ್ಥಿ, ಆದರ್ಶ ಕನ್ನಡ ಶಿಕ್ಷಕ, ಸನ್ಮಾನ್ಯ. ಶ್ರೀ. ವಿಠ್ಠಲ ಮಣೂರೆ ಸರ ಅವರಿಗೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಐದು ರಾಜ್ಯಗಳಲ್ಲಿ *”ಕನ್ನಡ ಸಿರಿ”* ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜಿ ಶ್ರೀ ಮಹೇಶ್ ಜೋಶಿ, ಸಮ್ಮೇಳನಾಧ್ಯಕ್ಷ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭೇಂದ್ರ ತೀರ್ಥ, ಆಂಧ್ರಪ್ರದೇಶ ರಾಜ್ಯಾಧ್ಯಕ್ಷ ಅಂಜನಕುಮಾರ್, ತೆಲಂಗಾಣ ರಾಜ್ಯಾಧ್ಯಕ್ಷ ವಿಠ್ಠಲ್ ಜೋಶಿ, ಚಿಕ್ಕಮಗಳೂರು ಅಧ್ಯಕ್ಷ ಶ್ರೀ ಸುರೇಶ್ ಶ್ರೀನಿವಾಸ್, ಮಹಾರಾಷ್ಟ್ರ ರಾಜ್ಯಾಧ್ಯಕ್ಷ ಸೋಮೇಶ್ವರ್ ಗೊಮ್ಮಶೇತ್ ಅಧ್ಯಕ್ಷ ಸುರೇಶ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ. ವಿಠ್ಠಲ ಮಣೂರೆ ಅವರ ಈ ಪ್ರಶಸ್ತಿಯೊಂದಿಗೆ, ನಾಗನಸೂರಿನ ಧ್ವಜವು ರಾಷ್ಟ್ರಮಟ್ಟದಲ್ಲಿ ಹೆಮ್ಮೆಯಿಂದ ಎತ್ತರಕ್ಕೆ ಹಾರಿದೆ. ಇಡೀ ನಾಗನಸೂರ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಪರವಾಗಿ ಅವರಿಗೆ ವಂದನೆಗಳು ಮತ್ತು ಅಭಿನಂದನೆಗಳು ಸಲ್ಲಿಸಲಾಯಿತು.