ಭಾರತ ಸರ್ಕಾರದ ನೆಹರೂ ಯುವ ಕೇಂದ್ರ ಬೆಳಗಾವಿ. ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘ ಕಾಮಶಿನಕೊಪ್ಪ್ . ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀಡಿ ಇವರ ಆಶ್ರಯದಲ್ಲಿ. ತಾಲೂಕ ಮಟ್ಟದ ಕ್ರೀಡಾಕೂಟ ಜರಗಿತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ವಿಠಲ ಸೋಮಣ್ಣ ಹಲಗೇಕರ ರವರು ಮಾತನಾಡಿ ಯುವಕರು ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ತಾಲೂಕಿನ ಹೆಸರು ತರಬೇಕು. ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಯುವಕರು ಸದೃಢರಾಗುತ್ತಾರೆ. ಯುವಕ ಸದೃಢರಾದರೆ ದೇಶ ಸದೃಢವಾಗುತ್ತದೆ ಎಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ
ಡಾ. ನಾಸೀರಅಹ್ಮದ ಜಂಗುಭಾಯಿ ಪ್ರಾಂಶಪಾಲರು. ಮಾತನಾಡಿ ಸರ್ಕಾರ ಕ್ರೀಡೆಯನ್ನು ಪ್ರೋತ್ಸಾಹಿಸಲು ಯುವಕ- ಯುವತಿಗೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಅದರ ಉಪಯೋಗವನ್ನು ಪಡೆದುಕೊಂಡು. ತಾಲೂಕಿನ ಜಿಲ್ಲೆಯ ಮತ್ತು ರಾಜ್ಯದ ಹೆಸರು ತರಬೇಕೆಂದು ಮಾತನಾಡಿದರು.
ವಾಲಿಬಾಲ್. ಖೋ ಖೋ. ರನಿಂಗ್. ಬ್ಯಾಡ್ಮಿಂಟನ್. ಕಬ್ಬಡ್ಡಿ. ಸ್ಲೋ ಸೈಕ್ಲಿಂಗ್. ಗುಂಡು ಎಸೆತ ಸೇರಿದಂತೆ. ವಿವಿಧ ಕ್ರೀಡೆಗಳು ಬೀಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದವು.
ಕಾರ್ಯಕ್ರಮದಲ್ಲಿ ಬಿಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ. ಸಂತೋಷ . ಕಾಶಿಲಕರ,
ಡಾ. ಮಂಜುಳಾ ಸವದತ್ತಿ ಸಹ ಪ್ರಾದ್ಯಾಪಕರು. ನಾಗೇಂದ್ರ ಚೌಗಲಾ, ಸ್ವಾಮಿ ವಿವೇಕಾನಂದ ರಾಜ್ಯ ಸದ್ದಾವನಾ ಪ್ರಶಸ್ತಿ ಪುರಸ್ಕೃತರು. ಕೇದಾರಲಿಂಗ ಶಂಬೋಜಿ, ಲಕ್ಷ್ಮಣ್ ಬಸ್ತವಾಡ. ರೈತ ಮುಖಂಡರಾದ ರುದ್ರಗೌಡ ಪಾಟೀಲ್.
ಡಾ. ವೇದರಾಜ್
ದೈಹಿಕ ನಿರ್ದೇಶಕರು
ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು. ತಾಲೂಕಿನ ಯುವಕ ಯುವತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶರಣಬಸ ವಾಲಿ ಸ್ವಾಗತಿಸಿದರು. ನಾಗೇಂದ್ರ ಚೌಗಲಾ ನಿರೂಪಿಸಿದರು