ಕೊಪ್ಪಳ, ಅ.೧೩ : ತರಬೇತಿಯ ಅವಧಿಯಲ್ಲಿ ನೀಡಿದ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಬೇಕು ಎಂದು ಕೊಪ್ಪಳ ತಾಲೂಕ ತಹಶೀಲದಾರರಾದ ವಿಠ್ಠಲ ಚೌಗಲೆ ಅವರು ಹೇಳಿದರು.
ಜಿಲ್ಲಾ ತರಬೇತಿ ಸಂಸ್ಥೆ ವತಿಯಿಂದ ಮಂಗಳವಾರದಂದು (ಅ.೧೧) ಆಯೋಜಿಸಲಾಗಿದ್ದ, ಹೊಸದಾಗಿ ಸೇವೆಗೆ ಸೇರಿದ ಸಿ ವೃಂದದ ಲಿಪಿಕ ನೌಕರರಿಗೆ ೪೫ ದಿನಗಳ ಕಾಲ ವೃತ್ತಿ ಬುನಾದಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳ ವಿತರಿಸಿ ಅವರು ಮಾತನಾಡಿ ಹೇಳಿದರು.
ಪ್ರತಿಯೋಬ್ಬ ಸರಕಾರಿ ನೌಕರರು ಎಷ್ಟು ಶಿಕ್ಷಣ ಕಲಿಕತರು ಕಡಿಮೆಯೇ, ಈ ದಿಸೆಯಲ್ಲಿ ಪ್ರತಿದಿನ ಅಧ್ಯಯನ ಮಾಡಬೇಕು. ಸರಿಯಾದ ಸಮಯಕ್ಕೆ ಕಛೇರಿಗೆ ಬರುವುದು ಸೇರಿದಂತೆ ಕಛೇರಿಗೆ ಮತ್ತು ನಿಮ್ಮ ವಿಭಾಗಕ್ಕೆ ಬಂದ ಪತ್ರಗಳ ಅರ್ಥ ಮಾಡಿಕೊಂಡು ಕಡತದಲ್ಲಿ ದಾಖಲಿಸುವ ಪದ್ಧತಿಯನ್ನು ರೂಡಿಸಿಕೊಳ್ಳಬೇಕು. ನಿಮ್ಮೆಲ್ಲರಿಂದ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರೋಬೆಷನರಿ ತಹಶೀಲ್ದಾರ ಮಲ್ಲಪ್ಪ ಅವರು ಮಾತನಾಡಿ, ಪ್ರತಿಯೊಬ್ಬರು ಕೆಲಸದಲ್ಲಿನ ನಿಯಮಗಳ ಬಗ್ಗೆ ಸ್ವತಃ ಅಧ್ಯಯನ ಮಾಡಬೇಕು. ಕಛೇರಿಯ ಬಗ್ಗೆ ಶಿಸ್ತು, ಗೌರವವನ್ನು ಹೊಂದಿರಬೇಕು. ಮೇಲಾಧಿಕಾರಿಗಳಿಗೆ ವಿನಯವಾಗಿ ಸಮಯಕ್ಕೆ ಸರಿಯಾಗಿ ಹಾಜರಾಗಿ, ಪ್ರ್ರಮಾಣಿಕತೆಯಿಂದ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಮಾತನಾಡಿ, ಪ್ರತಿಯೊಬ್ಬ ಸರಕಾರಿ ನೌಕರರಿಗೆ ವೃತ್ತಿ ಬುನಾದಿ ತರಬೇತಿ ಅವಶ್ಯಕ ವಾಗಿದ್ದು, ಎಲ್ಲಾ ಅಭ್ಯರ್ಥಿಗಳು ಈ ತರಬೇತಿಯಲ್ಲಿ ತಿಳಿಸಲಾದ ವಿಷಯಗಳನ್ನು ಚಾಚೂ ತಪ್ಪದೇ ತಮ್ಮ ತಮ್ಮ ಕಛೇರಿಯಗಳಲ್ಲಿ ಅಳವಡಿಸಿಕೊಂಡು ಕೆಲಸ ನಿರ್ವಹಿಸುವಂತಾಗ ಬೇಕು. ಪ್ರಮಾಣಿ ಕತೆಯಿಂದ, ಬಹು ನಿಷ್ಠೆಯಿಂದ ಕೆಲಸ ನಿರ್ವಹಿಸಿರಿ. ನಿಯಮಗಳಿಗೆ ಬದ್ಧರಾಗಿರಿ, ಕಛೇರಿಯ ಅಧಿಕಾರಿಗಳೊಂದಗೆ ಗೌರವದಿಂದ ವರ್ತಿಸಬೇಕು. ಈ ನಿಟ್ಟಿನಲ್ಲಿ ಸಾರ್ವನಿಕಗೆ ಒಂದು ಉತ್ತಮವಾದ ಸೇವೆಯನ್ನು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಲಾಯಕ್ ಅಲಿ, ಮೈಲಾರರಾವ್, ಶ್ರೀಧರ ಹಾಗೂ ಶಿಲ್ಪಾ ಮೇಟಿ ಸೇರಿದಂತೆ ಶಿಕ್ಷಣ, ಪೋಲಿಸ್, ನೀರಾವರಿ, ಕಂದಾಯ, ಪಂಚಾಯತ ಇಲಾಖೆಯ ನೌಕರರು ಉಪಸ್ಥಿತರಿದ್ದರು. ಶಿಬಿರಾರ್ಥಿ ದಸ್ತಗೀರ್ ಪಾ಼ಷಾ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
ಜಿಲ್ಲಾಧಿಕಾರಿ ಕಛೇರಿಯ ರೇಕಾರ್ಡ ರೂಂ ವೀಕ್ಷಣೆ :
ಹೊಸದಾಗಿ (ಆಗಸ್ಟ್ ೧೦ ರಿಂದ ಅಕ್ಟೋಬರ್ ೧೧ ರವರೆಗೆ) ಸೇವೆಗೆ ಸೇರಿದ ಸಿ ವೃಂದದ ಲಿಪಿಕ ನೌಕರರಿಗೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ೪೫ ದಿನಗಳ ಕಾಲ ವೃತ್ತಿ ಬುನಾದಿ ತರಬೇತಿಯನ್ನು ಆಯೋಜಿಸಲಾಗಿದ್ದು, ಈ ಸಮಯದಲ್ಲಿ ಕಛೇರಿಯ ಕಾರನಿರ್ವಹಣೆ, ಹೆಚ್.ಆರ್.ಎಂ.ಎಸ್., ಕೆ-೨, ಕೆ.ಎಫ್.ಸಿ, ಕೆ.ಟಿ.ಟಿ.ಪಿ., ಕೆ.ಜಿ.ಐ.ಡಿ ಯ ನಿಯಮಗಳು, ರಜೆಯ, ಸಾಮಾನ್ಯ ನಿಯಮಗಳು ಮತ್ತು ಕಡತಗಳ ನಿರ್ವಹಣೆ, ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಸೇರಿದಂತೆ ಅವಶ್ಯವಿರುವ ವಿಷಯಗಳ ಬಗ್ಗೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಯಿತು. ತರಬೇತಿಯ ಸಮಯದಲ್ಲಿ ಶಿಭಿರಾರ್ಥಿಗಳಿಗೆ ಜಿಲ್ಲಾ ವಿಜಾನೆಯ ಇಲಾಖೆ, ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿಯ ರೇಕಾರ್ಡ ರೂಂಗಳ ವೀಕ್ಷಣೆ ಮಾಡಿಸಲಾಯಿತು.
Gadi Kannadiga > State > ವೃತ್ತಿ ಬುನಾದಿ ತರಬೇತಿ ಸಮಾರೋಪ ಸಮಾರಂಭ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ : ವಿಠ್ಠಲ ಚೌಗಲೆ
ವೃತ್ತಿ ಬುನಾದಿ ತರಬೇತಿ ಸಮಾರೋಪ ಸಮಾರಂಭ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ : ವಿಠ್ಠಲ ಚೌಗಲೆ
Suresh13/10/2022
posted on

More important news
ರೈತ ಬಾಂಧವರ ಗಮನಕ್ಕೆ
07/02/2023
ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
07/02/2023
ಐತಿಹಾಸಿಕ ಲಕ್ಕುಂಡಿ ಉತ್ಸವ : ಮಹಿಳಾ ಗೋಷ್ಟಿ
07/02/2023