This is the title of the web page
This is the title of the web page

Please assign a menu to the primary menu location under menu

Local News

ಮತದಾನ ಜಾಗೃತಿ ಬೈಕ್ ಜಾಥಾ


ಸವದತ್ತಿ : ಸ್ಥಳೀಯ ತಾಲೂಕ ಪಂಚಾಯತ ಆವರಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೈಕ ರ‍್ಯಾಲಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣಕುಮಾರ ಸಾಲಿ ಚಾಲನೆಯನ್ನು ನೀಡಿದರು.
ತಾಲೂಕ ಪಂಚಾಯತ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಬೈಕ್ ಜಾಥಾವು ತಾಪಂ ಕಾರ್ಯಾಲಯದಿಂದ ಆರಂಭವಾದ ಬೈಕ್ ರ‍್ಯಾಲಿಯೂ ಸವದತ್ತಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಬಸನಿಲ್ದಾಣದಲ್ಲಿ ಸಂಚರಿಸಿ ಬೆಟಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿಗಳಾದ ಡಾ. ಮಾರುತಿ ಚೌಡಪ್ಪನವರ, ತಾ.ಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ರಮೇಶ ರಕ್ಕಸಗಿ, ತಾ.ಪಂ ಸಹಾಯಕ ನಿರ್ದೇಶಕರಾದ (ಪಂ.ರಾ) ಆರ್ ಎ ಪಾಟೀಲ, ತಾ.ಪಂ ವ್ಯವಸ್ಥಾಪಕರಾದ ಜಿ ಎಸ್ ಬಡೆಮ್ಮಿ, ಐಇಸಿ ಸಂಯೋಜಕರಾದ ಮಲೀಕಜಾನ ಮೋಮಿನ, ತಾಂತ್ರಿಕ ಸಂಯೋಜಕರಾದ ಮಹಾದೇವ ಕಾಮನ್ನವರ ಎಂಐಎಸ್ ಸಂಯೋಜಕ ನಾಗರಾಜ ಬೆಹರೆ, ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಎಮ್ ಆರ್ ಡಬ್ಲ್ಯು, ವಿಆರ್ ಡಬ್ಲ್ಯೂ, ಕಾಯಕ ಮಿತ್ರರು, ಬಿಎಫ್ ಟಿಗಳು, ಬಿಎಲ್‌ಓಗಳು, ಸುಪರ ವೈಸರ್, ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.


Leave a Reply