This is the title of the web page
This is the title of the web page

Please assign a menu to the primary menu location under menu

Local News

ಜೂ.೧೫ಕ್ಕೆ ಪರಿಷತ್ ಚುನಾವಣೆ ಮತ ಎಣಿಕೆ: ಜೂ.೧೪ರಿಂದ ನಿಷೇಧಾಜ್ಞೆ


ಬೆಳಗಾವಿ,ಜೂನ್೧೩: ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಹಾಗೂ ಶಿಕ್ಷಕಕರ ಮತಕ್ಷೇತ್ರಗಳ ಮತದಾನ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆ ಜೂನ್ ೧೫ ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಶಾಂತಿಯುತ, ಸುವ್ಯವಸ್ಥಿತ ಮತ ಎಣಿಕೆ ಪ್ರಕ್ರಿಯೆ ಕಾರಣಕ್ಕಾಗಿ ಜೂನ್ ೧೪ರ ಮಧ್ಯರಾತ್ರಿ ೧೨ ಗಂಟೆಯಿಂದ ಜೂನ್ ೧೫ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಮತ ಎಣಿಕಾ ಕೇಂದ್ರ ಜ್ಯೋತಿ ಪದವಿ ಪೂರ್ವ ಕಾಲೇಜಿನ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಲಂ ೧೪೪ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಜಾರಿ ಹಿನ್ನಲೆ ನಗರದಲ್ಲಿ ಅಂತ್ಯಕ್ರಿಯೆ ಮೆರವಣಿಗೆ, ಅನುಮತಿ ಪಡೆದ ಮೆರವಣಿಗೆಗಳನ್ನು ಹೊರತು ಪಡಿಸಿ ಯಾವುದೇ ರೀತಿಯಲ್ಲಿ ಜಾತ್ರೆ, ಮೆರವಣಿಗೆ, ಸಭೆ, ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶ ನೀಡಿಲ್ಲ. ಮಾರಕ, ಸ್ಫೋಟಕ ವಸ್ತುಗಳನ್ನು ಹೊತ್ತೊಯ್ಯುವುದು ಸಿಡಿಮದ್ದುಗಳನ್ನು ಸಿಡಿಸುವುದನ್ನೂ ನಿಷೇಧಿಸಲಾಗಿದೆ. ನಿಯಮ ಮೀರಿದವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ ಎಂ.ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply