This is the title of the web page
This is the title of the web page

Please assign a menu to the primary menu location under menu

Local News

ಆರೋಗ್ಯ ಶಿಬಿರದಲ್ಲಿ ಮತದಾನ ಜಾಗೃತಿ


ಬೆಳಗಾವಿ, ಏ.೧೩ : ತಾಲೂಕು ಸ್ವೀಪ್ ಸಮಿತಿ ಬೈಲಹೊಂಗಲ ಹಾಗೂ ಪಂಚಾಯತ ರಾಜ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರ ನಾಗನೂರದಲ್ಲಿ ಸಾರ್ವತ್ರಿಕ ಚುನಾವಣೆ ೨೦೨೩ ರ ನಿಮಿತ್ಯವಾಗಿ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಸ್ ಎಸ್ ಸಂಪಗಾವಿ ರವರು ಚಾಲನೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯವು ಬಹಳ ಉಪಯುಕ್ತ ಹಾಗೂ ಆಧುನಿಕ ಆಹಾರದ ಮೊರೆಯಿಂದ ಹೊರಗುಳಿದು ಉತ್ತಮ ಆರೋಗ್ಯಕ್ಕಾಗಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಆರೋಗ್ಯವು ಎಷ್ಟು ಮುಖ್ಯವೋ ಅಷ್ಟೇ ಮತದಾನವು ಮುಖ್ಯ ಮತ್ತು ಯಾವುದೇ ಇನ್ನಿತರ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ನಿಮ್ಮ ಅಮೂಲ್ಯವಾದ ಮತವನ್ನು ಚಾಲಿಸುವಂತೆ ಅವರು ಕರೆ ನೀಡಿದರು.
ವಿಜಯ ಪಾಟೀಲ ರವರು ಮಾತನಾಡಿ, ಗ್ರಾಮದ ಪ್ರತಿಯೊಬ್ಬರು ಆರೋಗ್ಯವಾಗಿರಬೇಕು ಮತ್ತು ಕಡ್ಡಾಯವಾಗಿ ಮತದಾನವನ್ನು ಸಹ ಮಾಡುವುದು ನಿಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಎಂದು ತಿಳಿಸುತ್ತಾ ನರೇಗಾ ಕೂಲಿಕಾರರು ೧೦೦ ದಿವಸ್ ಕೆಲಸವನ್ನು ಪಡದುಕೊಳ್ಳಬೇಕು ಹಾಗೂ ಹೆಚ್ಚಿನ ಮಾನವ ದಿನಗಳನ್ನು ಸೃಜನೆ ಮಾಡಲು ಎಲ್ಲರ ಆರೋಗ್ಯ ಬಹಳ ಮುಖ್ಯ ಎಂದರು
ಗ್ರಾಮಸ್ಥರು ಕಡ್ಡಾಯವಾಗಿ ಮತದಾನವನ್ನು ಮಾಡುವುದು ಹಾಗೂ ಸುಭದ್ರ ಸರ್ಕಾರವನ್ನು ರಚನೆ ಮಾಡಲು ಕಡ್ಡಾಯ ಮತದಾನ ಮಾಡಬೇಕು ಮುಂದುವರೆದು ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸಬೇಕು ಶುದ್ಧವಾದ ಕುಡಿಯುವ ನೀರು ಹಾಗೂ ಆಹಾರವನ್ನು ಸೇವನೆ ಮಾಡುವಂತೆ ಡಾ. ಸಾಗರ ದೇಸಾಯಿ ರವರು ತಿಳಿಸಿದರು.
ಡಾ. ಕುಂದರನಾಡ ರವರು ಮಾತನಾಡಿ ನಾಗನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ, ಎಲ್ಲಾ ತರಹದ ಸೌಲಭ್ಯಗಳನ್ನು ಒದಗಿಸುವ ಮೂಲಕ ಸುತ್ತಮುತ್ತಿಲಿನ ಗ್ರಾಮಸ್ಥರಿಗೆ ತುಂಬಾ ಸಹಕಾರಿಯಾಗಿದೆ ಮತ್ತು ಎಲ್ಲರೂ ಆರೋಗ್ಯದ ಕಡೆ ಗಮನಹರಿಸಿ ಕಾಲಕಾಲಕ್ಕೆ ತಮ್ಮ ಆರೋಗ್ಯದ ಕಡೆ ಎಚ್ಚರ ವಹಿಸುವಂತೆ ತಿಳಿಸಿದರು.
ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರದ ವಿಜಯ ಪಾಟೀಲ, ವೈಧ್ಯಾಧಿಕಾರಿಗಳಾದ ಆಯ್ ಕುಂದರನಾಡ ಮತ್ತು ಸಾಗರ ದೇಸಾಯಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಿ ಎಪ್ ಮರೆಣ್ಣವರ, ಎಸ್ ಬಿ ಸಂಗನಗೌಡರ ಎಸ್ ವ್ಹಿ ಹಿರೇಮಠ, ನಾಗರಾಜ್ ಕಾಗತಿ, ಬಿ ಕೆ ಹರಿಜನ, ಸನೀಲ್ ತಲ್ಲೂರ ಹಾಗೂ ನರೇಗಾ ಕಾಯಕ ಬಂಧುಗಳು ಮತ್ತು ಕೂಲಿಕಾರರು ಗ್ರಾಮಸ್ಥರು ಒಟ್ಟು ೨೪೫ ಜನರು ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.


Leave a Reply