This is the title of the web page
This is the title of the web page

Please assign a menu to the primary menu location under menu

State

ಮುದೇನೂರು ಗ್ರಾಮದಲ್ಲಿ ಮತದಾನ ಜಾಗೃತಿ


ಕೊಪ್ಪಳ ಮೇ ೦೪ : ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ಮೇ ೦೩ರಂದು ಮತದಾನ ಜಾಗೃತಿಗಾಗಿ ನಡೆದ ಪಂಜಿನ ಮೆರವಣಿಗೆಗೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹನುಮಂತ ಗೌಡ ಪೊಲೀಸ್ ಪಾಟೀಲ್ ಅವರು ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿ, ಯುವಕರು, ವೃದ್ಧರು, ವಿಕಲಚೇತನ ಮತದಾರರು ಶೇ.೧೦೦ ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು. ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಸ್ತಗಿರಿಸಾಬ್, ತಾಪಂ ಸಿಬ್ಬಂದಿ ಸಂಗಪ್ಪ, ಚಂದ್ರಶೇಖರ್ ಜಿ ಹಿರೇಮಠ ಗ್ರಾಪಂ ಸಿಬ್ಬಂದಿಗಳಾದ ಮಹಾಂತೇಶ್, ಮುದೆಗೌಡ, ಶರಣಪ್ಪ ಸಿದ್ದಯ್ಯ, ಹಂಪಮ್ಮ, ಮಂಜುನಾಥ್, ಎನ್.ಆರ್.ಎಲ್.ಎಂ ಸಂಜೀವಿನಿ ಸ್ವಸಹಾಯ ಸಂಘದ ಪದ್ಮಮ್ಮ, ಶಂಕ್ರಮ್ಮ, ಅಂಬಿಕಾ ಮತ್ತು ಬಿ.ಎಲ್.ಒ ಗಿರಿಜಮ್ಮ, ಸಾವಿತ್ರಿ ಸೇರಿದಂತೆ ಗ್ರಾಮದ ಗುರು ಹಿರಿಯರು ಹಾಗೂ ಸಾರ್ವಜನಿಕರು ಇದ್ದರು.


Leave a Reply