ಬೆಳಗಾವಿ, ಏ.೨೬ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಆಯ್ದ ಗ್ರಾಮ ಪಂಚಾಯತಗಳಲ್ಲಿ ಮತದಾನ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯತ ಆವರಣದಲ್ಲಿ ಏಪ್ರಿಲ್.೨೫ ಮಂಗಳವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೊಯರ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬೆಳಗಾವಿ ತಾಲ್ಲೂಕಿನ ಹಿಂಡಲಗಾ, ಗಣೇಶಪೂರ ಖಾನಾಪೂರ ತಾಲ್ಲೂಕಿನ ಕಣಕುಂಬಿ, ಚೋರಲಾ ಹಾಗೂ ಜಾಂಬೋಟಿ, ಯಮಕನಮರ್ಡಿ ಕ್ಷೇತ್ರದ ಯಮಕನಮರಡಿ ಮತ್ತು ಹೆಬ್ಬಾಳ,ನಿಪ್ಪಾನಿ ಮತ್ತು ಚಿಕ್ಕೋಡಿ ತಾಲ್ಲೂಕಿನ ಚಾಂದಶಿರವಾಡ ಹಾಗೂ ಹೋಸಪೇಟಿ, ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಮತ್ತು ಹೋಸಪೇಟ್, ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಮತ್ತು ಕಡಕಲಾಟ ಗ್ರಾಮ ಪಂಚಾಯತಗಳಲ್ಲಿ ೨೦೨೩ರ ಸಾರ್ವತ್ರಿಕ ಚುನಾವಣೆಯ ಕುರಿತು ಮತದಾನದ ಜಾಗೃತಿಗಾಗಿ ಬೀದಿ ನಾಟಕಗಳ ಪ್ರದರ್ಶನಗೊಳ್ಳಲಿವೆ.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ,ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ್, ಜಿಲ್ಲಾ ಎಸ್.ಬಿ.ಎಂ ಸಮಾಲೋಚಕ ಬಾಹುಬಲಿ ಮೆಳವಂಕಿ, ತಾಲ್ಲೂಕು ಐಇಸಿ ಸಂಯೋಜಕ ರಮೇಶ ಮಾದರ ಹಾಗೂ ಜಿಲ್ಲಾ ಪಂಚಾಯತನ ಸಿಬ್ಬಂದಿಗಳು ಹಾಜರಿದ್ದರು.
Gadi Kannadiga > Local News > ಮತದಾನ ಜಾಗೃತಿ: ಗ್ರಾಮ ಪಂಚಾಯತ ಆವರಣದಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ
ಮತದಾನ ಜಾಗೃತಿ: ಗ್ರಾಮ ಪಂಚಾಯತ ಆವರಣದಲ್ಲಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ
Suresh26/04/2023
posted on
