*ಮಹಿಳೆಯರಿಂದ ಜರುಗಿದ ಪಂಜಿನ ಮೆರವಣಿಗೆ*
ಜಾಗೃತಿ ಜಾಥಾಕ್ಕೆ *ತಾ ಪಂ ಸಹಾಯಕ ನಿರ್ದೇಶಕ ( ಉ ಖಾ) ನಿಂಗನಗೌಡ ವಿ ಎಚ್* ಅವರಿಂದ ಚಾಲನೆ
*ಹಲಗಿ ಬಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿ ಜನಮನ ಸೆಳೆದ ತಾ ಪಂ ಎಡಿ ನಿಂಗನಗೌಡ ಬಿ ಎಚ್*.
*ಕುಷ್ಟಗಿ* : *ಸೂರ್ಯ ಪಶ್ಚಿಮದಲ್ಲಿ ಸಣ್ಣಗೆ ಜಾರಿ ಕತ್ತಲು ಆವರಿಸುವ ಹೊತ್ತಿಗೆ ಮೂಡಿತು ಮೇಣದ ಬೆಳಕಿನ ಹೊಂಬೆಳಕು!*
ಹೌದು, ಇದು ಅಂತಿಂತಹ ಬೆಳಕಲ್ಲ. *ನನ್ನ ಮತ, ನನ್ನ ಹಕ್ಕು* ಹಾಗೂ *ಮತದಾನ ಮಾಡುವವನೇ ಮಹಾಶೂರ* ಎಂಬ ಬೆಳಗಿದ ದೀಪಗಳು ! , ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮೇಣದ ಬತ್ತಿ ಹಿಡಿದು ಜಾಗೃತಿ ಮೂಡಿಸಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಮಲ್ಲಪ್ಪ ಕುಂಬಾರ್ ರವರ ನೇತೃತ್ವದ ತಂಡವು ಮತದಾನ ಹಕ್ಕಿನ ಬೆಳಕು ಮೂಡಿಸಿತು.
ಈ ಬೆಳಕು ಕಂಡು ಬಂದಿದ್ದು, ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದಲ್ಲಿ.
ವಿಧಾನಸಭಾ ಚುನಾವಣಾ ಅಂಗವಾಗಿ ಮತದಾನ ಜಾಗೃತಿ ಮೂಡಿಸಲು ಗ್ರಾಮದಲ್ಲಿ ಗ್ರಾಮದ ಮಹಿಳೆಯರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು. ಮಹಿಳೆಯರು ಪಂಜಿನ ಮೆರವಣಿಗೆ ಮೂಲಕ ಜಾಗೃತಿ ಜಾಥಾವು ಜಾಗೃತಿ ಗೀತೆಗಳೊಂದಿಗೆ ಗುಮಗೇರಿ ಗ್ರಾಮದ ಪ್ರಮುಖ ಮುಖ್ಯ ರಸ್ತೆಗಳಲ್ಲಿ ನಡೆದು ಗ್ರಾಮಸ್ಥರನ್ನು ಆಕರ್ಷಿಸಿತು..
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾನ್ಯ ನಿಂಗನಗೌಡ ವಿ ಎಚ್ ಸಹಾಯಕ ನಿರ್ದೇಶಕರು ಮಾತನಾಡಿ, ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ ಹಾಗೂ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು.
ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಖುಷಿಯಿಂದ ಮತ ಚಲಾಯಿಸಬೇಕು ಎಂದರು ಹಾಗೂ ಇದೆ ವೇಳೆ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಿದರು.
ಹಾಗೂ ಈ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ೧೦೦ ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ತದನಂತರ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಹೂ ಕೊಡುವ ಮೂಲಕ ಕಡ್ಡಾಯ ಮತದಾನ ಮಾಡಿ ಎಂಬ ಕಾರ್ಯಕ್ರಮ ಗ್ರಾಮದ ಜನರ ಪ್ರಸಂಶೆಗೆ ಕಾರಣವಾಯಿತ.
ಈ ಸಂದರ್ಭದಲ್ಲಿ ಸಾಮಾಜಿಕ ಲೆಕ್ಕಪರಿಶೋಧಕ ಸಂಯೋಜಕರಾದ ರವಿಗೌಡರ್, ತಾ ಪಂ ಐ ಇ ಸಿ ಸಂಯೋಜಕ ಚಂದ್ರಶೇಖರ್ ಜಿ ಹಿರೇಮಠ ಗ್ರಾಪಂ ಸಿಬ್ಬಂದಿಗಳಾದ ವಿರುಪಾಕ್ಷಪ್ಪ, ಹನುಮಂತ , ಲಕ್ಷ್ಮೀದೇವಿ ,ಹನುಮಂತ ಶಕಪೂರ, ಜಾನಪದ ಕಲಾವಿದರಾದ ಸುಕುಮುನಿ,ನಾಗಪ್ಪ, ಎನ್ ಆರ್ ಎಲ್ ಎಂ ಸಂಜೀವಿನಿ ಸ್ವಸಹಾಯ ಸಂಘದ ಹನುಮಕ್ಕ,ಸುಮಾ,ನಿರ್ಮಲ ಕಸ್ತೂರಿ ಹಾಗೂ ಇತರರು ಅಂಗನವಾಡಿ, ಆಶಾ, ಕಾರ್ಯಕರ್ತೆಯರಾದ ಶಾರದಾ,ಹನುಮಕ್ಕ,ಬಸಮ್ಮ, ಕವಿತಾ ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಸಾರ್ವಜನಿಕರು ಇದ್ದರು.
ಕೃಪೆ-
*ಐಇಸಿ ಸಂಯೋಜಕರು ಕುಷ್ಟಗಿ*
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ