ಮೂಡಲಗಿ : ವಿಧಾಸಭಾ ಚುನಾವಣಾ ಹಿನ್ನೆಲೆ ೮೦ ವರ್ಷ ದಾಟಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಇರುವುದರಿಂದ ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಶನಿವಾರದಂದು ಚುನಾವಣಾ ಸಿಬ್ಬಂದಿಗಳು ಚುನಾವಣಾ ಸಾಮಗ್ರಿಗಳೊಂದಿಗೆ ಮನೆ ಮನೆಗೆ ತೆರಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅರಭಾವಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಪ್ರಶಾಂತ ಚನಗೊಂಡ, ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೮೦ ವರ್ಷ ದಾಟಿದ ೫೩೫ ಮತದಾರರು, ೧೦೪ ವಿಕಲಚೇತನ ಮತದಾರರು ಇದ್ದಾರೆ. ಚುನಾವಣಾ ಸಿಬ್ಬಂದಿಗಳ ೧೨ ತಂಡಗಳನ್ನು ರಚನೆ ಮಾಡಿ ಮನೆ ಮನೆಗಳಿಗೆ ತೆರಳಿ ಬ್ಯಾಲೆಟ್ ಪೇಪರ್ ನೀಡಿ ಮತದಾನ ಮಾಡಿಸಲಾಗುವುದು. ಈ ವೇಳೆ ಮತ ಯಾರಿಗೆ ಚಲಾಯಿಸುತ್ತಾರೆೆ ಎಂಬುವುದನ್ನು ಹೊರತುಪಡಿಸಿ ಇನ್ನ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಈ ಮತದಾನದ ಪ್ರಕ್ರಿಯೆ ಅರಭಾವಿ ಮತಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ತಹಶೀಲ್ದಾರ ಕಚೇರಿ ಶಿಸ್ತದಾರ ಪರುಶುರಾಮ ನಾಯಕ್ ಹಾಗೂ ವಿವಿಧ ತಾಲೂಕಾ ಪಟ್ಟದ ಅಧಿಕಾರಿಗಳು, ಚುನಾವಣಾ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಇದ್ದರು.