ಬೆಳಗಾವಿ, ಏ.೨೧ :ತಾಲೂಕಾ ಸ್ವೀಪ್ ಸಮೀತಿ ಬೈಲಹೊಂಗಲ ವತಿಯಿಂದ ತಾಲೂಕಿನ ವಿಶೇಷ ಚೇತನರು (ಅಂಗವಿಕಲರು) ಮತ್ತು ಗ್ರಾಮೀಣ ಪುರ್ನವಸತಿ ಕಾರ್ಯಕರ್ತರು ನಗರದಲ್ಲಿ ವಿಧಾನ ಸಭಾ ಚುನಾವಣೆ ೨೦೨೩ ರ ಮತದಾನ ಜಾಗೃತಿ ಯನ್ನು ಅಂಗವಿಕಲರ ಸ್ಕೂಟಿಗಳ ಮೂಲಕ ಜಾಥಾ ಹಮ್ಮಿಕೊಳ್ಳಲಾಯಿತು.
ಎಸ ಎಸ್ ಸಂಪಗಾವಿ ತಾಲೂಕಾ ಸ್ವೀಪ್ ಸಮೀತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಬೈಲಹೊಂಗಲ ರವರು ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಮೇ ೧೦-೨೦೨೩ ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ವಿಶೇಷ ಚೇತನರು ಪಾಲ್ಗೊಳ್ಳಬೇಕು ತಮಗೆಲ್ಲರಿಗೂ ಮತದಾನ ಮಾಡಲು ಸರ್ಕಾರದ ಎಲ್ಲಾ ತರಹದ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕರಾದ (ಗ್ರಾ.ಉ) ವಿಜಯ ಪಾಟೀಲ, ಸಹಾಯಕ ನಿರ್ದೇಶಕರಾದ (ಪಂ.ರಾಜ್) ರಘು ಬಿ ಎನ್, ಬೆಳಗಾವಿ ತಾಪಂ ಸಹಾಯಕ ನಿರ್ದೇಶಕರಾದ ಗಣೇಶ, ತಾಪಂ ವ್ಯವಸ್ಥಾಪಕರಾದ ಎಮ್ ಎ ಇಂಚಲಮಠ, ತಾಪಂ ಐಇಸಿ ಎಸ್ ವ್ಹಿ ಹಿರೇಮಠ ಚುನಾವಣೆ ನೋಡಲ್ ಅಧಿಕಾರಿ ಎಸ್ ಬಿ ಸಂಗನಗೌಡರ ತಾಂತ್ರಿಕ ಸಹಾಯಕ ನಾಗರಾಜ್ ಕಾಗತಿ, ತಾಲೂಕಾ ಎಮ್ ಆರ್ ಡಬ್ಲÆ್ಯ ಸಂಯೋಜಕ ರಾದ ಫಕ್ಕಿರಗೌಡ ಪಾಟೀಲ ಹಾಗೂ ತಾಲೂಕಿನ ಎಲ್ಲಾ ಗ್ರಾಮೀಣ ಪುನರವಸತಿ ಕಾರ್ಯಕರ್ತರು ಮತ್ತು ವಿಶೇಷ ಚೇತನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Gadi Kannadiga > Local News > ವಿಶೇಷ ಚೇತನರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಿ
ವಿಶೇಷ ಚೇತನರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಿ
Suresh21/04/2023
posted on
