This is the title of the web page
This is the title of the web page

Please assign a menu to the primary menu location under menu

Local News

ಲಕ್ಷಿ÷್ಮÃ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಕುಟುಂಬ ಸಮೇತ ಮತದಾನ


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್ ಅವರು ಕುಟುಂಬ ಸಮೇತ ಬಂದು ವಿಜಯನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಈ ವೇಳೆ ಮಾತನಾಡಿದ ಲಕ್ಷಿ÷್ಮÃ ಹೆಬ್ಬಾಳಕರ, “ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಮತದಾನದ ಹಕ್ಕನ್ನು ಚಲಾಯಿಸಿದ್ದೇನೆ. ಕ್ಷೇತ್ರದ ಎಲ್ಲ ಗುರುಹಿರಿಯರು, ತಾಯಿಯ ಆಶೀರ್ವಾದ ಪಡೆದು ಮತ ಚಲಾವಣೆ ಮಾಡಿದ್ದೇನೆ. ತುಂಬ ಖುಷಿ, ನೆಮ್ಮದಿ, ಅಭಿಮಾನದಿಂದ ಮತ ಹಾಕಿದ್ದೇನೆ. ಕಳೆದ ಬಾರಿ ಕೆಲವಷ್ಟು ಒತ್ತಡಗಳಿದ್ದವು. ಈ ಬಾರಿ ತುಂಬ ಆತ್ಮವಿಶ್ವಾಸದಿಂದ ಮತ ಚಲಾವಣೆ ಮಾಡಿದ್ದೇನೆ. ಕುಟುಂಬದ ಎಲ್ಲ ಸದಸ್ಯರು ನನ್ನ ಬೆ£್ನಗೆ £ಂತು ಆಶೀರ್ವಾದ, ಮಾರ್ಗದರ್ಶನ ಮಾಡಿದ್ದಾರೆ. ಇದು ನನ್ನ ಜೀವನದ ಮಹತ್ವದ ಘಟ್ಟ” ಎಂದರು.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ನನ್ನನ್ನು ನನ್ನ ಮತದಾರರು ಗೆಲ್ಲಿಸುತ್ತಾರೆ. ನಾನು ಯಾರಿಗೂ ಅಪಮಾನ ಮಾಡುವುದಿಲ್ಲ. ಕೇವಲ ವಿಜಯದ ಬಗ್ಗೆ ಅಷ್ಟೇ ಮಾತನಾಡುತ್ತೇನೆ. ಕಳೆದ ಬಾರಿಗಿಂತ ಒಂದು ಮತವಾದರೂ ಹೆಚ್ಚು ಪಡೆದು ಗೆಲ್ಲುತ್ತೇನೆ. ಕಣದಲ್ಲಿರುವ ಎಲ್ಲರೂ ನನ್ನ ಪ್ರತಿಸ್ಪರ್ಧಿಗಳು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ನಮಗೆ ವಿಶ್ವಾಸವಿದೆ. ಕರ್ನಾಟಕದ ಜನತೆ ಖಂಡಿತವಾಗಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ” ಎಂದರು.
ಸಚಿವ ಸ್ಥಾನ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷಿ÷್ಮÃ ಹೆಬ್ಬಾಳಕರ, “ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಖಂಡಿತವಾಗಿಯೂ ಸಚಿವ ಸ್ಥಾನ ದೊರೆಯುವ ವಿಶ್ವಾಸ ನನಗಿದೆ” ಎಂದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು., ಮೃಣಾಲ್ ಹೆಬ್ಬಾಳಕರ್ ಕೂಡ ಬೆಳಗಾವಿಯಲ್ಲಿ ಮತದಾನ ಮಾಡಿದರು. ಚನ್ನರಾಜ ಮೋದಗಾದಲ್ಲಿ ಮತದಾನ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೋದಗಾದಲ್ಲಿ ಮತದಾನ ಮಾಡಿದರು.


Leave a Reply