ಗಡಿ ಕನ್ನಡಿಗ
ಖಾನಾಪುರ:ಹಿಂದಿನ ಕಾಲದಲ್ಲಿ ರಸ್ತೆಯಲ್ಲಿ ಸಂಚರಿಸುವ ದಾರಿಹೋಕರ ನೆರಳು ಮತ್ತು ಪ್ರಾಣಿ ಪಕ್ಷಗಳ ಆಹಾರಕ್ಕೆ ಒಂದಷ್ಟು ಹಣ್ಣು ಹಂಪಲು ಸಿಗಲಿ ಎಂದು ಬೆಳೆಸಿರುವ ಸಾಲು ಮರಗಳು ಇಂದು ಯಮ ಕಿಂಕರರಾಗಿ ಕಾಡತೊಡಗಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಓಡಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಖಾನಾಪುರದಿಂದ ಬೆಳಗಾವಿ ಮುಖ್ಯ ರಸ್ತೆಯ ಭವಾನಿ ಹೊಟೇಲ್ ಎದುರುಗಡೆ ಇರುವ ಮರವೊಂದು ಜೀವ ತೆಗೆಯಲು ಕಾದು ಕುಳಿತಿದೆ ಎಂದರೆ ತಪ್ಪಾಗಲಾರದು ಮರದ ಬುಡ ಸಂಪೂರ್ಣವಾಗಿ ಕೊಳೆತುಹೋಗಿ ಮರದ ದೊಡ್ಡ ಕೊಂಬೆಗಳು ಅಪಾಯದ ಮುನ್ಸೂಚನೆ ಹೊತ್ತು ನಿಂತಿದೆ.
ರಸ್ತೆ ಬದಿಯಿರುವ ಮರಗಳ ನಿರ್ವಹಣೆಯ ಜವಾಬ್ದಾರಿಯು ಸಾಮಾಜಿಕ ಅರಣ್ಯ ವಿಭಾಗಕ್ಕೆ ಬರುತ್ತದೆ ರಸ್ತೆಯ ಇಕ್ಕೆಲಗಳಲ್ಲಿ ಸಸಿ ನೆಟ್ಟು ಪಾಲನೆ, ಪೋಷಣೆ ಮಾಡುವುದು, ಒಣಗಿದ ಮರಗಳನ್ನು ತೆರವುಗೊಳಿಸಬೇಕಾದ ಜವಾಬ್ದಾರಿ ಸಾಮಾಜಿಕ ಅರಣ್ಯ ವಿಭಾದ ವ್ಯಾಪ್ತಿಯಲ್ಲಿ ಬರುತ್ತದೆಯಾದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮರಗ ಒಣಗಿ ನಿಂತಿದ್ದರೂ ಕೂಡಾ ಅದನ್ನು ತೆರವುಗೊಳಿಸುತ್ತಿಲ್ಲ.
ಈ ಕುರಿತು ಸಾಮಾಜಿಕ ಹೋರಾಟಗಾರ ರಾಜು ಖಾತೇದಾರ ಹಲವಾರು ಬಾರಿ ಲೋಕೋಪಯೋಗಿ ಇಲಾಖೆ,ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಗೆ ಒತ್ತಾಯಿಸಿದರೂ ಸಹಾ ಅಧಿಕಾರಿಗಳು ಇತ್ತ ಗಮನ ಹರಿಸದೆ ಉದ್ದಟತನ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಕ್ಸ್: ರಸ್ತೆಯ ಪಕ್ಕದಲಿರುವ ಬೀಳುವ ಹಂತದಲ್ಲಿರುವ ಮರವನ್ನ ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ,ಲೋಕೋಪಯೋಗಿ ಇಲಾಖೆ,ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಪೋನ್ ಮಾಡಿ ಮನವಿ ಮಾಡಿದರೂ ನಮ್ಮ ಮನವಿಗೆ ಸ್ಪಂಧಿಸಿಲ್ಲ ಒಣಗಿದ ಮರಗಳು ವಾಹನ ಸವಾರರ ಮೇಲೆ ಬಿದ್ದು ಅನಾಹುತ ಸಂಭವಿಸಿದರೆ ಹೊಣೆ ಹೊರುವುದು ಯಾರು.
ರಾಜು ಖಾತೇದಾರ,ಅಧ್ಯಕ್ಷರು ಗಡಿನಾಡು ಹಿತರಕ್ಷಣಾ ವೇದಿಕೆ ಖಾನಾಪುರ