This is the title of the web page
This is the title of the web page

Please assign a menu to the primary menu location under menu

Local News

ಕಲಿಕಾ ಸಮಾಗ್ರಿಗಳ ಮೂಲಕ ಬೋಧನಾ ವಿಧಾನವು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಕುತೂಹಲ ಹೆಚ್ಚಿಸಲು ಸಹಕಾರಿ: ವಾಲ್ಟರ್ ಡಿ’ಮೆಲೊ ್ಲ


ಬೆಳಗಾವಿ: ಫೆ.೦೭ : ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುವಲ್ಲಿ, ತಾರ್ಕಿಕತೆ, ಸೃಜನ ಶೀಲತೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಂಪ್ರದಾಯಿಕ ಪದ್ದತಿಯಿಂದ ಅಥವಾ ಕೇವಲ ಬೋಧನಾ ವಿಧಾನದಿಂದ ವಿಜ್ಞಾನವನನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲಾ, ಯಾವುದೇ ವೈಜ್ಞಾನಿಕ ಪ್ರಕ್ರಿಯೆಯ ಪರಿಕಲ್ಪನೆಯನ್ನು ಸುಲಭವಾಗಿ ಅರ್ಥಮಾಡಿಸಿಕೊಳ್ಳಲು ಶಿಕ್ಷಕರಿಗೆ ಬೋಧನಾ ಸಾಮಗ್ರಿಗಳು ಬಹಳ ಉಪಯೋಗಕ್ಕೆ ಬರುತ್ತದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವಾಲ್ಟರ್ ಹೆಚ್. ಡಿ’ಮೆಲ್ಲೊ ಅವರು ತಿಳಿಸಿದರು.
ಸ್ಥಳೀಯ ಸೇವಕ ಸಂಸ್ಥೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಇವರ ಸಹಯೋಗದೊಂದಿಗೆ ಮಹಾಂತೇಶ ನಗರದ ಮಹಾಂತ ಭವನದಲ್ಲಿ ವಿಜ್ಷಾನ ಶಿಕ್ಷಕರು ಹಾಗೂ ಶಿಕ್ಷಣ ಪ್ರಶಿಕ್ಷಕರುಗಳಿಗೆ ಆಯೋಜಿಸಿದ್ದ ಮೂರು ದಿನಗಳ “ಕಡಿಮೆ ವೆಚ್ಚದ ಶಿಕ್ಷಣ ಸಾಮಾಗ್ರಿಗಳ ತಯಾರಿಕೆ ಮೂಲಕ ವಿಜ್ಷಾನ ಸಂವಹನ ಕಾರ್ಯಾಗಾರ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಶಿಕ್ಷಣಕ್ಕೆ ದುಬಾರಿ ಬೋಧನಾ ಸಾಮಾಗ್ರಿಗಳ ಆವಶ್ಯಕತೆ ಇಲ್ಲದೇ ಸ್ಥಳೀಯವಾಗಿ ದೊರಕುವ ವಸ್ತುಗಳಿಂದಲೇ ಶಿಕ್ಷಣ ಪರಿಕರಗಳನ್ನು ತಯಾರಿಸಿ ಪರಿಣಾಮಕಾರಿಯಾಗಿ ವಿಜ್ಞಾನವನ್ನು ಬೋಧಿಸಲು ಸಾಧ್ಯವಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
. ಸಾಂಪ್ರದಾಯಿಕ ಬೋಧನೆ ಹಾಗೂ ಕಲಿಕಾ ವಿಧಾನಗಳು ನವೀನ, ಸೃಜನಶೀಲ ಹಾಗೂ ಸಮರ್ಥ ಶಿಕ್ಷಣ ವಿಧಾನಗಳಿಗೆ ವೇಗವಾಗಿ ದಾರಿ ಮಾಡಿಕೊಡುತ್ತಿವೆ.
ಕೇವಲ ಸೀಮೆ ಸುಣ್ಣದೊಂದಿಗೆ ಸಾಂಪ್ರದಾಯಿಕ ಬೋಧನಾ ಪದ್ದತಿ ಸಂಪೂರ್ಣವಾಗಿ ಅನಗತ್ಯವಲ್ಲದಿದ್ದರೂ, ಸಮಕಾಲೀನ ಶೈಕ್ಷಣಿಕ ದೃಷ್ಠಿಯಲ್ಲಿ ಅಸಮರ್ಪಕವೆಂದು ಪರಿಗಣಿಸಲ್ಪಡುತ್ತಿದೆ. ಬೋಧನೆ-ಕಲಿಕೆ ಪ್ರಕ್ರಿಯೆಗಳನ್ನು ಹೆಚ್ಚು ಆಸಕ್ತಿಕರ ಮತ್ತು ಪರಿಣಾಮಕಾರಿಯಾಗಿ ಮಾಡಲು ವಿಶ್ವಾದಾದ್ಯಂತ ಶಿಕ್ಷಕರು ಹೊಸ ಬೋಧನಾ ಸಾಧನಗಳನ್ನು ಆವಿಷ್ಕರಿಸುತ್ತಿದ್ದಾರೆ.
ಕಲಿಕಾ ಪರಿಸರವು ಉತ್ತೇಜಕ ಮತ್ತು ಸಕ್ರಿಯವಾಗಿದ್ದಾಗ ಕಲಿಕೆ ನಡೆಯುತ್ತದೆ. ಶಿಕ್ಷಣ ಪದ್ದತಿಯಲ್ಲಿ ಕಲಿಕಾ ಸಾಮಗ್ರಿಗಳನ್ನು ತಯಾರಿಸುವುದು ಮತ್ತು ಬಳಸುವುದು ಬೋಧನೆಯ ಪ್ರಮುಖ ಭಾಗವಾಗಿರುವುದರಿಂದ ಶಿಕ್ಷಣ ಸಾಮಾಗ್ರಿಗಳ ತಯಾರಿಕೆ ಮೂಲಕ ವಿಜ್ಷಾನ ಸಂವಹನ ಕಾರ್ಯಾಗಾರದ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಮುಖ್ಯ ಅಥಿತಿಗಳಾಗಿ ರಾಣಿ ಚನ್ನಮ್ಮ ವಿಶ್ವವಿಧ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯರಾದ ಡಾ. ಎಸ್. ಬಿ. ಸೋಮಣ್ಣವರ ಇವರು ತಮ್ಮ ಭೊದನಾ ವೃತ್ತಿಯ ಅನುಭವಗಳನ್ನು ಹಂಚಿಕೊಂಡು ಶಿಕ್ಷಣದಲ್ಲಿ ಸೃಜನಶೀಲ ಬೋಧನಾ ಕ್ರಮ ಹಾಗೂ ಗುರುವಿನ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ನಿರ್ಮಲಾ ಬಟ್ಟಲ ಅವರು ಒಬ್ಬ ಶಿಕ್ಷಕ ಒಳ್ಳೆಯ ಪಾಠಕ್ಕಿಂತ ಪರಿಣಾಮಕಾರಿ ಪಾಠ ಮಾಡುವಂತಿರಬೇಕು ಅಲ್ಲದೇ ಈಗಿನ ಪರಿಸರದಲ್ಲಿ ಶಿಕ್ಷಕ ಭೋದಕನಾಗಿರದೆ ಫೆಸಿಲಿಟೇಟರ್‌ನಾಗಿರಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಣ ಪ್ರಶಿಕ್ಷಕರಿಗೆ ಸೇವೆಕ ಸಂಸ್ಥೆಯು ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ ಎಂದು ಶ್ಲಾಘಿಸಿದರು.
ಸೇವಕ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪ್ರಧಾನ ಪರಿವೀಕ್ಷಕರಾದ ಆನಂದ ಲೋಬೊ ಇವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉದ್ದೇಶಗಳು, ಸಂಸ್ಥೆಯ ಕಾರ್ಯಚಟುವಟಿಕೆಗಳು ಹಾಗೂ ಕಾರ್ಯಾಗಾರ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಸೇವಕ ಸಂಸ್ಥೆಯ ಸದಸ್ಯೆ ಹಾಗೂ ನ್ಯಾಯವಾದಿ ಪ್ರತಿಮಾ ಜೋಶಿ, ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯ ಭರ್ಮಾ ಗುಂಡುಕೇರಿ, ಸೇವಕ ಸಂಸ್ಥೆಯ ಸಿಬಂದಿಗಲು, ಪದಾಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಬೋಧಕರು ಹಾಗೂ ಶಿಕ್ಷಣ ಪ್ರಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.


Leave a Reply