This is the title of the web page
This is the title of the web page

Please assign a menu to the primary menu location under menu

Local News

ಎಚ್ಚರಿಕೆ: ದಾಂಡಿಯಾ ಆಡುವವರು ಈ ಸುದ್ದಿ ಓದಿ


ಬೆಳಗಾವಿ: ದಸರಾ ನಿಮಿತ್ಯ ಹಮ್ಮಿಕೊಳ್ಳುವ ದಾಂಡಿಯಾ ಆಟದಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾರಾದರೂ ಕಾನೂನು ವ್ಯವಸ್ಥೆ ಹದಿಗೆಡಿಸಿದರೆ ಕಠೀಣ ಕ್ರಮ ಜರುಗಿಸಲಾಗುತ್ತದೆ ಎಂದು ಬೆಳಗಾವಿಯ ಮಾರ್ಕೆಟ್ ಠಾಣೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ದಸರಾ ಹಬ್ಬದ ಗುರುವಾರ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ದಸರಾ ಹಬ್ಬ ಸಮೀಪಿಸುತ್ತಿದ್ದು ಒಂಬತ್ತು ದಿನಗಳ ಕಾಲ ಹಮ್ಮಿಕೊಳ್ಳುವ ದಾಂಡಿಯಾ ಆಟದಲ್ಲಿ ಶಾಂತಿ ಸುವ್ಯವಸ್ಥೆತೆಯನ್ನು ಕಾಪಾಡಿಕೊಳ್ಳಬೇಕು ಎಂದು ಆಯೋಜಕರಿಗೆ ಸಲಹೇ ನೀಡಿದ ಅವರು ರಾತ್ರಿ 10 ಗಂಟೆ ನಂತರ ಧ್ವನಿವರ್ಧಕಗಳನ್ನು ಬಳಕೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದರು.

ವಸತಿಪ್ರದೇಶದಗಳಲ್ಲಿ ಕಡಿಮೆ ಸೌಂಡ ಇಟ್ಟು ದಾಂಡಿಯಾ ಆಡಬೇಕು. ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಆಯೋಜಕರು ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುಂಜಾಗೃತ ಕ್ರಮ ಕೈಗೊಳ್ಲಬೇಕು ಎಂದು ಹೇಳಿದರು.


Gadi Kannadiga

Leave a Reply