This is the title of the web page
This is the title of the web page

Please assign a menu to the primary menu location under menu

Local News

ಚುನಾವಣೇ ಗೆಲ್ಲಲು ನಾವು ಕಾಂಗ್ರೆಸ್ ನಂತೆ ಲ್ಯಾಪಟಾಪ್ ಹಂಚುತ್ತಿಲ್ಲ: ಸಂಜಯ ಪಾಟೀಲ್


ಬೆಳಗಾವಿ: ಶಿಕ್ಷಣ ಕ್ಷೇತ್ರದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಲ್ಯಾಪಟಾಪ್ ಹಂಚಲು ಮುಂದಾಗಿದೆ ಹಂಚಿ ಗೆಲ್ಲುವುದು ಗೆಲುವಲ್ಲ ಕೆಲಸ ಮಾಡಿ ಮತ ಪಡೆದು ಗೆಲ್ಲುವುದು ನಿಜವಾದ ಗೆಲವು ಎಂದು ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಚಯ ಪಾಟೀಲ್ ಕಾಂಗ್ರೆಸ್ ಪಕ್ಷದ ಕಾಲೇಳೆದಿದ್ದಾರೆ.

ಬೆಳಗಾವಿ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲ ಮಾತನಾಡಿದ ಅವರು ಮೇ.26ರಂದು ವಿಧಾನ ಪರಿಷತ್ ಚುನಾವಣೆಗೆ ಅರುಣ ಶಹಪುರ ಮತ್ತು ಹಣಮಂತ ನಿರಾಣಿ ಅವರು ನಾಮಪತ್ರ ಸಲ್ಲಿಸಲಿದ್ದು ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೇರಿದಂತೆ ಶಾಸಕರು ಮತ್ತು ಸಚೀವರು ಸೇರಿದಂತೆ ಎಲ್ಲ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ನಾಮಪತ್ರ ಸಲ್ಲಿಕೆ ವೇಳೆ ಶಕ್ತಿ ಪ್ರದರ್ಶನ ಮಾಡಲಿದ್ದಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಶಿಕ್ಷಣ ಕ್ಷೇತ್ರದ ಚುನಾವಣೆಯಾದ್ದರಿಂದ ಶಕ್ತಿಪ್ರದರ್ಶನ ಮಾಡುವುದಿಲ್ಲ ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷ ಶಕ್ತಿಪ್ರದರ್ಶನ ಮಾಡುವುದು ಅವರ ಪಕ್ಷಕ್ಕೆ ಸಂಭಂಧಿಸಿದ ವಿಚಾರ ಚುನಾವಣೆ ಗೆಲ್ಲಲು ನಾವು ಅವರಂತೆ ಲ್ಯಾಪಟಾಪ್ ಹಂಚಿಕೆ ಮಾಡುತ್ತಿಲ್ಲ. ಅವರು ನಿಜವಾಗಲೂ ಇಳ್ಳೆಯವರಾಗಿದ್ದರೆ ಏನನ್ನೂ ಹಂಚುವ ಅವಶ್ಯಕತೆ ಇರಲಿಲ್ಲ ಮತದಾರರಿಗೆ ಹಂಚಿಕೆ ಮಾಡಿ ಗೆಲ್ಲುವುದು ನಿಜವಾದ ಗೆಲುವಲ್ಲ ಕೆಲಸ ಮಾಡಿ ಮತ ಪಡೆದು ಗೆಲ್ಲುವುದು ನಿಜವಾದ ಗೆಲುವು ಎಂದರು.

ಈ ಸಂದರ್ಭದಲ್ಲಿ ಎಂ.ಎಲ್.ಸಿ ಪುಟ್ಟಣ್ಣ, ಮಹಾಂತೇಶ ಕವಟಗಿಮಠ, ಅರುಣ ಶಹಪುರ ಸೇರಿದಂತೆ ಇನ್ನಿತರರು ಸುದ್ದೀಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು


Gadi Kannadiga

Leave a Reply