ಬೆಳಗಾವಿ: ಹೊಸ ಶಿಕ್ಷಣ ನೀತಿಯ ತಾತ್ಕಾಲಿಕವಾದ ಕೋರ್ಸ್ಗಳಿಗೆ ನಿರ್ಧಾರಿತ ಉದ್ಯೋಗ ಕ್ಷೇತ್ರವು ಸ್ಪಷ್ಟವಾಗಿಲ್ಲ. ಆದುದರಿಂದ ಈ ನೀತಿಯ ಹಲವು ಕೋರ್ಸ್ಗಳು ಕಲಿಕೆಯ ಅನುಭವವೂ ಇಲ್ಲದೇ ಕೌಶಲ್ಯದ ಪೂರ್ಣತೆಯೂ ಇಲ್ಲದೇ ವ್ಯರ್ಥವಾಗುವ ಸಾಧ್ಯತೆಗಳಿವೆ. ಅದಕ್ಕಾಗಿ ವೈಜ್ಞಾನಿಕ ನೆಲೆಯಿಂದ ಶೈಕ್ಷಣಿಕ ಮಾದರಿಗಳು ಸಿದ್ಧಗೊಳ್ಳಬೇಕಾದ ಅಗತ್ಯವಿದೆ. ಆದುದರಿಂದ ಪ್ರಯೋಗಶೀಲ ವಿಜ್ಞಾನ ಶಿಕ್ಷಣದ ಎಲ್ಲ ರಂಗಗಳಲ್ಲಿ ಬರಬೇಕಾಗಿದೆ, ಸಂವಾದೀ ಶಿಕ್ಷಣದ ಮೂಲಕ ಜ್ಞಾನ ರಚನಾವಾದ ನಿರ್ಮಾಣವಾಗಬೇಕಾಗಿದೆ ಎಂದು ಪುಣೆಯ ಭಾರತಿ ವಿದ್ಯಾಪೀಠ ಸ್ವಾಯುತ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಸನ್ಮಾನ್ಯ ಪ್ರೊ. ಡಾ. ಮಾನಿಕರಾವ್ ಎಮ್. ಸಾಳುಂಕೆ ಅವರು ಮಾತನಾಡಿದರು. ಇಂದು ದಿನಾಂಕ ೭ ಅಗಸ್ಟ, ೨೦೨೩ ರಂದು ಜರುಗಿದ ಬೆಳಗಾವಿಯ ಪ್ರತಿಷ್ಠಿತ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಸಾವಂತವಾಡಿಯ ರಾಜಮಾತಾ ರಾಣಿ ಪಾರ್ವತಿದೇವಿ ಅವರ ಮೊಮ್ಮಗ ಶ್ರೀ ಶ್ರೀಮಂತ ಖೇಮರಾಜ ಸಾವಂತ ಭೋಸ್ಲೆ ಅವರು ರಾಣಿ ಪಾರ್ವತಿ ದೇವಿ ಅವರ ಜೀವನ ಸಾಧನೆಯನ್ನು ವಿವರಿಸುತ್ತಾ ವಿಶೇಷವಾಗಿ ಹೆಣ್ಣು ಮಕ್ಕಳಿಗೆ, ಬಡವರಿಗೆ ಶಿಕ್ಷಣ ನೀಡುವ ಕಾಳಜಿಯನ್ನು ತೋರಿ ಸಮಾಜದ ಅಭಿವೃದ್ಧಿಗೆ ಕಾರಣರಾದರು ಎಂದು ನುಡಿದರು.
ಸಮಾರಂಭದ ಅಧಕ್ಷತೆ ವಹಿಸಿದ್ದ ಎಸ್.ಕೆ.ಇ. ಸಂಸ್ಥೆಯ ಚೇರಮನ್‌ರಾದ ಸನ್ಮಾನ್ಯ ಶ್ರೀ ಕಿರಣ ಠಾಕೂರ ಅವರು ಈ ಸಂಸ್ಥೆಯು ತನ್ನ ೮೦ ವರ್ಷಗಳ ಅವಧಿಯಲ್ಲಿ ಐದು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ಸ್ವಾತಂತ್ರö್ಯಕ್ಕೆ ಹೋರಾಡಿದ, ಶ್ರೀ ಅಣ್ಣಾ ಸಾಹೇಬ ಲಠ್ಠೆ, ಡಾ. ಜಿ. ವಿ. ಹೇರೇಕರ, ಶ್ರೀ ಬಾಬುರಾವ ಠಾಕೂರ, ಶ್ರೀ ವಿ. ವಿ. ಹೇರವಾಡಕರ, ಡಾ. ವಾಯ್. ಕೆ. ಪ್ರಭು ಮಹನೀಯರು ಈ ಸಂಸ್ಥೆಯ ಮೂಲಕ ಶಿಕ್ಷಣ ಸೇವೆ ಗೈದಿದ್ದಾರೆ. ಶ್ರೀ ಗಂಗಾಧರರಾವ್ ದೇಶಪಾಂಡೆ ಮೊದಲಾದ ಮಹನೀಯರು ಶಿಕ್ಷಣಕ್ಕೆ ಪೂರಕವಾಗಿ ಸೇವೆ ಗೈದಿದ್ದಾರೆ. ಆದುದರಿಂದ ಪಾರದರ್ಶಕ ಸೇವೆಗೆ ಸಂಸ್ಥೆಯು ಹೆಸರುವಾಸಿಯಾಗಿದೆ ಎಂದು ನುಡಿದರು. ವೇದಿಕೆಯ ಮೇಲೆ ಎಸ್. ಕೆ. ಇ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ. ಎಲ್. ಅಜಗಾಂವಕರ ಅವರು ಗೌರವ ಕಾರ್ಯದರ್ಶಿಗಳಾದ ಶ್ರೀ ಮಧುಕರ ಸಾವಂತ ಮತ್ತು ಶ್ರೀ ಆರ್. ಬಿ. ದೇಶಪಾಂಡೆ ಅವರು ಉಪಸ್ಥಿತರಿದ್ದರು.
ಆರ್. ಪಿ. ಡಿ ಮಹಾವಿದ್ಯಾಲಯವು ಆಯೋಜಿಸಿದ ಈ ಸಮಾರಂಭದಲ್ಲಿ ಕುಮಾರಿ ನೂಪುರ ರಾನಡೆ ಪ್ರಾರ್ಥನೆ ಸಲ್ಲಿಸಿದಳು. ಪ್ರಾಚಾರ್ಯರಾದ ಡಾ. ಎ. ಎಮ್. ಪಾಟೀಲ ಅವರು ಸ್ವಾಗತಿಸಿದರು. ಶ್ರೀಮತಿ ಮಾಧುರಿ ಶಾನಭಾಗ ಅವರು ಸಂಸ್ಥೆಯ ಸಾಧನೆಯನ್ನು ವಿವರಿಸಿದರು. ಪ್ರೊ. ಪ್ರಸನ್ನ ಜೋಶಿ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ಶರಯೂ ಪೋತ್ನೀಸ್ ಹಾಗೂ ಡಾ. ಶರ್ಮಿಳಾ ಸಂಭಾಜಿ ಅವರು ಕರ‍್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರೊ. ಎಸ್. ಎಸ್. ಸಿಮ್ಮನಗೌಡರ ವಂದಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಎಸ್. ಕೆ. ಇ ಸಂಸ್ಥೆಯ ಎಲ್ಲ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರ ಗೀತೆಯೊಂದಿಗೆ ಕರ‍್ಯಕ್ರಮ ಮುಕ್ತಾಯಗೊಂಡಿತು.
Gadi Kannadiga > Local News > ಪ್ರಯೋಗಶೀಲ ವಿಜ್ಞಾನ ನಮಗಿಂದು ಬೇಕಾಗಿದೆ: ಪ್ರೊ. ಡಾ. ಮಾನಿಕರಾವ್ ಸಾಳುಂಕೆ
ಪ್ರಯೋಗಶೀಲ ವಿಜ್ಞಾನ ನಮಗಿಂದು ಬೇಕಾಗಿದೆ: ಪ್ರೊ. ಡಾ. ಮಾನಿಕರಾವ್ ಸಾಳುಂಕೆ
Suresh08/08/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023